Advertisement

ಕೊಪಾರ್ಡಿ ಪ್ರಕರಣ: ಅತ್ಯಾಚಾರಿಗಳಿಗೆ ಗಲ್ಲು

06:40 AM Nov 30, 2017 | Team Udayavani |

ಅಹಮದ್‌ನಗರ: ಮಹಾರಾಷ್ಟ್ರದಾದ್ಯಂತ ಭಾರೀ ಪ್ರತಿ ಭಟನೆ, ಆಕ್ರೋಶಕ್ಕೆ ಕಾರಣವಾಗಿದ್ದ ಕೊಪಾರ್ಡಿ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಮೂವರು ತಪ್ಪಿತಸ್ಥರಿಗೆ ಗಲ್ಲುಶಿಕ್ಷೆ ವಿಧಿಸಿ ಬುಧವಾರ ಇಲ್ಲಿನ ಸೆಷನ್ಸ್‌ ಕೋರ್ಟ್‌ ತೀರ್ಪಿತ್ತಿದೆ.

Advertisement

2016ರಲ್ಲಿ 15 ವರ್ಷದ ಬಾಲಕಿಯ ಮೇಲೆ ಅತ್ಯಾಚಾರಗೈದಿದ್ದ ಮೂವರು ಯುವಕರು, ನಂತರ ಆಕೆಯನ್ನು ಬರ್ಬರವಾಗಿ ಕೊಲೆ ಮಾಡಿದ್ದರು. ಅತ್ಯಾಚಾರದ ಬಳಿಕ ಅವಳ ದೇಹಕ್ಕಿಡೀ ಗಾಯ ಮಾಡಿದ್ದ ಅಪರಾಧಿಗಳು, ಕೈಕಾಲುಗಳನ್ನೂ ಮುರಿದು ಹಾಕಿದ್ದರು. ಘಟನೆಯ ಭೀಕರತೆಯನ್ನು ಪರಿಗಣಿಸಿದ ನ್ಯಾಯಾಲಯ, ಮೂವರು ಆರೋಪಿಗಳನ್ನೂ ದೋಷಿಗಳು ಎಂದು ನ.18ರಂದು ತೀರ್ಪು ನೀಡಿತ್ತು. ಬುಧವಾರ ಶಿಕ್ಷೆ ಘೋಷಿಸಿದ ನ್ಯಾಯಾಲಯ, ಅಪರಾಧಿಗಳಿಗೆ ಮರಣದಂಡನೆಯೇ ಸೂಕ್ತ ಎಂದಿದೆ. ತೀರ್ಪು ಕುರಿತು ಪ್ರತಿಕ್ರಿಯಿಸಿರುವ ಬಾಲಕಿಯ ತಾಯಿ, “ನನ್ನ ಮಗಳಿಗೆ ಇಂದು ನಿಜವಾದ ನ್ಯಾಯ ಸಿಕ್ಕಿತು,’ ಎಂದಿದ್ದಾರೆ. 

ಕೊಪಾರ್ಡಿ ಪ್ರಕರಣವನ್ನು ಖಂಡಿಸಿ ಅಂದು ಮರಾಠರು ಬೃಹತ್‌ ಪ್ರತಿಭಟನಾ ರ್ಯಾಲಿಯನ್ನು ನಡೆಸಿದ್ದರು. ಅಲ್ಲದೆ, ಮುಖ್ಯಮಂತ್ರಿ ರಾಜಿನಾಮೆಗೂ ಒತ್ತಾಯ ಕೇಳಿ ಬಂದಿತ್ತು.

Advertisement

Udayavani is now on Telegram. Click here to join our channel and stay updated with the latest news.

Next