ಕೊಪ್ಪಳ: ಕೊಪ್ಪಳ ವಿಧಾನಸಭೆ ಕ್ಷೇತ್ರದಲ್ಲಿ ಚುನಾವಣಾ ಕಸರತ್ತು ರಂಗೇರಿದೆ. ಕಾಂಗ್ರೆಸ್ ಅಭ್ಯರ್ಥಿ ರಾಘವೇಂದ್ರ ಹಿಟ್ನಾಳ ಇಂದು ನಾಮಪತ್ರ ಸಲ್ಲಿಕೆ ಮಾಡಿದರೆ, ಮತ್ತೊಂದೆಡೆ ಬಿಜೆಪಿ ಟಿಕೆಟ್ ಗಾಗಿ ಸಂಗಣ್ಣ ಕರಡಿ ಪ್ರಯತ್ನ ಮುಂದುವರಿದಿದೆ.
ಬಿಜೆಪಿ ಸಂಸದ ಸಂಗಣ್ಣ ಕರಡಿ ಅವರು ವಿಧಾನಸಭಾ ಟಿಕೆಟ್ ಗಾಗಿ ಕೊನೆಯ ಕ್ಷಣದ ಕಸರತ್ತು ನಡೆಸುತ್ತಿದ್ದಾರೆ. ಬೆಂಗಳೂರಿಗೆ ತೆರಳಿರುವ ಅವರು ಬಿಜೆಪಿ ಹೈಕಮಾಂಡ್ ಸಂಸದರ ಮನವೊಲಿಸುವ ಯತ್ನ ನಡೆಸುತ್ತಿದ್ದಾರೆ.
ನಿಮ್ಮನ್ನು ಬಿಟ್ಟು ನಿಮ್ಮ ಕುಟುಂಬಕ್ಕೆ ಟಿಕೆಟ್ ನೀಡುತ್ತೇವೆ ಎಂದು ಹೈಕಮಾಂಡ್ ಭರವಸೆ ನೀಡಿದೆ ಎನ್ನಲಾಗಿದೆ, ಆದರೆ ಕರಡಿ ಸಂಗಣ್ಣ ಅವರು ತಮಗೆ ಟಿಕೆಟ್ ನೀಡುವಂತೆ ಪಟ್ಟು ಹಿಡಿದಿದ್ದಾರೆ. ಯಾವುದೇ ನಿರ್ಧಾರ ಕೈಗೊಳ್ಳದಂತೆ ಅವರಿಗೆ ಸೂಚನೆ ನೀಡಲಾಗಿದೆ.
ಇದನ್ನೂ ಓದಿ:ಟಿಕೆಟ್ ಸಿಕ್ಕಾಗ ಪಟಾಕಿ ಹೊಡೆದವರು ಅಪ್ಪಿತಪ್ಪಿ ಜಯ ಗಳಿಸಿದರೆ ಬಾಂಬ್ ಬೀಳಬಹುದು: ಸೊರಕೆ
ಹಿಟ್ನಾಳ ನಾಮಪತ್ರ: ಇಂದು ಕೊಪ್ಪಳದಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಘವೇಂದ್ರ ಹಿಟ್ನಾಳ ನಾಮಪತ್ರ ಸಲ್ಲಿಸಿದರು.
ನಾಮಪತ್ರ ಸಲ್ಲಿಸುವ ಮೊದಲು ಕೊಪ್ಪಳ ಶ್ರೀ ಗವಿಸಿದ್ದೇಶ್ವರ ಸ್ವಾಮೀಜಿಗಳ ಆಶೀರ್ವಾದ ಪಡೆದ ಹಿಟ್ನಾಳ ಅವರು, ಬೆಳಗ್ಗೆ ಶುಭ ಗಳಿಗೆ 11.15 ನಾಮಪತ್ರ ಸಲ್ಲಿಸಿದರು. ಬೆಳಗಿನ ಜಾವ ಹಿಟ್ನಾಳದಿಂದ ಹುಲಿಗೆಮ್ಮ ದೇವಿ ದೇವಸ್ಥಾನಕ್ಕೆ ಪಾದಯಾತ್ರೆ ನಡೆಸಿದ್ದರು.