Advertisement

Koppal; ಕೇಂದ್ರ ಬರ ಅಧ್ಯಯನ ತಂಡ ಭೇಟಿ: ರೈತರ ಅಳಲು

04:29 PM Oct 06, 2023 | Team Udayavani |

ಕೊಪ್ಪಳ: ಕೇಂದ್ರದ ಬರ ಅಧ್ಯಯನ ತಂಡವು ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಮಹಿಳೆಯರು ಬಂಡಿ ಕ್ರಾಸ್ ಬಳಿ ಬರ ಅಧ್ಯಯನ ನಡೆಸಿದರು.

Advertisement

ಯಲಬುರ್ಗಾ ತಾಲೂಕಿನ ಬಂಡಿ ಕ್ರಾಸ್ ಬಳಿಯ ಶರಣಮ್ಮ ರೊಟ್ಟಿ ಅವರ ಜಮೀನಿಗೆ ಭೇಟಿ ನೀಡಿದ ಬರ ತಂಡದ ಕೇಂದ್ರ ಕುಡಿಯುವ ನೀರು ಹಾಗು ನೈರ್ಮಲ್ಯ ಸಚಿವಾಲಯದ ಹೆಚ್ಚುವರಿ ಸಲಹೆಗಾರ ಡಿ. ರಾಜಶೇಖರ್ ಐ.ಎ.ಎಸ್., ಪಶುಸಂಗೋಪನೆ ಇಲಾಖೆಯ ‌ನಿರ್ದೇಶಕ ಆರ್ ಥಾಕರೆ, ಗ್ರಾಮೀಣಾಭಿವೃದ್ಧಿ ಇಲಾಖೆಯ ಸಹಾಯಕ ಆಯುಕ್ತ ಮೋತಿರಾಂ, ರಾಜ್ಯದ ಪ್ರಕೃತಿ ವಿಕೋಪ ನಿರ್ವಹಣಾ ಕೇಂದ್ರದ ನಿರ್ದೇಶಕ ಕರೀಗೌಡರ ತಂಡವು ರೈತ ಮಹಿಳೆಯ ಸಮಸ್ಯೆ ಆಲಿಸಿತು. ರೈತ ಮಹಿಳೆ ಶರಣಮ್ಮ ಅವರು ನಮ್ಮ 10 ಎಕರೆ ಜಮೀನಿದೆ. ಅದರಲ್ಲಿ 1 ಎಕರೆ ಜಮೀನಿನಲ್ಲಿ ಸಜ್ಜೆ ಬೆಳೆದಿದ್ದೆವು. ಎಕರೆಗೆ 15-20 ಸಾವಿರ ರೂ. ವೆಚ್ಚ ಮಾಡಿದ್ದೆವು. ಈ ಬಾರಿ ಮಳೆ ಆಗಲಿಲ್ಲ. ಇದರಿಂದ ನಮ್ಮ ಸಜ್ಜೆ ಬೆಳೆ ಸಂಪೂರ್ಣ ಹಾಳಾಗಿದೆ ಎಂದು ತಂಡದ ಮುಂದೆ ಅಳಲು ತೋಡಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next