Advertisement

ಕೊಪ್ಪದಲ್ಲಿ ಕಾರುಗಳ ನಡುವೆ ಢಿಕ್ಕಿ: ಶಿವಮೊಗ್ಗ ಮೂಲದ ಇಬ್ಬರ ದುರ್ಮರಣ

11:05 AM Mar 08, 2020 | keerthan |

ಕೊಪ್ಪ: ಕ್ವಿಡ್ ಕಾರು ಮತ್ತು ಇನೋವಾ ಕಾರುಗಳ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿ ಇಬ್ಬರು ಸಾವನ್ನಪ್ಪಿರುವ ಘಟನೆ  ಕೊಪ್ಪ ತಾಲೂಕಿನ ಕುದುರೆಗುಂಡಿ ಬಳಿ ಘಟನೆ ಶನಿವಾರ ಮುಂಜಾನೆ ವರದಿಯಾಗಿದೆ.

Advertisement

ಶಿವಮೊಗ್ಗ ಮೂಲದ ನಾಸಿರ್ ಹಾಗೂ ಮಹಮದ್ ಆರೀಫ್ ಅಪಘಾತದಲ್ಲಿ ಮೃತಪಟ್ಟವರು.

ಶಿವಮೊಗ್ಗದಿಂದ ಕೊಪ್ಪಕ್ಕೆ ಬರುತ್ತಿದ್ದ ಕ್ವಿಡ್ ಕಾರು ಹಾಗೂ ಕೊಪ್ಪದಿಂದ ಶಿವಮೊಗ್ಗಕ್ಕೆ ತೆರಳುತ್ತಿದ್ದ ಇನೋವಾ ಕಾರುಗಳ ನಡುವೆ ಢಿಕ್ಕಿ ಸಂಭವಿಸಿದೆ.

ಕ್ವಿಡ್ ಕಾರಿನ ಚಾಲಕನಿಗೂ ಗಂಭೀರ ಗಾಯವಾಗಿದ್ದು ಆಸ್ಪತ್ರೆಗೆ ಆಸ್ಪತ್ರೆ ದಾಖಲಿಸಲಾಗಿದೆ.

ಅಪಘಾತದಲ್ಲಿ ಎರಡು ಕಾರುಗಳು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಅತಿಯಾದ ವೇಗದ ಚಾಲನೆಯೇ ಅಪಘಾತಕ್ಕೆ ಕಾರಣವೆಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

Advertisement

ಘಟನೆ ಸಂಬಂಧ ಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next