Advertisement

ಕೊಪ್ಪಳ: ಪೊಲೀಸ್ ಇಲಾಖೆಯಿಂದ 13 ಕೆಜಿ ಗಾಂಜಾ ಗಿಡ ನಾಶ

11:13 PM Feb 09, 2024 | Team Udayavani |

ಕೊಪ್ಪಳ: ಜಿಲ್ಲಾ ಪೊಲೀಸ್ ಇಲಾಖೆಯು ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಳಿ ಮಾಡಿದ ವೇಳೆ 6 ಪ್ರಕರಣದಡಿ ಜಪ್ತಿ ಮಾಡಿದ್ದ ಒಟ್ಟು 13 ಕೆಜಿ 438 ಗ್ರಾಂ ಗಾಂಜಾ ಗಿಡಗಳನ್ನು ತಾಲೂಕಿನ ನಾಗೇಶನಹಳ್ಳಿ ಬಳಿಯ ಜೈವಿಕ ವೈದ್ಯಕೀಯ ತ್ಯಾಜ್ಯ ವಿಲೇವಾರಿ ಘಟಕದ ಬಾಯ್ಲರ್‌ನಲ್ಲಿ ಕೊಪ್ಪಳ ಎಸ್ಪಿ ಯಶೋಧಾ ಒಂಟಗೋಡಿ ಸಮ್ಮುಖದಲ್ಲಿ ನಾಶಪಡಿಸಲಾಯಿತು.

Advertisement

ಕೊಪ್ಪಳ ಜಿಲ್ಲೆಯಲ್ಲಿ 2011, 2016, 2020, 2022, 2023 ರಲ್ಲಿ ಎನ್‌ಡಿಪಿಎಸ್ ಕಾಯ್ದೆಯಡಿ ದಾಖಲಾದ 06 ಪ್ರಕರಣಗಳಲ್ಲಿ ಗಾಂಜಾ ಗಿಡಗಳನ್ನು ಆರೋಪಿಗಳಿಂದ ಜಪ್ತಿ ಮಾಡಲಾಗಿತ್ತು. ಕಾಯ್ದೆ ಹಾಗೂ ನಿಯಮಗಳ ಅನುಸಾರ ಜಿಲ್ಲಾ ಮಾದಕ ವಸ್ತು ವಿಲೇವಾರಿ ಅಧ್ಯಕ್ಷರೂ ಆಗಿರುವ ಕೊಪ್ಪಳ ಎಸ್ಪಿ ಯಶೋಧಾ ಒಂಟಗೋಡಿ, ಎಎಸ್‌ಪಿ ಹೇಮಂತ್ ಕುಮಾರ, ಡಿಎಸ್‌ಪಿ ಮುತ್ತಣ್ಣ, ಸಿದ್ದಲಿಂಗಪ್ಪ ಗೌಡ ಅವರ ಸಮ್ಮುಖದಲ್ಲಿ ತಾಲೂಕಿನ ನಾಗೇಶನಹಳ್ಳಿ ಬಳಿಯ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ವಶಕ್ಕೆ ಪಡೆಲಾಗಿದ್ದ ೧೩.೪೩೮ ಕೆಜಿ ಗಾಂಜಾ ಗಿಡಗಳನ್ನು ವೈದ್ಯಕೀಯ ವಿಧಿ ವಿಧಾನಗಳ ಪ್ರಕಾರ ನಾಶಪಡಿಸಲಾಯಿತು.

ಈ ವೇಳೆ ಜಿಲ್ಲಾ ಅಪರಾಧ ದಾಖಲಾತಿ ವಿಭಾಗದ ಪ್ರಭಾರಿ ಪಿಐ ಡಿ ಸುರೇಶ, ಡಿಸಿಆರ್‌ಬಿ ಸಿಬ್ಬಂದಿಗಳು, ಪರಿಸರ ಇಲಾಖೆಯ ಅಧಿಕಾರಿಗಳು, ವಿಲೇವಾರಿ ಘಟಕದ ಮುಖ್ಯಸ್ಥ ಚಂದ್ರು ಗಡಾದ್ ಸೇರಿ ಸ್ಥಳೀಯರ ಸಮ್ಮುಖದಲ್ಲಿ ನಾಶಪಡಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next