Advertisement
2017ರ ನವೆಂಬರ್ 19ರಂದು ಅಂದಿನ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಹಾಗೂ ಆರೋಗ್ಯ ಸಚಿವ ರಮೇಶ್ ಕುಮಾರ್ ಅವರು ಬಿ.ಆರ್. ಶೆಟ್ಟಿ ಅವರು ನಿರ್ಮಿಸಿದ ಸರಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯನ್ನು ಉದ್ಘಾಟಿಸಿದ್ದರು. ಆಸ್ಪತ್ರೆಯ ಮೇಲ್ವಿಚಾರಣೆಯನ್ನು ಜಿಲ್ಲಾಧಿಕಾರಿಗಳ ನೇತೃತ್ವದ ಸಮಿತಿ ನಡೆಸುತ್ತಿತ್ತು. ಇಲ್ಲಿನ ಸಿಬಂದಿ ನೇಮಕ ಮತ್ತು ಎಲ್ಲ ಉಸ್ತುವಾರಿ ಬಿಆರ್‌ಎಸ್ ಸಂಸ್ಥೆ ಕೈಯ್ಯಲ್ಲಿತ್ತು. ಆದರೆ ಈಗ ಆಸ್ಪತ್ರೆಯನ್ನು ನಡೆಸಲು ಸಾಧ್ಯವಿಲ್ಲ ಎಂದು ಬಿಆರ್‌ಎಸ್ ಸಂಸ್ಥೆ ಸರಕಾರಕ್ಕೆ ಪತ್ರ ಬರೆದಿದೆ.
ಅಬುಧಾಬಿಯ “ಎನ್‌ಎಂಸಿ ಹೆಲ್ತ್ ‘ ಆರೋಗ್ಯ ಸಂಸ್ಥೆಯ ಸಂಸ್ಥಾಪಕ ಉಡುಪಿ ಮೂಲದ ಉದ್ಯಮಿ ಡಾ| ಬಿ.ಆರ್. ಶೆಟ್ಟಿ ಅವರು ತಾವೇ ಸ್ಥಾಪಿಸಿದ ಸಂಸ್ಥೆಗೆ ರಾಜೀನಾಮೆ ನೀಡಿದ್ದು, ಅಲ್ಲಿನ ಸರಕಾರ ಖಾತೆಗಳನ್ನು ಸದ್ಯ ಮುಟ್ಟುಗೋಲು ಹಾಕಿರುವುದರಿಂದ ಉಡುಪಿ ಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಗೆ ಆರ್ಥಿಕ ಮುಗ್ಗಟ್ಟು ಎದುರಾಗಿದೆ. ಇದರಿಂದ ಸರಕಾರಕ್ಕೆ ಬಿಆರ್‌ಎಸ್‌ನಿಂದ ಮನವಿ ಹೋಗಿದೆ. 30 ವರ್ಷಗಳಿಗೆ ಲೀಸ್
ಉಡುಪಿ ನಗರಸಭಾ ಕಟ್ಟಡದ ಎದುರಿನ ಹಾಜಿ ಅಬ್ದುಲ್ಲ ಮಹಿಳೆಯರು ಮತ್ತು ಮಕ್ಕಳ ಆಸ್ಪತ್ರೆಯ ಒಟ್ಟು 4.07 ಎಕರೆ ವಿಸ್ತೀರ್ಣದ ಮೂರು ನಿವೇಶನಗಳನ್ನೊಳಗೊಂಡ ಜಮೀನನ್ನು ಡಾ| ಬಿ.ಆರ್. ಶೆಟ್ಟಿ ಅಧ್ಯಕ್ಷರಾಗಿರುವ ಬಿ.ಆರ್.ಎಸ್. ಹೆಲ್ತ್ ರಿಸರ್ಚ್ ಇನ್‌ಸ್ಟಿಟ್ಯೂಟ್ ಪ್ರೈ.ಲಿ.ಗೆ 30 ವರ್ಷಗಳ ಅವಧಿಗೆ ಗುತ್ತಿಗೆ ಆಧಾರದಲ್ಲಿ ನೀಡಲು ಹಾಗೂ ಅಗತ್ಯವಿದ್ದಲ್ಲಿ ಇನ್ನೂ 30 ವರ್ಷಗಳ ಅವಧಿಗೆ ಲೀಸ್‌ನ್ನು ಮುಂದುವರಿಸಲು ರಾಜ್ಯ ಸರಕಾರ ಹಾಗೂ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಒಪ್ಪಂದ ಮಾಡಿಕೊಂಡಿತ್ತು.
Related Articles
– ಸದಾಶಿವ ಪ್ರಭು,
ಅಪರ ಜಿಲ್ಲಾಧಿಕಾರಿ, ಉಡುಪಿ
Advertisement