ರಾಜಶೇಖರ ಹಿಟ್ನಾಳ್, ಬಿಜೆಪಿಯಿಂದ ಹೊಸಮುಖ ಡಾ| ಬಸವರಾಜ ಕ್ಯಾವಟರ್ ನಡುವೆ ಕಾದಾಟ ನಡೆದಿದೆ. ಕಮಲಕ್ಕೆ
ದಳ ಹಾಗೂ ರೆಡ್ಡಿ ಶಕ್ತಿ ದೊರೆತರೆ, ಕಾಂಗ್ರೆಸ್‌ಗೆ ಆರು ಶಾಸಕರ ಬಲದ ಜತೆಗೆ ಬಿಜೆಪಿ ಸಂಸದರಾಗಿದ್ದ ಸಂಗಣ್ಣ ಕರಡಿ
ಸೇರ್ಪಡೆಯಿಂದ ಹೆಚ್ಚಿನ ಬಲ ಬಂದಿದೆ.
Advertisement
ಕ್ಷೇತ್ರದಲ್ಲೀಗ ಕುಟುಂಬ ರಾಜಕಾರಣ ವರ್ಸಸ್ ಹೊಸ ಮುಖದ ಸಮರ ಏರ್ಪಟ್ಟಿದೆ. ಒಟ್ಟು 17 ಚುನಾವಣೆಗಳು ನಡೆದಿದ್ದು ಕಾಂಗ್ರೆಸ್ 9, ಜೆಡಿಎಸ್ 2, ಬಿಜೆಪಿ 3, ನಾಲ್ಕು ಬಾರಿ ಪಕ್ಷೇತರರು ಗೆದ್ದಿದ್ದಾರೆ. 2009ರಿಂದ ಕ್ಷೇತ್ರ ಕಮಲದ ಹಿಡಿತದಲ್ಲಿದೆ. ಅದರ ಮರು ವಶಕ್ಕೆ ಕಾಂಗ್ರೆಸ್ ಹಠಕ್ಕೆ ಬಿದ್ದಿದೆ. ಎಂಟು ವಿಧಾನಸಭೆ ಕ್ಷೇತ್ರಗಳ ಪೈಕಿ 2018ರಲ್ಲಿ 5 ಬಿಜೆಪಿ, 2 ಕಾಂಗ್ರೆಸ್, 1 ಜೆಡಿಎಸ್ ಗೆದ್ದಿದ್ದರೆ, 2023ರಲ್ಲಿ 6 ಕಾಂಗ್ರೆಸ್, 1 ಬಿಜೆಪಿ, ಜನಾರ್ದನ ರೆಡ್ಡಿ ನೇತೃತ್ವದ ಕೆಆರ್‌ಪಿಪಿ 1 ಸ್ಥಾನದಲ್ಲಿ ಗೆದ್ದಿತ್ತು. ರೆಡ್ಡಿ ಈಗ ಬಿಜೆಪಿ ಸೇರಿದ್ದಾರೆ. 2014 ಹಾಗೂ 2019ರಲ್ಲಿ ಸಂಗಣ್ಣ ಕರಡಿ ಬಿಜೆಪಿ ಸಂಸದರಾಗಿದ್ದರು. ಆದರೆ ಈ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ತಪ್ಪಿದ್ದರಿಂದ ಕಾಂಗ್ರೆಸ್ ಸೇರಿದ್ದಾರೆ.
ಮತಗಳು ಆಸರೆಯಾಗಲಿವೆ ಎನ್ನುವ ನಿರೀಕ್ಷೆಯಲ್ಲಿದ್ದಾರೆ. ಡಾ| ಬಸವರಾಜ ಪ್ರಬಲ ಪಂಚಮಸಾಲಿ ಸಮುದಾಯಕ್ಕೆ ಸೇರಿದ್ದು, ಲಿಂಗಾಯತ, ಹಿಂದುತ್ವ, ಎಸ್‌ಸಿ-ಎಸ್‌ಟಿ ಮತಗಳ ಮೇಲೆ ಕಣ್ಣಿಟ್ಟಿದ್ದಾರೆ. ಕಳೆದ ಮೂರು ಚುನಾವಣೆಗಳಲ್ಲಿ ಲಿಂಗಾಯತ ನಾಯಕರೇ ಕ್ಷೇತ್ರದಲ್ಲಿ ಗೆಲುವು ಕಂಡಿದ್ದಾರೆ. ಅದೇ ಲೆಕ್ಕಾಚಾರವನ್ನು ಹಾಕಿ ಬಿಜೆಪಿ ಡಾಕ್ಟರ್‌ಗೆ ಟಿಕೆಟ್ ನೀಡಿದೆ.
Related Articles
Advertisement
ಡಾ| ಬಸವರಾಜ ಕ್ಯಾವಟರ್-ಬಿಜೆಪಿ -ಜೆಡಿಎಸ್ ಮೈತ್ರಿ ಅಭ್ಯರ್ಥಿ* ಸಾಮರ್ಥ್ಯ
1)ಪ್ರಧಾನಿ ನರೇಂದ್ರ ಮೋದಿ ನಾಮಬಲ
2)ಹಿಂದಿನ ಸಂಸದರ ಅಭಿವೃದ್ಧಿ ಬಲ
3)ಹಿಂದುತ್ವದ ಬಲ, ಲಿಂಗಾಯತ ಸಮಾಜಕ್ಕೆ ಸೇರಿದ್ದು ಪ್ರಧಾನಿ ನರೇಂದ್ರ ಮೋದಿ ಅಭಿವೃದ್ಧಿ ಕಾರ್ಯಗಳು, ಹೆದ್ದಾರಿ, ರೈಲ್ವೇ ಅಭಿವೃದ್ಧಿ ಯೋಜನೆಗಳು, ಕ್ಷೇತ್ರದಲ್ಲಿ ಹಿಂದೆ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳು ನನ್ನ ಗೆಲುವಿಗೆ ವರದಾನವಾಗಲಿವೆ. ಮುಂದೆ ಅಂಜನಾದ್ರಿ ಸೇರಿದಂತೆ ವಿವಿಧ ಅಭಿವೃದ್ಧಿ ಯೋಜನೆಗಳ ಕಾರ್ಯಗತಗೊಳಿಸಲು ಕ್ಷೇತ್ರದ ಮತದಾರರು ನನಗೆ ಮತ ನೀಡಲಿದ್ದಾರೆ.
● ಡಾ|ಬಸವರಾಜ ಕ್ಯಾವಟರ್, ಬಿಜೆಪಿ ಅಭ್ಯರ್ಥಿ ರಾಜಶೇಖರ ಹಿಟ್ನಾಳ್ ಕಾಂಗ್ರೆಸ್ ಅಭ್ಯರ್ಥಿ
*ಸಾಮರ್ಥ್ಯ
1)ಗ್ಯಾರಂಟಿಯೋಜನೆಗಳ ಬಲ
2)ಸಂಗಣ್ಣ ಕರಡಿ ಕಾಂಗ್ರೆಸ್‌ಗೆ ಸೇರ್ಪಡೆ
3)ಆರು ಕ್ಷೇತ್ರದಲ್ಲಿ ಶಾಸಕರು ಗೆದ್ದಿರುವ ಶಕ್ತಿ ರಾಜ್ಯ ಸರಕಾರ ಜಾರಿಗೊಳಿಸಿದ ಗ್ಯಾರಂಟಿ ಯೋಜನೆಗಳು ಜನರ ಮನೆ ಮನೆಗೂ ತಲುಪಿವೆ. ಬಡವರಿಗೆ ಆಸರೆಯಾಗಿವೆ. ಇದಲ್ಲದೇ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಪಂಚ ನ್ಯಾಯ ಯೋಜನೆಗಳನ್ನು ಜಾರಿಗೊಳಿಸಲು ಪಕ್ಷ ನಿರ್ಧರಿಸಿದೆ. ಮೋದಿ ಸರಕಾರದ ದುರಾಡಳಿತ, ವೈಫಲ್ಯವನ್ನು ಜನತೆ ನೋಡಿದ್ದಾರೆ. ಕ್ಷೇತ್ರದ ಅಭಿವೃದ್ಧಿಗಾಗಿ ಜನತೆ ಮತ ನೀಡಲಿದ್ದಾರೆ.
● ರಾಜಶೇಖರ ಹಿಟ್ನಾಳ್, ಕಾಂಗ್ರೆಸ್ ಅಭ್ಯರ್ಥಿ ■ ದತ್ತು ಕಮ್ಮಾರ