Advertisement

ಕೊಪಾ ಅಮೆರಿಕ: ಆರ್ಜೆಂಟೀನಾ ಫೈನಲ್‌ಗೆ

10:13 PM Jul 07, 2021 | Team Udayavani |

ಬ್ರಸಿಲಿಯಾ (ಬ್ರಝಿಲ್‌) : ಶನಿವಾರದ “ಕೊಪಾ ಅಮೆರಿಕ’ ಫ‌ುಟ್‌ಬಾಲ್‌ ಪ್ರಶಸ್ತಿ ಸೆಣಸಾಟದಲ್ಲಿ ಲಿಯೋನೆಲ್‌ ಮೆಸ್ಸಿ ಅವರ ಆರ್ಜೆಂಟೀನಾ ಹಾಗೂ ನೇಯ್ಮರ್‌ ಅವರ ಬ್ರಝಿಲ್‌ ತಂಡಗಳು ಮುಖಾಮುಖೀಯಾಗಲಿವೆ. ರಿಯೋ ಡಿ ಜನೈರೋದ ಐತಿಹಾಸಿಕ “ಮರಕಾನ ಸ್ಟೇಡಿಯಂ’ನಲ್ಲಿ ಈ ಕಾಲ್ಚೆಂಡಿನ ಕದನ ಏರ್ಪಡಲಿದೆ.

Advertisement

ದ್ವಿತೀಯ ಸೆಮಿಫೈನಲ್‌ನಲ್ಲಿ ಆರ್ಜೆಂಟೀನಾ ಪಡೆ ಶೂಟೌಟ್‌ನಲ್ಲಿ ಕೊಲಂಬಿಯಾವನ್ನು 3-2 ಗೋಲುಗಳಿಂದ ಕೆಡವಿತು. ಗೋಲ್‌ಕೀಪರ್‌ ಎಮಿಲಿಯಾನೊ ಮಾರ್ಟಿನೆಜ್‌ 3 ಸಲ ಚೆಂಡನ್ನು ತಡೆದು ತಂಡಕ್ಕೆ ಗೆಲುವು ತಂದುಕೊಡುವಲ್ಲಿ ಮಹತ್ವದ ಪಾತ್ರ ವಹಿಸಿದರು. ನಿಗದಿತ ಅವಧಿಯಲ್ಲಿ ಪಂದ್ಯ 1-1ರಿಂದ ಸಮನಾಗಿತ್ತು.

“ಡಿಬು ಓರ್ವ ಅಸಾಮಾನ್ಯ ಹಾಗೂ ಚಮತ್ಕಾರಿ ಕೀಪರ್‌. ನಮಗೆ ಅವರ ಮೇಲೆ ಭಾರೀ ನಂಬಿಕೆ ಇದೆ…’ ಎಂಬುದಾಗಿ ಮೆಸ್ಸಿ ಹೇಳಿದರು. “ಡಿಬು’ ಎಂಬುದು ಮಾರ್ಟಿನೆಜ್‌ ಅವರ ನಿಕ್‌ನೇಮ್‌.

ಇದನ್ನೂ ಓದಿ :ಕ್ಷಿಪ್ರಗತಿಯಲ್ಲಿ ಲಸಿಕೆ ಹಾಕಿಸಿದಲ್ಲಿ ಭಾರತದ ಅರ್ಥವ್ಯವಸ್ಥೆ ಚೇತರಿಕೆ : ಫಿಚ್‌

1993ರಲ್ಲಿ ಚಾಂಪಿಯನ್‌
ಆರ್ಜೆಂಟೀನಾ ಕೊನೆಯ ಸಲ ಕೊಪಾ ಅಮೆರಿಕ ಚಾಂಪಿಯನ್‌ ಎನಿಸಿದ್ದು 1993ರಲ್ಲಿ. ಅಂದಿನ ಸೆಮಿಫೈನಲ್‌ ಶೂಟೌಟ್‌ನಲ್ಲೂ ಅದು ಕೊಲಂಬಿಯಾವನ್ನು ಮಣಿಸಿತ್ತು. ಆದರೆ ಅಂತರ 6-5 ಆಗಿತ್ತು. ಫೈನಲ್‌ನಲ್ಲಿ ಮೆಕ್ಸಿಕೊವನ್ನು 2-1ರಿಂದ ಮಣಿಸಿ ಕಪ್‌ ಎತ್ತಿತ್ತು.

Advertisement

ಆದರೆ ಈ ಬಾರಿ ಆತಿಥೇಯ ಬ್ರಝಿಲ್‌ ಎದುರಿಗಿದೆ. ಪೆರು ತಂಡವನ್ನು 1-0 ಅಂತರದಿಂದ ಮಣಿಸಿ ಬಂದ ಬ್ರಝಿಲ್‌, ತವರಿನ ಫೈನಲ್‌ನಲ್ಲಿ ಒಮ್ಮೆಯೂ ಸೋತಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next