Advertisement

ನಕ್ಸಲ್‌ ಪೀಡಿತ ಮೆಣಸಿನಹಾಡ್ಯದಲ್ಲಿ ಉತ್ತಮ ಮತದಾನ

11:48 AM Apr 19, 2019 | Naveen |

ಕೊಪ್ಪ: ತಾಲೂಕಿನಲ್ಲಿ ಶಾಂತಿಯುತವಾಗಿ ನಡೆದಿದ್ದು, ಶೇ.71 ಮತದಾನವಾಗಿದೆ. ಪಟ್ಟಣದ ಸಖೀ ಮತಗಟ್ಟೆ (62)ರಲ್ಲಿ ಶೇ.64
ಮತದಾನವಾಗಿದ್ದರೆ. ಮೆಣಸಿನಹಾಡ್ಯದ ಸಾಂಪ್ರದಾಯಿಕ ಮತಗಟ್ಟೆ(252)ರಲ್ಲಿ ಶೇ. 92 ಮತದಾನವಾಗಿದೆ. ಕೊಪ್ಪ ಪಟ್ಟಣದಲ್ಲಿ ಶೇ.69 ಮತದಾನವಾಗಿದೆ. ಬೆಳಿಗ್ಗೆ ಕೆಲವು ಮತಗಟ್ಟೆಗಳಲ್ಲಿ ಇವಿಎಂ ಕೈಕೊಟ್ಟಿದ್ದರಿಂದ ಮತದಾನ ವಿಳಂಭವಾಗಿ ಪ್ರಾರಂಭವಾಯಿತು. ತಾಲೂಕಿನ 109 ಮತಗಟ್ಟೆಗಳಲ್ಲಿ ಶಾಂತಿಯುತ ಮತದಾನವಾಗಿದೆ.

Advertisement

ಪಟ್ಟಣದ ಮೂರು ಮತಗಟ್ಟೆಗಳಲ್ಲಿ ಒಟ್ಟು 3615 ಮತದಾರರ ಪೈಕಿ 2492 ಮಂದಿ ಮತಚಲಾಯಿಸಿದ್ದಾರೆ. ಹರಿಹರಪುರದ
ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿಗಳು ಹರಿಹರಪುರದಲ್ಲಿ ಮತಚಲಾಯಿಸಿದರು.

ಪಟ್ಟಣದ ಸಖೀ ಮತಗಟ್ಟೆಯಲ್ಲಿ ಮಹಿಳೆಯರೇ ಹೆಚ್ಚು ಮತದಾನ
ಮಾಡಿದ್ದಾರೆ. 659 ಪುರುಷ ಹಾಗೂ 741 ಮಹಿಳಾ ಮತದಾರರಿದ್ದು ಮತಗಟ್ಟೆಯಲ್ಲಿ 434 ಪುರುಷರು ಹಾಗೂ 460 ಮಹಿಳೆಯರು
ಮತ ಚಲಾಯಿಸಿದ್ದಾರೆ. ಸಖೀ ಮತಗಟ್ಟೆಯಲ್ಲಿ ಇವಿಎಂ ಕೈಕೊಟ್ಟಿದ್ದರಿಂದ ಒಂದು ಗಂಟೆ ಮತದಾನ ವಿಳಂಬವಾಯಿತು. ಉಳಿದಂತೆ ಮತಗಟ್ಟೆ ಸಂಖ್ಯೆ 61ರಲ್ಲಿ ಶೇ. 76, ಮತಗಟ್ಟೆ ಸಂಖ್ಯೆ 63ರಲ್ಲಿ ಶೇ.69 ಮತದಾನವಾಗಿದೆ. ಮೆಣಸಿನಹಾಡ್ಯದಲ್ಲಿರುವ ಸಾಂಪ್ರದಾಯಿಕ ಮತಗಟ್ಟೆಯಲ್ಲಿ 234 ಮತದಾರರ ಪೈಕಿ 216
ಮಂದಿ ಮತಚಲಾಯಿಸುವ ಮೂಲಕ ಅತೀ ಹೆಚ್ಚು ಮತದಾನವಾಗಿದೆ.

ಶಾಸಕ ಟಿ.ಡಿ. ರಾಜೇಗೌಡ, ಮಾಜಿ ಶಾಸಕ ಡಿ.ಎನ್‌. ಜೀವರಾಜ್‌, ಜೆಡಿಎಸ್‌ ರಾಜ್ಯ ಪ್ರಧಾನ ಕಾರ್ಯದರ್ಶಿ ಎಚ್‌.ಜಿ. ವೆಂಕಟೇಶ್‌
ಬೂತ್‌ಗಳಿಗೆ ಭೇಟಿ ನೀಡಿ ತಮ್ಮ ಪಕ್ಷದ ಕಾರ್ಯಕರ್ತರನ್ನು ಹುರಿದುಂಬಿಸುತ್ತಿದ್ದರು. ಕಮ್ಮರಡಿಯ ಮತಗಟ್ಟೆ ಸಂಖ್ಯೆ 31ರಲ್ಲಿ
ಮತಯಂತ್ರ ಕೈಕೊಟ್ಟಿದ್ದರಿಂದ ಎರಡು ಗಂಟೆ ವಿಳಂಭವಾಗಿ ಒಂಭತ್ತಕ್ಕೆ ಪ್ರಾರಂಭವಾಯಿತು. ಪಟ್ಟಣದ ಮೇಲಿನಪೇಟೆಯ ಮತಗಟ್ಟೆ ಸಂಖ್ಯೆ 66 ಹಾಗೂ ಬಾಳಗಡಿಯ
ಮತಗಟ್ಟೆ ಸಂಖ್ಯೆ 82ರಲ್ಲಿ ಅರ್ಧ ಗಂಟೆ ವಿಳಂಬವಾಯಿತು. ಕುಂಚೂರಿನ ಉಪ್ಪಿನಗದ್ದೆ ಮತಗಟ್ಟೆಯಲ್ಲಿ ಪಕ್ಷದ ಏಜೆಂಟ್‌ಗಳು ಬರುವ ಮುನ್ನವೇ ಮತದಾನ ಆರಂಭಿಸಿದ್ದರಿಂದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಅವರನ್ನು ಸಮಾಧಾನ ಪಡಿಸಿ ಮತದಾನ ಮುಂದುವರಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next