Advertisement

ಕೋವಿಡ್‌ ನಿಂದ ಮೃತಪಟ್ಟವರ ಕುಟುಂಬಗಳಿಗೆ ಪರಿಶೀಲನೆ ಬಳಿಕ ಹಣ ಬಿಡುಗಡೆ : ಜಿಲ್ಲಾಧಿಕಾರಿ

03:51 PM Jun 14, 2022 | Team Udayavani |

ದೋಟಿಹಾಳ: ತಾಲೂಕಿನ 72 ಜನ ಕೊರೋನಾದಿಂದ ಮೃತ ಕುಟುಂಬಗಳಿಗೆ ಪರಿಶೀಲನೆ ಬಳಿಕ ಪರಿಹಾರ ಬಿಡುಗಡೆಗೆ ಮಾಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ಸುರಳ್ಕರ್ ವಿಕಾಸ ಕಿಶೋರ್ ತಿಳಿಸಿದರು.

Advertisement

ಜಿಲ್ಲೆಯ ಕುಷ್ಟಗಿ ತಹಸೀಲ್ದಾರ ಕಚೇರಿಗೆ ಭೇಟಿ ನೀಡಿದ ಬಳಿಕ ಸುದ್ದಿಗಾರರ ಪ್ರಶ್ನೆಗೆ ಜಿಲ್ಲಾಧಿಕಾರಿಗಳು ಮಾತನಾಡಿ, ತಾಲೂಕಿನಲ್ಲಿ 2020-2021 ರಲ್ಲಿ ಒಟ್ಟು ಕೊರೋನಾದಿಂದ 112 ಜನರು ಮತಪಟ್ಟಿದ್ದಾರೆ. ಇದರಲ್ಲಿ ಕೇವಲ 42 ಜನ ಮೃತ ಕುಟುಂಬಗಳಿಗೆ ಮಾತ್ರ ಪರಿಹಾರವಾಗಿ 1.5 ಲಕ್ಷ ರೂ,ಹಣ ಬಿಡುಗಡೆಯಾಗಿದೆ ಎಂದರು.

ಉಳಿದ 70 ಮೃತ ಕುಟುಂಬಗಳಿಗೆ ಪರಿಹಾರ ವಿತರಣೆಯಾಗಿಲ್ಲವೆಂಬ ಪತ್ರಕರ್ತರ ಪ್ರಶ್ನೆಗೆ ಜಿಲ್ಲಾಧಿಕಾರಿಗಳು ಉತ್ತರಿಸಿದರು, ಮೊದಲ ಹಂತದಲ್ಲಿ ಮೃತ ಕುಟುಂಬಗಳಿಗೆ ರಾಜ್ಯ ಸರಕಾರದ 1 ಲಕ್ಷ ರೂಪಾಯಿಗಳು ಹಾಗೂ ಕೇಂದ್ರ ಸರಕಾರ 50 ಸಾವಿರಗಳನ್ನು ಪರಿಹಾರವಾ ಹಣವನ್ನು ವಿತರಿಸಲಾಗಿದೆ. ಆದರೆ, ಎರಡನೇ ಹಂತವಾಗಿ ವಿತರಿಸಬೇಕಾದ ಪರಿಹಾರಕ್ಕಾಗಿ ಇತರೆ ಕಾಯಿಲೆ ಜೊತೆಗೆ ಸ್ಪಷ್ಟವಾದ ಕೊರೋನಾ ವೈರಸ್ ನಿಂದಲೇ ಮೃತಪಟ್ಟ ಬಗ್ಗೆ ದೃಢಿಕರಿಸುವ ಹಿನ್ನಲೆಯಲ್ಲಿ ಜಿಲ್ಲಾ ಮಟ್ಟದಲ್ಲಿ ಒಂದು ಸಮಿತಿ ರಚನೆ ಮಾಡಲಾಗಿದ್ದು ಈ ಸಮಿತಿ ನೀಡುವ ಪಟ್ಟಿ ಆದಾರರದ ಮೇಲೆ ಪರಿಹಾರ ಹಣ ವಿತರಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಸ್ಪಷ್ಟಪಡಿಸಿದರು.

ಈ ವೇಳೆ ತಹಶೀಲ್ದಾರ ಎಂ.ಸಿದ್ಧೇಶ, ಉಪ ತಹಶೀಲ್ದಾರ ಮುರಳಿಧರ ಸೇರಿದಂತೆ ಇನ್ನಿತರ ಸಿಬ್ಬಂದಿ ಉಪಸ್ಥಿತರಿದ್ದರು.

 

Advertisement

-ವರದಿ: ಮಲ್ಲಿಕಾರ್ಜುನ ಮೆದಿಕೇರಿ.

Advertisement

Udayavani is now on Telegram. Click here to join our channel and stay updated with the latest news.

Next