Advertisement

By Election: ಕೊಪ್ಪಳ ನಗರಸಭೆ ಉಪಚುನಾವಣೆ… ಕಮಲಕ್ಕೊಂದು ಕೈಗೊಂದು ಗೆಲುವು

10:41 AM Nov 26, 2024 | Team Udayavani |

ಕೊಪ್ಪಳ: ಕೊಪ್ಪಳ ನಗರಸಭೆಯಲ್ಲಿ ತೆರವಾದ 11 ಮತ್ತು 8 ನೇ ವಾರ್ಡ್ ನ ಚುನಾವಣೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ತಲಾ ಒಂದೊಂದು ಸ್ಥಾನ ಗೆದ್ದು ಬೀಗಿವೆ.

Advertisement

8ನೇ ವಾರ್ಡ್ ಗೆಲ್ಲುವ ಮೂಲಕ ಜಿಲ್ಲಾ ಕೇಂದ್ರದಲ್ಲಿ ಬಿಜೆಪಿ ತನ್ನ ಚಾಕಚಕ್ಯತೆ ಪ್ರದರ್ಶಿಸಿದೆ.

8ನೇ ವಾರ್ಡ್ ನಿಂದ ಕವಿತಾ ಬಸವರಾಜ ಗಾಳಿ ಬಿಜೆಪಿಯಿಂದ ಸ್ಪರ್ಧಿಸಿದ್ದರೇ ಕಾಂಗ್ರೆಸ್ ನಿಂದ ರೇಣುಕಾ ಪೂಜಾರ ಸ್ಪರ್ಧಿಸಿದ್ದರು.

ಈ ವಾರ್ಡ್ ಗೆ 2019 ರಲ್ಲಿ ಸುನಿತಾ ಗಾಳಿ ಅವರು ಬಿಜೆಪಿಯ ಕವಿತಾ ಬಸವರಾಜ ಗಾಳಿ ವಿರುದ್ಧ ಕಾಂಗ್ರೆಸ್ ನಿಂದ ಗೆದ್ದಿದ್ದರು. ಆದರೆ, ಸರಕಾರಿ ನೌಕರಿ ದೊರೆತ ಕಾರಣ ರಾಜಿನಾಮೆ ನೀಡಿದ್ದರು. ಉಪ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ ಕವಿತಾ ಗಾಳಿ 486 ಮತ ಪಡೆದರೇ ಕಾಂಗ್ರೆಸ್ ಅಭ್ಯರ್ಥಿ ರೇಣುಕಾ ಪೂಜಾರ 436 ಮತ ಪಡೆದು 50 ಮತಗಳ ಅಂತರದಿಂದ‌ ಪರಾಭವಗೊಂಡರು.

ಇಲ್ಲಿ ಈ ಹಿಂದೆ ಕಾಂಗ್ರೆಸ್ ಗೆದ್ದುಕೊಂಡಿದ್ದ ಕ್ಷೇತ್ರವನ್ನು ಬಿಜೆಪಿ ವಶಪಡೆದಿದೆ.
ಇನ್ನೂ 11 ನೇ ವಾರ್ಡ್ ನಲ್ಲಿ ಬಿಜೆಪಿಯಿಂದ ನಗರಸಭೆ ಸದಸ್ಯರಾಗಿದ್ದ ರಾಜಶೇಖರ ಆಡೂರು ಲೋಕಸಭಾ ಚುನಾವಣಾ ಮುನ್ನ ಕಮಲ ಪಡೆ ತೊರೆದು ಕೈ ಪಡೆ ಸೇರಿದ್ದರು. ಹೀಗಾಗಿ ನಡೆದ ಉಪ ಚುನಾವಣೆಯಲ್ಲಿ ಆಡೂರು 517 ಮತ ಪಡೆದು ಗೆಲುವು ಕಂಡರೆ ಬಿಜೆಪಿಯಿಂದ ಸ್ಪರ್ಧಿಸಿದ ಚನ್ನಬಸಪ್ಪ ಗಾಳಿ 165 ಮತ ಸೋಲು ಕಂಡಿದ್ದಾರೆ. ಈ ವಾರ್ಡ್ ನಲ್ಲಿ ನೋಟಾಕ್ಕೆ 25 ಮತಗಳು ಬಿದ್ದಿವೆ.

Advertisement

ಇಲ್ಲಿ ಪಕ್ಷಕ್ಕಿಂತ ಕಾಂಗ್ರೆಸ್ ಅಭ್ಯರ್ಥಿ ಆಡೂರು ಅವರ ವೈಯಕ್ತಿಕ ವರ್ಚಸ್ಸು ಹೆಚ್ಚಿನ ಮಟ್ಟದಲ್ಲಿ ಕೆಲಸ ಮಾಡಿದೆ. ಆಡೂರು ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದರಿಂದ ಇಲ್ಲಿ ಬಿಜೆಪಿಯಿಂದ ಸ್ಪರ್ಧಿಸುವ ಆಕಾಂಕ್ಷಿಗಳೇ ಇರಲಿಲ್ಲ. ಕೊನೆ ಗಳಿಗೆಯಲ್ಲಿ ಪಕ್ಷದ ನಿರ್ಧಾರಕ್ಕೆ ಕಟಿ ಬಿದ್ದು ಚನ್ನಬಸಪ್ಪ ಗಾಳಿ ಸ್ಪರ್ಧಿಸಿ, ಬಿಜೆಪಿಯ ಮಾನ ಉಳಿಸಿದ್ದರು. ಹೀಗಾಗಿ ಕಳೆದ ಬಾರಿ ಕಳೆದಕೊಂಡ ಕ್ಷೇತ್ರವನ್ನು ಬಿಜೆಪಿ ಹಾಗೂ ಕಾಂಗ್ರೆಸ್ ಉಪ ಚುನಾವಣೆಯಲ್ಲಿ ಉಳಿಸಿಕೊಂಡತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next