ಯಲಬುರ್ಗಾ: ತಾಲೂಕಿನಲ್ಲಿ ಕೋವಿಡ್ ಎರಡನೇ ಅಲೆ ನಿಯಂತ್ರಣಕ್ಕೆ ಶಕ್ತಿ ಮೀರಿ ಶ್ರಮಿಸುತ್ತಿದ್ದೇನೆ. ತಾಲೂಕಿನ ಅ ಧಿಕಾರಿಗಳು ಸಕ್ರೀಯರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ಶಾಸಕ ಹಾಲಪ್ಪ ಆಚಾರ ಹೇಳಿದರು.
ಪಟ್ಟಣದ ಶಾಸಕರ ಭವನದಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ತಾಲೂಕು ಮಟ್ಟದ ಅ ಧಿಕಾರಿಗಳು ಸಕ್ರೀಯವಾಗಿ ಜೀವದ ಹಂಗು ತೊರೆದು ಕೆಲಸ ಮಾಡುತ್ತಿದ್ದಾರೆ. ಅವರ ಕಾರ್ಯಕ್ಕೆ ಪ್ರತಿಯೊಬ್ಬರು ಸಹಕರಿಸಬೇಕು. ವಿನಾಕಾರಣ ಜನತೆ ಅ ಧಿಕಾರಿಗಳ ಮೇಲೆ ರೇಗಾಡುವ ಪ್ರವೃತ್ತಿ ಸರಿಯಲ್ಲ. ನಿತ್ಯ ಆಸ್ಪತ್ರೆಗಳಿಗೆ ಭೇಟಿ ನೀಡುತ್ತಿದ್ದೇನೆ. ವೈದ್ಯರ ಜತೆ ನಿರಂತರ ಸಂಪರ್ಕದಲ್ಲಿರುತ್ತೇನೆ ಎಂದರು.
ಅವ್ಯವಸ್ಥೆ ಸರಿಪಡಿಸಿ: ಪಟ್ಟಣದಲ್ಲಿರುವ ಇಂದಿರಾ ಕ್ಯಾಂಟೀನ್ ಅವ್ಯವಸ್ಥೆ ಸರಿಪಡಿಸುವಂತೆ ಶಾಸಕ ಹಾಲಪ್ಪ ಆಚಾರ ಮುಖ್ಯಾ ಧಿಕಾರಿ ಶಿವಕುಮಾರ ಕಟ್ಟಿಮನಿಗೆ ಅವರಿಗೆ ಸೂಚಿಸಿದರು. ಪಪಂನಿಂದಲೇ ಇಂದಿರಾ ಕ್ಯಾಂಟೀನ್ ಊಟ, ಉಪಹಾರದ ಟೋಕನ್ ವಿತರಿಸಲು ಮುಂದಾಗಿ, ಪಪಂನಿಂದ ಇಬ್ಬರು ಸಿಬ್ಬಂದಿಯನ್ನು ನಿಯೋಜಿಸಿ, ನಿತ್ಯ 600 ಜನರಿಗೆ ಟೋಕನ್ ವಿತರಿಸಬೇಕು. ಪಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ತಮ್ಮ ಜವಾಬ್ದಾರಿ ಅರಿತು ಕರ್ತವ್ಯ ನಿರ್ವಹಿಸಬೇಕು. ನಿತ್ಯ ಒಬ್ಬ ಸದಸ್ಯರು ಭೇಟಿ ನೀಡಿ ಪರಿಶೀಲಿಸುವ ಕಾರ್ಯ ಮಾಡಿ ಎಂದು ಪಪಂ ಚುನಾಯಿತ ಪ್ರತಿನಿ ಧಿಗಳಿಗೆ ತಿಳಿಸಿದರು.
ಇಂದಿರಾ ಕ್ಯಾಂಟೀನ್ ಆಹಾರವನ್ನು ನಿರ್ಗತಿಕರಿಗೆ, ಬಡ ಜನತೆಗೆ ನೀಡುವ ವ್ಯವಸ್ಥೆ ಕೈಗೊಳ್ಳಿ ಎಂದರು. ಆಸ್ಪತ್ರೆ ಸಿಬ್ಬಂದಿಗೆ ವೈಯಕ್ತಿಕವಾಗಿ ಹಣ್ಣು, ಕಷಾಯ ಹಾಗೂ ಊಟದ ವ್ಯವಸ್ಥೆ ಏರ್ಪಡಿಸಿದ್ದೇನೆ. ಕೋವಿಡ್ ಕೇರ್ ಸೆಂಟರ್ ನಲ್ಲಿರುವ ಸೋಂಕಿತರಿಗೆ ಊಟ, ಉಪಾಹಾರ ಸಕಾಲಕ್ಕೆ ವಿತರಿಸಲಾಗುತ್ತಿದೆ. ಅಲ್ಪ ಸ್ವಲ್ಪ ಸಮಯ ವಿಳಂಬವಾದರೇ ವಿನಾಕಾರಣ ಗೊಂದಲ ಸೃಷ್ಟಿಸಬೇಡಿ ಎಂದರು.
ತಹಶೀಲ್ದಾರ್ ಶ್ರೀಶೈಲ ತಳವಾರ, ಪಪಂ ಮುಖ್ಯಾಧಿಕಾರಿ ಶಿವಕುಮಾರ ಕಟ್ಟಿಮನಿ, ಸಿಪಿಐ ಎಂ. ನಾಗರಡ್ಡಿ, ನಾಗಪ್ಪ ಸಜ್ಜನ, ಉಮೇಶ ಬೇಲಿ, ಮುಖಂಡರಾದ ವೀರಣ್ಣ ಹುಬ್ಬಳ್ಳಿ, ಕಳಕಪ್ಪ ಕಂಬಳಿ, ಬಸವನಗೌಡ ತೊಂಡಿಹಾಳ, ಪಪಂ ಅಧ್ಯಕ್ಷ ಅಮರೇಶ ಹುಬ್ಬಳ್ಳಿ, ಸ್ಥಾಯಿ ಸಮಿತಿ ಅಧ್ಯಕ್ಷ ವಸಂತ ಭಾವಿಮನಿ, ಕಳಕಪ್ಪ ತಳವಾರ, ಸಿದ್ದರಾಮೇಶ ಬೆಲೇರಿ, ಈರಪ್ಪ ಬಣಕಾರ ಇತರರು ಇದ್ದರು.