Advertisement

ಕೂಳೂರು ಹಳೇ ಸೇತುವೆ ನೂತನ ತಂತ್ರಜ್ಞಾನದೊಂದಿಗೆ ದುರಸ್ತಿ

08:50 AM May 21, 2020 | keerthan |

ಮಂಗಳೂರು: ಇಲ್ಲಿನ ಹಳೇ ಸೇತುವೆಯನ್ನು ನೂತನ ತಂತ್ರಜ್ಞಾನದೊಂದಿಗೆ ದುರಸ್ತಿ ಮಾಡಲಾಗಿದ್ದು, ಸಂಸದ ನಳಿನ್ ಕುಮಾರ್ ಕಟೀಲ್ ಅವರು ಬುಧವಾರ ಸಾಂಕೇತಿಕವಾಗಿ ಉದ್ಘಾಟಿಸಿದರು.

Advertisement

ಮೈಕ್ರೋ ಕೊನ್ಟೆಸ್ಟ್ ತಂತ್ರಜ್ಞಾನದೊಂದಿಗೆ ಇದನ್ನು 38 ಲಕ್ಷ ರೂ.ವೆಚ್ಚದಲ್ಲಿ  ದುರಸ್ತಿಗೊಳಿಸಲಾಗಿದೆ.ಈ ಸೇತುವೆ ಜೀರ್ಣಾವಸ್ಥೆಯಲ್ಲಿತ್ತು.ಇದನ್ನು ದುರಸ್ತಿ ಮಾಡದೆ ನೂತನ ಸೇತುವೆ ನಿರ್ಮಾಣಕ್ಕಿಳಿದರೆ ವಾಹನ ಓಡಾಟಕ್ಕೆ ಸಮಸ್ಯೆ ಆಗುತ್ತಿದೆ. ಹೀಗಾಗಿ ಇದನ್ನು ದುರಸ್ತಿ ಗೊಳಿಸಲಾಗಿದೆ. ಹೊಸ ಸೇತುವೆ ಶೀಘ್ರ ನಿರ್ಮಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಇದೇ ವೇಳೆ ಗುರುಪುರ ಸೇತುವೆ ಕುರಿತಂತೆ ಪ್ರಶ್ನೆಗೆ ಉತ್ತರಿಸಿದ ಅವರು ಸೇತುವೆ ಕೆಲಸ ಪೂರ್ಣವಾಗಿದ್ದು ಸಂಪರ್ಕ ರಸ್ತೆ ನಿರ್ಮಾಣವಾಗಬೇಕಿದೆ. ಕೋವಿಡ್-19  ಸಮಸ್ಯೆಯಿಂದ ವಿಳಂಬವಾಗಿದೆ ಎಂದರು. ಪಂಪ್ ವೆಲ್ ಮೇಲ್ಸೇತುವೆ ಬಗ್ಗೆ ಯಾವುದೇ ಭೀತಿ ಬೇಡ. ತಜ್ಞರು ಇದರಿಂದ‌ ಸಮಸ್ಯೆ ಇಲ್ಲ ಎಂದಿದ್ದಾರೆ ಎಂದರು.

ಶಾಸಕ ಡಾ.ಭರತ್ ಶೆಟ್ಟಿ, ನಿತಿನ್ ಕುಮಾರ್,ತಿಲಕ್ ರಾಜ್ ಕೃಷ್ಣಾಪುರ,ಹೆದ್ದಾರಿ ಅಧಿಕಾರಿಗಳಾದ ಶಿಶು ಮೋಹನ್ ಉಪಸ್ಥಿತರಿದ್ದರು

Advertisement

Udayavani is now on Telegram. Click here to join our channel and stay updated with the latest news.

Next