Advertisement
ಇವರು ಒಟ್ಟು 22 ಎಕರೆ ಜಮೀನು ಹೊಂದಿದ್ದಾರೆ. ಇವರ ಮನೆಯಲ್ಲಿ 32 ದೇಸಿ ಹಸುಗಳು, 8 ಕರುಗಳಿವೆ. ಕೃಷಿ ಚಟುವಟಿಕೆಗಳಿಗೆ 3ಜತೆ ಎತ್ತುಗಳಿವೆ. 5 ಜರ್ಸಿ ತಳಿಯ ಹಸುಗಳು, 3ಕರುಗಳು, 52 ಕುರಿಗಳು, 50 ನಾಟಿ ಕೋಳಿಗಳು, 15 ಪಾರಿವಾಳಗಳು ಹಾಗೂ ನಾಲ್ಕೈದು ನಾಯಿಗಳಿವೆ. ದನಗಳಿರುವುದರಿಂದ ಕೊಟ್ಟಿಗೆ ಗೊಬ್ಬರವನ್ನೇ ಹೆಚ್ಚು ಬಳಸುತ್ತಾರೆ. ಎರೆಹುಳು ಗೊಬ್ಬರವನ್ನು ಸಹ ಸ್ವತಃ ತಯಾರಿಸಿ ಬಳಸುತ್ತಾರೆ. ಆದರೆ ರಾಸಾಯನಿಕ ಗೊಬ್ಬರ ಬಳಕೆ ಕಡಿಮೆ.
Related Articles
Advertisement
ನಾಲ್ವರು ಸಹೋದರರಿರುವ ಈ ಅವಿಭಕ್ತ ಕುಟುಂಬದಲ್ಲಿ ಕೊನೆಯವರಾದ ಸತೀಶ ಕೋರಿಗೌಡ್ರ ಅವರ ಪತ್ನಿ ಉಮಾ ಕೋರಿಗೌಡ್ರ ಕೃಷಿಯಲ್ಲಿ ಸಾಧನೆ ಮಾಡುವುದರ ಮೂಲಕ ಕುಟುಂಬದ ಗೌರವವನ್ನು ಇನ್ನಷ್ಟು ಹೆಚ್ಚಿಸಿದ್ದಾರೆ. ಎಸ್ಸೆಸ್ಸೆಲ್ಸಿವರೆಗೆ ಓದಿರುವ ಅವರು ಕುಟುಂಬ ಸದಸ್ಯರೊಂದಿಗೆ ಸೇರಿ ಕೃಷಿಯಲ್ಲಿಯೇ ಬದುಕು ಕಟ್ಟಿಕೊಳ್ಳುತ್ತಿದ್ದಾರೆ. ಉಮಾ ಸತೀಶ ಕೋರಿಗೌಡ್ರ ಅವರು 2018ರ ಕೃಷಿ ಮೇಳದಲ್ಲಿ ಧಾರವಾಡ ಕೃಷಿ ವಿಶ್ವವಿದ್ಯಾಲಯದಿಂದ ‘ಶ್ರೇಷ್ಠ ಯುವ ಕೃಷಿಕ ಮಹಿಳೆ’ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಶ್ರೇಷ್ಠ ಯುವ ಕೃಷಿಕ ಮತ್ತು ಶ್ರೇಷ್ಠ ಯುವ ಕೃಷಿ ಮಹಿಳೆ ಪ್ರಶಸ್ತಿ ಪುರಸ್ಕೃತರಿಗೆ ಫೆಬ್ರುವರಿ ತಿಂಗಳಲ್ಲಿ ಧಾರವಾಡ ಕೃಷಿ ವಿಶ್ವವಿದ್ಯಾಲಯದಿಂದ ‘ಕೃಷಿಯಲ್ಲಿ ನೂತನ ತಾಂತ್ರಿಕತೆಗಳು’ ವಿಷಯ ಬಗ್ಗೆ 5 ದಿನಗಳ ಕಾಲ ತರಬೇತಿ ನೀಡಲಾಯಿತು. ಕೃಷಿಯಲ್ಲಿ ಹೊಸ ತಾಂತ್ರಿಕತೆ ಬಳಸಿಕೊಳ್ಳಲು ಈ ತರಬೇತಿ ತುಂಬಾ ಸಹಕಾರಿಯಾಯ್ತು ಎನ್ನುತ್ತಾರೆ ಉಮಾ ಕೋರಿಗೌಡ್ರ ತಿಳಿಸಿದರು.
ನಾವು ನಾಲ್ವರು ಅಣ್ಣ-ತಮ್ಮಂದಿರು ಹಾಗೂ ಪತ್ನಿಯರು ಸಂಪೂರ್ಣ ಕೃಷಿಯಲ್ಲಿಯೇ ತೊಡಗಿದ್ದೇವೆ. ಕೃಷಿ, ಹೈನುಗಾರಿಕೆ, ಕುರಿ ಸಾಕಾಣಿಕೆಯೇ ನಮ್ಮ ಮನೆಯ ದೇವರಿದ್ದಂತೆ. ಇದರಿಂದ ನಮ್ಮ ಬದುಕು ಎತ್ತರಕ್ಕೇರಿದೆ. ಎಲ್ಲರೂ ಕೃಷಿಯಲ್ಲಿ ತೊಡಗಿರುವುದರಿಂದ ಕೂಲಿ ಕಾರ್ಮಿಕರ ಬಳಕೆ ಕಡಿಮೆ. ಹಾಗಾಗಿ ಕೃಷಿಯಲ್ಲಿ ಲಾಭ ಕಾಣಲು ಸಾಧ್ಯವಾಗಿದೆ ಎನ್ನುತ್ತಾರೆ ಸತೀಶ ಕೋರಿಗೌಡ್ರ.
•ನಾಲ್ವರು ಅಣ್ಣ-ತಮ್ಮಂದಿರು ಎಲ್ಲರೂ ಅಪ್ಪಟ ಕೃಷಿಕರೇ
•22ಎಕರೆ ಸ್ವಂತ ಜಮೀನಿದೆ, 10ಎಕರೆ ಲಾವಣಿಯೂ ಮಾಡುತ್ತಾರೆ
•ದನ-ಕರುಗಳಿವೆ, ಹೊಲಕ್ಕೆ ಕೊಟ್ಟಿಗೆ ಗೊಬ್ಬರವನ್ನೇ ಬಳಸುತ್ತಾರೆ
•ಎರೆಹುಳು ಗೊಬ್ಬರ ಸ್ವತಃ ತಯಾರಿಸಿ, ಹೊಲಗಳಿಗೆ ಹಾಕುತ್ತಾರೆ
•ಸಿದ್ಧಲಿಂಗಯ್ಯ ಗೌಡರ್