ಕಾರಟಗಿ: ಮಕ್ಕಳು ಒಳ್ಳೆಯ ಹವ್ಯಾಸ ರೂಢಿಸಿಕೊಳ್ಳುವುದು, ಸ್ವಚ್ಚತೆ ಕಾಪಾಡಿಕೊಳ್ಳುವುದು, ದುಶ್ಚಟಗಳಿಂದ ದೂರವಿರುವುದು, ಪೌಷ್ಟಿಕ ಆಹಾರ ಸೇವನೆ, ದೈಹಿಕ ಆರೋಗ್ಯ ಕಾಪಾಡಿಕೊಳ್ಳುವುದರಿಂದ ಉತ್ತಮ ಜೀವನ ನಡೆಸಲು ಸಾಧ್ಯ ಎಂದು ಸಮುದಾಯ ಆರೋಗ್ಯ ಕೇಂದ್ರದ ಸ್ನೇಹ ಕ್ಲಿನಿಕ್‌ನ ಆಪ್ತ ಸಮಾಲೋಚಕಿ ಶಿಲ್ಪಾ ಹೇಳಿದರು.
ಪಟ್ಟಣದ ಸರ್ಕಾರಿ ಬಾಲಕಿಯರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಮುದಾಯ ಆರೋಗ್ಯ ಸಂಯೋಜಕ ದೇವರಾಜ್ ಮಾತನಾಡಿ, ಹದಿಹರೆಯದವರಲ್ಲಿ ಸಾಮಾನ್ಯವಾಗಿ ಕಾಡುವ ಹತ್ತು ಹಲವು ಸಮಸ್ಯೆಗಳಿಗೆ ಈ ಕ್ಲಿನಿಕ್‌ನಲ್ಲಿ ಪರಿಹಾರವಿದೆ.
ಹದಿಹರೆಯದವರು ಜಿಲ್ಲಾ ಮತ್ತು ತಾಲೂಕು ಆಸ್ಪತ್ರೆಗಳು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರಗಳು ಸೇರಿದಂತೆ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಹದಿಹರೆಯದವರು ತಮ್ಮನ್ನು ಬಾಧಿಸುವ ದೈಹಿಕ ಹಾಗೂ ಮಾನಸಿಕ ಸಮಸ್ಯೆಗಳ ಪರಿಹಾರಕ್ಕಾಗಿ ಈ ಕ್ಲಿನಿಕ್‌ಗೆ ಭೇಟಿ ನೀಡಿದರೆ, ಇಲ್ಲಿ ಆಪ್ತಸಮಾಲೋಚನೆ ನಡೆಸಿ ಸೂಕ್ತ ಸಲಹೆ ನೀಡುತ್ತಾರೆ.ಜೊತೆಗೆ ಬಾಲ್ಯ ವಿವಾಹದ ದುಷ್ಪರಿಣಾಮಗಳು. ಎಚ್ ಐವಿ /ಏಡ್ಸ್ ಕುರಿತಾದ ತಿಳಿವಳಿಕೆ, ಆರೋಗ್ಯ ಶಿಕ್ಷಣ ಕೂಡಾ ಲಭ್ಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಮುಖ್ಯೋಪಾಧ್ಯಾಯ ಬಸಯ್ಯ ಮಠ ಹಾಗೂ ಶ್ಯಾಮಸುಂದರ್ ಇಂಜಿನಿ ಮಾತನಾಡಿ, ವಿದ್ಯಾರ್ಥಿಗಳಿಗೆ ಆರೋಗ್ಯದ ಶುಚಿತ್ವದಬಗ್ಗೆ ತಿಳಿ ಹೇಳಿದರು. ಪುರಸಭೆ ಹಿರಿಯ ಆರೋಗ್ಯ ನಿರೀಕ್ಷಕಿ ಅಕ್ಷತಾ, ಮಲ್ಲಮ್ಮ, ಚನ್ನಬಸವಸ್ವಾಮಿ, ಕೆಎಚ್‌ಪಿಟಿ ಸಂಯೋಜಕ ಸಿದ್ದನಗೌಡ ಪಾಟೀಲ್, ಅಂಗನವಾಡಿ ಮೇಲ್ವಿಚಾರಕಿ ಸುಕನ್ಯಾ, ಸ್ನೇಹಾ ಸಂಸ್ಥೆ ಕಿಶೋರಿ ಸಂಘದ ಸದಸ್ಯೆ ಗಂಗಮ್ಮ, ಲಕ್ಷ್ಮೀ ಸಜ್ಜನ್, ರತ್ನಮ್ಮ, ಸಿದ್ದಲಿಂಗಮ್ಮ, ಶಶಿಕಲಾ ಗೋಡೆ, ಅಯ್ಯಮ್ಮ, ಸುನೀತಾ, ಎಚ್.ಗಿರಿಜಾ ಶಿಕ್ಷಕರಾದ ರಾಮಣ್ಣ ಹಳ್ಳಿಕೇರಿ ಇನ್ನಿತರರು ಇದ್ದರು.