ಕೊಪ್ಪಳ: ಸಾರ್ವಜನಿಕರ ಆಡಳಿತ ನಿಂತಿರುವುದೇ ಅಂಕಿ-ಅಂಶಗಳ ಆಧಾರದ ಮೇಲೆ, ಆದ್ದರಿಂದ ಅಂಕಿ ಸಂಖ್ಯೆಗಳ ಹೊಂದಾಣಿಕೆಯೇ ವ್ಯವಸ್ಥಿತವಾದ ಆಡಳಿತ ಎಂದು ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಕೃಷ್ಣಮೂರ್ತಿ ದೇಸಾಯಿ ಹೇಳಿದ್ದಾರೆ.
ನಗರದ ಜಿಪಂ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ಭಾರತದ ಖ್ಯಾತ ಸಂಖ್ಯಾ ಶಾಸ್ತ್ರಜ್ಞ ಪ್ರೊ| ಪಿ.ಸಿ. ಮಹಾಲನೋಬಿಸ ಅವರ ಜನ್ಮ ದಿನಾಚರಣೆ ಹಾಗೂ 14ನೇ ಸಾಂಖೀಕ ದಿನಾಚರಣೆಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸಮಸ್ಯೆಗಳನ್ನು ಗುರುತಿಸಲು ಅಂಕಿ ಸಂಖ್ಯೆಗಳು ಅತ್ಯವಶ್ಯಕವಾಗಿವೆ. ಸಮಸ್ಯೆ ಪರಿಹರಿಸಲು ಹಾಗೂ ಯೋಜನೆಗಳನ್ನು ನಿಯಂತ್ರಣ ಮಾಡಬೇಕಾದರೆ ಅಂಕಿ ಅಂಶಗಳು ಮುಖ್ಯವಾಗುತ್ತವೆ. ಅದರ ಜೊತೆಗೆ ವ್ಯಕ್ತಿಯ ಜೀವನವು ಸಹ ಪ್ರತಿಷ್ಠೆಯಲ್ಲಿ ಇರಬೇಕು ಎಂದರೆ ಅಂಕಿ ಸಂಖ್ಯೆಗಳ ಪಾತ್ರ ಮಹತ್ವವಾಗಿದೆ ಎಂದರು.
ಪ್ರಾಧ್ಯಾಪಕ ಡಾ| ಪ್ರಭುರಾಜ್ ನಾಯ್ಕ ಮಾತನಾಡಿ, ಅಂಕಿ-ಅಂಶಗಳ ನಿಖರತೆಯಲ್ಲಿ ವ್ಯತ್ಯಾಸವಾದರೆ ಯಾವುದೇ ಯೋಜನೆಗಳು ಸಫಲವಾಗಲ್ಲ. ಸಮಸ್ಯೆಗಳನ್ನು ಗುರುತಿಸಲು, ದುಂದುವೆಚ್ಚಕ್ಕೆ ಕಡಿವಾಣ ಹಾಕಲು ಅಂಕಿ-ಅಂಶಗಳು ಅತ್ಯವಶ್ಯವಾಗಿವೆ. ಒಂದು ನಿರ್ದಿಷ್ಟ ಗುರಿ ತಲುಪಬೇಕಾದರೆ, ಸಮಸ್ಯೆಗಳಿಗೆ ಪರಿಹಾರ ಪಡೆದುಕೊಳ್ಳಲು, ಒಂದು ಯೋಜನೆ ಯಶಸ್ವಿಗೊಳ್ಳಬೇಕಾದರೆ ಹಾಗೂ ಯೋಜನೆಗಳ ನಿಯಂತ್ರಣ ಮಾಡಬೇಕಾದರೆ ಅಂಕಿ-ಅಂಶಗಳು ಮುಖ್ಯವಾಗಿವೆ. ತಂತ್ರಜ್ಞಾನದಲ್ಲಿ ಅಂಕಿ ಅಂಶಗಳು ಬಲವಾದ ಪ್ರಾಬಲ್ಯವನ್ನು ಹೊಂದಿವೆ. ಸರ್ಕಾರದ ಎಲ್ಲಾ ಇಲಾಖೆಗಳು ನಿಖರವಾಗಿ ಅಂಕಿ-ಅಂಶಗಳನ್ನು ಕೊಟ್ಟಾಗ ಮಾತ್ರ ಪ್ರಗತಿ ಸಾಧ್ಯವಾಗುತ್ತದೆ ಎಂದರು.
ಜಿಪಂ ಮುಖ್ಯ ಯೋಜನಾಧಿಕಾರಿ ಸಿ.ಆರ್. ರಾಮಮೂರ್ತಿ ಮಾತನಾಡಿದರು. ಎಸಿ ನಾರಾಯಣರೆಡ್ಡಿ ಕನಕರೆಡ್ಡಿ ಪ್ರಮಾಣ ವಚನ ಬೋಧಿಸಿದರು. ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಅಕ್ಕಮಹಾದೇವಿ ಕೆ. ಹಾಗೂ ಜಿಲ್ಲಾ ಮತ್ತು ತಾಲೂಕು ಮಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.
ಸಹಾಯಕ ಸಾಂಖೀಕ ಅಧಿಕಾರಿ ಬಸವರಾಜ ಮಾರನಬಸರಿ ನಿರೂಪಿಸಿದರು. ಸರೋಜಾ ಮತ್ತು ಕಾಮಾಕ್ಷಿ ಪ್ರಾರ್ಥಿಸಿದರು. ಸಹಾಯ ಸಾಂಖೀÂಕ ಅಧಿಕಾರಿ ಹುಲಗಪ್ಪ ಬಾವುಟೆ ಸ್ವಾಗತಿಸಿದರು. ಆರ್.ಎಚ್. ನದಾಫ್ ವಂದಿಸಿದರು.