Advertisement

ಬೀಗರ ಊರಿಗೆ ತೆರಳಲು ನವವಿವಾಹಿತರ ಖತರ್‍ನಾಕ್‌ ಪ್ಲಾನ್‌

09:03 PM May 20, 2021 | Team Udayavani |

ಕೊಪ್ಪಳ: ತಾಲೂಕಿನ ಹನುಕುಂಟಿ ಗ್ರಾಮದ ಎರಡು ನವ ಜೋಡಿಗಳು ಈಚೆಗಷ್ಟೇ ಮದುವೆಯಾಗಿದ್ದರು. ಬೀಗರ ಊರಿಗೆ ಸರ್ಕಾರಿ ನಾಮಫಲಕದ ಕಾರಿನಲ್ಲಿ ತೆರಳುವ ಖತರನಾಕ್‌ ಐಡಿಯಾ ಮಾಡಿ ಪೊಲೀಸರ ಕೈಗೆ ಬುಧವಾರ ಸಿಕ್ಕಿ ಬಿದ್ದಿದ್ದಾರೆ. ಕೊನೆಗೂ ಕೊಪ್ಪಳ ಪೊಲೀಸರು ಈ ವಾಹವನ್ನು ಜಪ್ತಿ ಮಾಡಿದರು.

Advertisement

ಜಿಲ್ಲೆಯಲ್ಲಿ ಐದು ದಿನಗಳ ಕಾಲ ಬಿಗಿ ಲಾಕ್‌ಡೌನ್‌ ಜಾರಿ ಹಿನ್ನೆಲೆಯಲ್ಲಿ ಕೃಷಿ, ವೈದ್ಯಕೀಯ ಸೇವೆಯ ವಾಹನ ಹೊರತು  ಪಡಿಸಿ ಉಳಿದೆಲ್ಲ ವಾಹನಗಳ ಸಂಚಾರಕ್ಕೂ ಬ್ರೇಕ್‌ ಹಾಕಲಾಗಿದೆ. ಈ ವೇಳೆ ಹನುಕುಂಟಿ ಗ್ರಾಮದ ಮಾರುತಿ ಹಾಗೂ ಬಸವರಾಜ ಎನ್ನುವವರು ಸರ್ಕಾರಿ ನಾಮಫಲಕದ ಕಾರಿನಲ್ಲಿ ಪ್ರಯಾಣ ಮಾಡುವ ವೇಳೆ ಪೊಲೀಸರ ಕೈಗೆ ಸಿಕ್ಕು ಬಿದ್ದಿದ್ದಾರೆ. ತಮ್ಮ ಸಂಬಂಧಿಯ ಕಾರ್‌ನ್ನು ಕೂಡ್ಲಗಿಯ ಕೃಷಿ ಇಲಾಖೆಯಲ್ಲಿ ಗುತ್ತಿಗೆಯ ಮೇಲೆ ಸರ್ಕಾರಿ ಕರ್ತವ್ಯಕ್ಕೆ ಬಳಕೆ ಮಾಡಲಾಗುತ್ತಿದೆ. ಇದೇ ಕಾರಿನಲ್ಲಿ ಎರಡು ಜೋಡಿ ನವ ವಿವಾಹಿತರು ಸೇರಿದಂತೆ ಒಟ್ಟು 7 ಜನರು ಪ್ರಯಾಣ ಬೆಳೆಸಿದ್ದಾರೆ.

ನಗರದ ಗಡಿಯಾರ ಕಂಬದ ಬಳಿ ಕಾರು ಆಗಮಿಸಿದ ವೇಳೆ ಪೊಲೀಸರು ಅದನ್ನು ತಡೆದು ಪರಿಶೀಲನೆ ನಡೆಸಿದ್ದಾರೆ. ಕಾರಿನ ಮುಂಭಾಗದಲ್ಲಿ ಕೃಷಿ ಇಲಾಖೆ ಎಂಬ ನಾಮಫಲಕವಿದ್ದು, ಒಳಗಡೆ ಎರಡು ನವ ಜೋಡಿ ಸೇರಿ ಏಳು ಜನರಿದ್ದಾರೆ. ಅನುಮಾನಗೊಂಡ ಪೊಲೀಸರು ಅವರನ್ನು ವಿಚಾರಿಸಿದ್ದಾರೆ. ಕೊನೆಗೆ ನಾವು ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಬಸಾಪೂರ ಗ್ರಾಮದ ಬೀಗರ ಊರಿಗೆ ತೆರಳುತ್ತಿದ್ದೇವೆ. ಲಾಕ್‌ಡೌನ್‌ ಇದ್ದ ಕಾರಣ ವಾಹನಗಳು ಇರಲಿಲ್ಲ. ಅನ್ಯ ಜಿಲ್ಲೆಗೆ ಬೇರೆ ವಾಹನ ಬಿಡುತ್ತಿಲ್ಲ. ಹಾಗಾಗಿ ಈ ಕಾರಿನಲ್ಲಿ ಹೊರಟಿದ್ದೇವೆ ಎಂದು ಪೊಲೀಸರ ಮುಂದೆ ತಪ್ಪು ಒಪ್ಪಿಕೊಂಡಿದ್ದಾರೆ. ಈ ಖತರನಾಕ್‌ ಐಡಿಯಾಗೆ ಪೊಲೀಸರೇ ತಬ್ಬಿಬ್ಟಾಗಿದ್ದಾರೆ. ಕೊನೆಗೂ ಕಾರಿನಲ್ಲಿದ್ದವರೆಲ್ಲರನ್ನೂ ಕೆಳಗಡೆ ಇಳಿಸಿ ಕಾರನ್ನು ಜಪ್ತಿ ಮಾಡಿ ವರರಿಗೆ ಬಿಸಿ ಮುಟ್ಟಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next