Advertisement

ಕೊಪ್ಪಳ: 3 ದಿನದಲ್ಲಿ 300 ಜನರ ಮೇಲೆ ಕೇಸ್‌53 ಪ್ರಕರಣ -4.75 ಲಕ್ಷ ರೂ. ವಶ

03:38 PM Nov 04, 2024 | Team Udayavani |

ಉದಯವಾಣಿ ಸಮಾಚಾರ
ಕೊಪ್ಪಳ: ದೀಪಾವಳಿಯ ಹಬ್ಬದಲ್ಲಿ ಜೂಜುಕೋರರಿಗೆ ಬಿಸಿ ಮುಟ್ಟಿಸಿರುವ ಜಿಲ್ಲಾ ಪೊಲೀಸ್‌ ಕೇವಲ ಮೂರು ದಿನದಲ್ಲಿ 300 ಜನರ ಮೇಲೆ ವಿವಿಧ ಪೊಲೀಸ್‌ ಠಾಣೆಗಳಲ್ಲಿ ಸೇರಿದಂತೆ 53 ಪ್ರಕರಣ ದಾಖಲಾಗಿವೆ. ಬಂಧಿತರಿಂದ 4.75 ಲಕ್ಷ ರೂ.ವಶಕ್ಕೆ ಪಡೆದ ಅಂದರ್‌-ಬಾಹರ್‌ ಆಟವಾಡಿದ ಜನರನ್ನು ಒಳಗೆ ಹಾಕಿದ್ದಾರೆ.

Advertisement

ಜಿಲ್ಲೆಯಲ್ಲಿ ಪ್ರತಿ ವರ್ಷ ದೀಪಾವಳಿ ವೇಳೆ ಎಗ್ಗಿಲ್ಲದೇ ಇಸ್ಪೀಟ್‌ ಜೂಜಾಟವು ಜೋರಾಗಿ   ನಡೆಯುತ್ತದೆ. ಅಂದರ್‌ ಬಾಹರ್‌ ಆಟದಲ್ಲಿ ಹಣ ಕಳೆದುಕೊಂಡು ದಿವಾಳಿಯಾದ ಜನರು ಅದೆಷ್ಟೋ ಮನೆ, ಆಸ್ತಿ, ಆಭರಣ ಮಾರಿಕೊಂಡು ಊರು ತೊರೆದ ಹಲವು ಪ್ರಕರಣಗಳು ನಗರ ಸೇರಿ ಗ್ರಾಮೀಣ ಪ್ರದೇಶಗಳಲ್ಲಿಯೂ ನಡೆದಿವೆ.

ಈಗಲೂ ಇಸ್ಪೀಟ್‌ನ ಜೂಜಾಟದಲ್ಲಿ ಹಣ ಗಳಿಕೆಯ ದುರಾಸೆಗೆ ಬಿದ್ದು ತಮ್ಮಲ್ಲಿದ್ದ ಹಣವನ್ನೆಲ್ಲಾ ಕಳೆದುಕೊಂಡಿರುವುದು ಬೆಳಕಿಗೆ ಬರುತ್ತಿದೆ. ಜಿಲ್ಲೆಯಲ್ಲಿ ಈ ವರ್ಷದ ದೀಪಾವಳಿ ಹಬ್ಬವು ಜೋರಾಗಿ ನಡೆಯಿತು. ನಾರಿಮಣಿಗಳು ಹಬ್ಬದ ಸಡಗರದಲ್ಲಿ
ತೊಡಗಿದ್ದರೆ ಮಕ್ಕಳು, ಯುವಕರು, ವೃದ್ಧರೂ ಇಸ್ಪೀಟ್‌ ಮೋಜು ಮಸ್ತಿಗೆ ಬಿದ್ದು ಜೂಜಾಟದಲ್ಲಿ ತೊಡಗಿದ್ದವರಿಗೆ ಜಿಲ್ಲಾ ಪೊಲೀಸ್‌ ಬರೊಬ್ಬರಿ ಶಾಕ್‌ ನೀಡಿದ್ದಾರೆ.

ಜಿಲ್ಲೆಯಲ್ಲಿ ದೀಪಾವಳಿಯ ಮೂರೇ ದಿನದಲ್ಲಿ ವಿವಿಧಡೆ ಇಸ್ಪೀಟ್‌ ಅಡ್ಡೆ ಮೇಲೆ ದಾಳಿ ನಡೆಸಿರುವ ಪೊಲೀಸ್‌ ಪಡೆಯು 300 ಜನರ ಮೇಲೆ ಕೇಸ್‌ ದಾಖಲಾಗಿದ್ದು, ಒಟ್ಟಾರೆ 53 ಪ್ರಕರಣಗಳು ವಿವಿಧ ಠಾಣೆಯಲ್ಲಿ ದಾಖಲಾಗಿದ್ದು, ದಾಳಿಯ ವೇಳೆ ಬಂ
ಧಿತರಿಂದ 4.75 ಲಕ್ಷ ರೂ. ನಗದು ಹಣ ಹಾಗೂ ಸ್ಥಳದಲ್ಲಿ ವಿವಿಧ ವಸ್ತುಗಳನ್ನು ಜಪ್ತಿ ಮಾಡಿ ಜೂಜೂಕೋರರಿಗೆ ಹಣ ಗಳಿಕೆಯ
ಕನವರಿಕೆಯಲ್ಲಿದ್ದ ಜನರಿಗೆ ಬರೊಬ್ಬರಿ ಬಿಸಿ ಮುಟ್ಟಿಸಿದ್ದಾರೆ.

ಪ್ರತಿ ಹಳ್ಳಿಯಲ್ಲೂ ಜಾಗೃತಿ ಪಡೆ ಕಟ್ಟಲಿ: ನಿರಂತರ ದಾಳಿಯ ಜೊತೆಗೆ ಜಿಲ್ಲೆಯ ಪ್ರತಿ ಹಳ್ಳಿಗಳಲ್ಲಿ ಪೊಲೀಸ್‌ ಇಲಾಖೆಯು ?ಜಾಗೃತಿ ಪಡೆ? ಕಟ್ಟಿ ಅಕ್ರಮ ಚಟುವಟಿಕೆಗಳ ಬಗ್ಗೆ ಹಾಗೂ ಇಸ್ಪೇಟ್‌ ಜೂಜಾಟದ ಮೇಲೆ ನಿಗಾ ಇಡಲಿ. ಇದರಿಂದ ಹಳ್ಳಿಗಳಲ್ಲಿ ಯುವಕರ ಬದುಕು ದಿವಾಳಿಯಾಗುವ ಬದಲು ಸರಿದಾರಿಗೆ ಬರಲು ಸಾಧ್ಯವಾಗಲಿದೆ. ಇತ್ತೀಚೆಗಿನ ದಿನಗಳಲ್ಲಿ ಹಳ್ಳಿಗಳಲ್ಲೂ ಗಾಂಜಾ ವಾಸನೆ ಸದ್ದು ಮಾಡುತ್ತಿದೆ ಎಂಬ ಆಪಾದನೆ ಕೇಳಿ ಬರುತ್ತಿದ್ದು, ಯುವಕರು ಮಾಧಕ ವ್ಯಸನಕ್ಕೆ ಬಲಿ ಆಗುವ ಮೊದಲು ಆರಕ್ಷಕ ಪಡೆ ಕಾಳಜಿ ವಹಿಸಲಿ ಎಂಬ ಒತ್ತಾಯ ಪ್ರಜ್ಞಾವಂತ ವಲಯದಿಂದ ಕೇಳಿ ಬಂದಿದೆ.

Advertisement

ದಾಳಿ ನಿತ್ಯ ನಿರಂತರ ನಡೆಯಲಿ
ಕೇವಲ ದೀಪಾವಳಿಯ ಸಂದರ್ಭಗಳಲ್ಲಿ ಮಾತ್ರ ದಾಳಿಗಳು ನೆಪಮಾತ್ರಕ್ಕೆ ನೆಡೆಯದೇ ನಿತ್ಯ ನಿರಂತರವೂ ನಡೆಯಲಿ. ಪೊಲೀಸ್‌ ಇಲಾಖೆಗೆ ಯಾವ ಸ್ಥಳದಲ್ಲಿ ? ಯಾವ ಸಮಯದಲ್ಲಿ ಯಾವೆಲ್ಲಾ ವ್ಯಕ್ತಿಗಳು ಇಸ್ಪೀಟ್‌ ಜೂಜಾಟ ಆಟವಾಡುತ್ತಾರೆ ಎಂದೆನ್ನುವ ಮಾಹಿತಿ ಪಕ್ಕಾ ಇರುತ್ತದೆ. ಅಲ್ಲದೇ ಅವರಿಗಾಗಿಯೇ ಬಾತ್ಮೀದಾರರು ಸದಾ ಮಾಹಿತಿ ರವಾನೆ ಮಾಡುತ್ತಲೇ ಇರುತ್ತಾರೆ. ಅಂಥಹ ಮಾಹಿತಿ ಆಧರಿಸಿ ನಿತ್ಯವೂ ಹತ್ತಾರು ಕಡೆ ಪೊಲೀಸರು ದಾಳಿ ನಡೆಸಿ ಇಸ್ಪೀಟ್‌ ಜೂಜಾಟದ ದಂಧೆಗೆ ಕಡಿವಾಣ ಹಾಕಬೇಕಿದೆ ಎನ್ನುತ್ತಾರೆ ಜನರು.

ಜಿಲ್ಲೆಯಲ್ಲಿ ದೀಪಾವಳಿಯ ಮೂರು ದಿನಗಳ ಅವ ಧಿಯಲ್ಲಿ ವಿವಿಧ ಪೊಲೀಸ್‌ ಠಾಣೆಗಳ ವ್ಯಾಪ್ತಿಯಲ್ಲಿ ಇಸ್ಪೀಟ್‌ ಆಟವಾಡುತ್ತಿದ್ದ ಅಡ್ಡೆಯ ಮೇಲೆ ದಾಳಿ ನಡೆಸಿ ಒಟ್ಟು 300 ಜನರು ಸೇರಿ 53 ಪ್ರಕರಣಗಳನ್ನು ದಾಖಲಿಸಲಾಗಿದೆ. ದಾಳಿಯ ವೇಳೆ 4.75 ಲಕ್ಷ ರೂ.ನಗದು ವಶಕ್ಕೆ ಪಡೆಯಲಾಗಿದೆ.
ಡಾ| ರಾಮ್‌ ಅರಸಿದ್ದಿ, ಕೊಪ್ಪಳ ಎಸಿ

*ದತ್ತು ಕಮ್ಮಾರ

Advertisement

Udayavani is now on Telegram. Click here to join our channel and stay updated with the latest news.

Next