Advertisement

ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವ: ಕಂದಕೂರು ಗ್ರಾಮದ ಭಕ್ತರಿಂದ 3 ಕ್ವಿಂಟಲ್ ಕರದಂಟು ಸೇವೆ

02:00 PM Jan 27, 2024 | Team Udayavani |

ಕುಷ್ಟಗಿ: ಕೊಪ್ಪಳದಲ್ಲಿ ಶನಿವಾರ ನಡೆಯಲಿರುವ ದಕ್ಷಿಣ ಭಾರತದ ಕುಂಭ ಮೇಳ ಎಂದೇ ಪ್ರಸಿದ್ದ ಜಾತ್ರಾ ಮಹೋತ್ಸವದ ಮಹಾ ದಾಸೋಹಕ್ಕೆ ಕಂದಕೂರು ಗ್ರಾಮದ ಭಕ್ತಾದಿಗಳು 3 ಕ್ವಿಂಟಲ್ ಕರದಂಟು ಸೇವೆ ನೀಡಿದ್ದಾರೆ.

Advertisement

ಕೊಪ್ಪಳ ಶ್ರೀ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವ ಗುರುವಾರದಿಂದ ಆರಂಭಗೊಂಡಿದೆ. ಜಾತ್ರೆಗೆ ಲಕ್ಷಾಂತರ ಭಕ್ತರು ಸೇರುವ ಮಹಾಜಾತ್ರೆಗೆ ಕಂದಕೂರು ಭಕ್ತಾದಿಗಳು ಈ ಬಾರಿಯ ವಿಶೇಷವಾಗಿ 3 ಕ್ವಿಂಟಲ್ ಕರದಂಟು ಮಾಡಿಸಿದ್ದಾರೆ. ಕರದಂಟು ಸಿಹಿಗೆ 1 ಕ್ವಿಂಟಲ್ ಪುಠಾಣಿ ಹಿಟ್ಟು 2 ಕ್ವಿಂಟಲ್ ಸಕ್ಕರೆ ಸೇರಿದಂತೆ ಗೋಡಂಬಿ, ಒಣ ಧ್ರಾಕ್ಷಿ, ಪಿಸ್ತಾ, ಗಸಗಸಿ, ಒಣ ಕೊಬ್ಬರಿ, ಏಲಕ್ಜಿ, ಲವಂಗಾ ಸೇರಿಸಿ ಸ್ವಾಧೀಷ್ಟ ಕರದಂಟು ತಯಾರಿಸಿದ್ದಾರೆ. ನಂತರ ವಾಹನದಲ್ಲಿ ಮೆರವಣಿಗೆಯಲ್ಲಿ ಕೊಂಡೊಯ್ದು ಕೊಪ್ಪಳ ಗವಿಮಠದ ಮಹಾದಾಸೋಹಕ್ಕೆ ಸಮರ್ಪಿಸಿ ಭಕ್ತಿ ಸೇವೆ ಮೆರೆದಿದ್ದಾರೆ. ಕೆಲವು ದಿನಗಳ ಹಿಂದೆ ಕಂದಕೂರು ಗ್ರಾಮದ ಭಕ್ತರು 10 ಸಾವಿರ ರೊಟ್ಟಿ, 5 ಕ್ವಿಂಟಲ್ ಮಾದಲಿ ಸಿಹಿ ತಯಾರಿಸಿ ಶ್ರೀ ಮಠಕ್ಕೆ ತಲುಪಿಸಿದ್ದರು.

ಇದನ್ನೂ ಓದಿ: Black Flag: SFI ಕಾರ್ಯಕರ್ತರ ಬಂಧನಕ್ಕೆ ಒತ್ತಾಯಿಸಿ ರಸ್ತೆ ಬದಿ ಧರಣಿ ಕೂತ ರಾಜ್ಯಪಾಲರು

Advertisement

Udayavani is now on Telegram. Click here to join our channel and stay updated with the latest news.

Next