Advertisement

ಸಂತ್ರಸ್ತರ ನೆರವಿಗೆ ಬನ್ನಿ

01:31 PM Aug 12, 2019 | Naveen |

ಕೊಪ್ಪಳ: ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಸುರಿದ ಮಳೆಯಿಂದಾಗಿ ಲಕ್ಷಾಂತರ ಜನರು ಸಂತ್ರಸ್ರರಾಗಿದ್ದಾರೆ. ಅವರೆಲ್ಲರೂ ನಮ್ಮವರೇ, ಅವರಿಗೆ ನಾವೇ ನೆರವಿನ ಸಹಕಾರ ನೀಡುವಂತೆ ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ ಮನವಿ ಮಾಡಿದರು.

Advertisement

ಭಾರತೀಯ ರೆಡ್‌ಕ್ರಾಸ್‌ ಜಿಲ್ಲಾ ಶಾಖೆ ಹಾಗೂ ಜಿಲ್ಲಾಡಳಿತದ ಆಶ್ರಯದಲ್ಲಿ ಭಾಗ್ಯನಗರದಲ್ಲಿ ನೆರವು ಸಂಗ್ರಹ ಕಾರ್ಯಕ್ರಮಕ್ಕೆ ಗವಿಸಿದ್ದೇಶ್ವರ ಸ್ವಾಮೀಜಿ ನೇತೃತ್ವದಲ್ಲಿ ಚಾಲನೆ ನೀಡಿ ಅವರು ಮಾತನಾಡಿದರು.

ಮಹಾರಾಷ್ಟ್ರ ಸೇರಿದಂತೆ ಕರಾವಳಿ ಹಾಗೂ ಉತ್ತರ ಕರ್ನಾಟಕದ ಭಾಗದಲ್ಲಿ ಮಳೆಯ ಆರ್ಭಟಕ್ಕೆ ಜನ ಜೀವನ ತತ್ತರಿಸಿದೆ. ಮಳೆಯಿಂದ ಹಲವು ಮನೆಗಳು ಹಾನಿಯಾಗಿವೆ. ಇನ್ನೂ ನದಿಯ ನೀರು ಮನೆಗಳಿಗೆ ನುಗ್ಗಿ ಜನಜೀವನ ಅಸ್ತವ್ಯಸ್ಥಗೊಂಡಿದೆ. ಹೀಗಾಗಿ ಸರ್ಕಾರ ಅವರಿಗೆ ನಿರಾಶ್ರಿತ ಕೇಂದ್ರಗಳನ್ನು ಆರಂಭಿಸಿ ತಾತ್ಕಾಲಿಕ ನೆರವು ನೀಡುತ್ತಿದೆ. ಮಳೆಯ ಅಬ್ಬರಕ್ಕೆ ತತ್ತರಿಸಿದವರು ನಮ್ಮೊವರೇ ಆಗಿದ್ದಾರೆ. ಮಾನವೀಯತೆ ದೃಷ್ಟಿಯಿಂದ ಅವರಿಗೆ ಸಹಾಯ, ಸಹಕಾರ ನೀಡಬೇಕಾಗಿದೆ. ಸರ್ಕಾರವೂ ಈಗಾಗಲೇ ನೆರವಿಗೆ ಮನವಿ ಮಾಡಿದೆ. ನಾವೂ ಕೈಲಾದಷ್ಟು ನೆರವು ನೀಡೋಣ ಎಂದರು.

ಈಗಾಗಲೇ ಜಿಲ್ಲೆಯ ಜನರು ವಿವಿಧ ಹಂತದಲ್ಲಿ ನೆರವು ಸಂಗ್ರಹ ಮಾಡಿ ನೆರೆ ಸಂತ್ರಸ್ತರು ನೆಲೆಸಿದ ಸ್ಥಳಕ್ಕೆ ಸಾಮಗ್ರಿ ತೆಗೆದುಕೊಂಡು ಹೋಗಿ ತಲುಪಿಸುತ್ತಿದ್ದಾರೆ. ಇನ್ನೂ ಕೆಲವರು ಜಿಲ್ಲಾಡಳಿತಕ್ಕೆ ತಂದು ಕೊಡುತ್ತಿದ್ದಾರೆ. ಜಿಲ್ಲಾಡಳಿತ, ಭಾರತೀಯ ರೆಡ್‌ಕ್ರಾಸ್‌ ಸಂಸ್ಥೆ ಹಾಗೂ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಈ ಕಾರ್ಯಕ್ರಮ ಹಮ್ಮಿಕೊಂಡಿದೆ. ಎಲ್ಲರೂ ಸಹಕಾರ ನೀಡಿ ಅವರೊಟ್ಟಿಗೆ ನಾವಿರುವ ಕುರಿತು ಧೈರ್ಯ ಹೇಳ್ಳೋಣ ಎಂದರು.

ಗವಿಸಿದ್ದೇಶ್ವರ ಮಹಾ ಸ್ವಾಮಿಗಳು ನೆರೆ ಸಂತ್ರಸ್ತರಿಗೆ ನೆರವು ಸಂಗ್ರಹಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡುವ ಮೂಲಕ ಜನರು ನೆರವು ನೀಡುವಂತೆ ಮನವಿ ಮಾಡಿದರು. ಭಾಗ್ಯನಗರದ ರಸ್ತೆಯುದ್ಧಕ್ಕೂ ಸಂಚಾರ ನಡೆಸಿ ಅಂಗಡಿ, ಮುಂಗಟ್ಟಿನ ಸ್ಥಳದಲ್ಲಿ ನೆರವು ಸಂಗ್ರಹಿಸಿದರು. ಈ ವೇಳೆ ಜಿಲ್ಲಾಧಿಕಾರಿ ಸುನೀಲ್ ಕುಮಾರ ಅವರೇ ದೇಣಿಗೆ ಪೆಟ್ಟಿಗೆ ಹಿಡಿದು ಅಂಗಡಿಗಳಿಗೆ ತೆರಳಿ ನೆರವು ಕೇಳಿ ಜನರಿಂದ ಹಣ ಸೇರಿದಂತೆ ಇತರೆ ಸಾಮಗ್ರಿ ಪಡೆದರು. ಇನ್ನೂ ಕೆಲವು ವಿದ್ಯಾರ್ಥಿಗಳು ಇದಕ್ಕೆ ಕೈ ಜೋಡಿಸಿ ಅವರೊಟ್ಟಿಗೆ ಹೆಜ್ಜೆ ಹಾಕಿದರು. ಅಲ್ಲದೇ, ತಮ್ಮ ಮನೆಯಲ್ಲಿ ನಿತ್ಯವೂ ಸಂಗ್ರಹಿಸಿಟ್ಟಿದ್ದ ಹಣವನ್ನು ವಿದ್ಯಾರ್ಥಿನಿ ಶ್ರೀಗಳಿಗೆ ತಂದು ಕೊಟ್ಟಿದ್ದು ಎಲ್ಲರ ಗಮನ ಸೆಳೆಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next