Advertisement

10 ಕೋಟಿ ವೆಚ್ಚದಲ್ಲಿ ಮಿನಿ ವಿಧಾನಸೌಧ ನಿರ್ಮಾಣ

04:50 PM Aug 07, 2019 | Naveen |

ಕೂಡ್ಲಿಗಿ: ತಾಲೂಕಿನ ಜನತೆಯ ಬಹುದಿನಗಳ ಬೇಡಿಕೆಯಾದ ಮಿನಿ ವಿಧಾನಸಭಾ ನಿರ್ಮಾಣದ ಕನಸು ಈಗ ನನಸಾಗಿದ್ದು, 10 ಕೋಟಿ ವೆಚ್ಚದಲ್ಲಿ ಸುಸಜ್ಜಿತವಾಗಿ ಅತ್ಯಾಧುನಿಕ ಸೌಲಭ್ಯಗಳಿಂದ ನಿರ್ಮಾಣವಾಗಲಿದೆ ಎಂದು ಶಾಸಕ ಎನ್‌.ವೈ. ಗೋಪಾಲಕೃಷ್ಣ ಹೇಳಿದರು.

Advertisement

ಪಟ್ಟಣದ ತಹಶೀಲ್ದಾರ್‌ ಕಚೇರಿ ಆವರಣದಲ್ಲಿ ಮಿನಿ ವಿಧಾನಸೌಧ ಕಟ್ಟಡ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು. ನನ್ನ ಅವಧಿಯಲ್ಲಿ ಮಿನಿವಿಧಾನಸೌಧ ನಿರ್ಮಾಣ ಆಗುತ್ತಿರುವುದು ಸಂತಸ ತಂದಿದೆ. ಮಿನಿ ವಿಧಾನಸೌಧ ಕೂಡ್ಲಿಗಿ ತಾಲೂಕಿನ ಹೆಮ್ಮೆ ಎಂದು ಹೇಳಿದರು.

1.82 ಎಕರೆ ವಿಸ್ತೀರ್ಣದಲ್ಲಿ ಮಿನಿ ವಿಧಾನಸೌಧಕ್ಕೆ 10 ಕೋಟಿ ಹಣಕ್ಕೆ ಆಡಳಿತಾತ್ಮಕ ಮುಂಜೂರಾತಿ ದೊರೆತಿದ್ದು, ಕರ್ನಾಟಕ ಗೃಹಮಂಡಳಿ ನಿರ್ವಹಣೆ ಮಾಡುತ್ತಿದೆ. ಗಂಗಾವತಿಯ ಶ್ರೀ ಲಕ್ಷ್ಮಿರಾಮ ಕನ್ಸ್‌ಟ್ರಕ್ಷನ್‌ ಕಾಮಗಾರಿಯ ಗುತ್ತಿಗೆ ಪಡೆದಿದೆ. ಕಾಮಗಾರಿ ಆದಷ್ಟು ಬೇಗನೆ ಪ್ರಾರಂಭವಾಗಲಿದೆ ಎಂದು ತಿಳಿಸಿದರು.

ಮೊದಲ ಹಂತದ ಕಾಮಗಾರಿಯಲ್ಲಿ 1358 ಚದರ ಮೀಟರ್‌ ನೆಲ ಅಂತಸ್ತಿನಲ್ಲಿ ಕಟ್ಟಡ ನಿರ್ಮಾಣವಾಗಲಿದೆ. ಮೊದಲ ಮಹಡಿಯಲ್ಲಿ 977 ಚದರ ಮೀಟರ್‌ ಹಾಗೂ 2ನೇ ಮಹಡಿಯಲ್ಲಿ ಸಹ 977 ಚದರ ಮೀಟರ್‌ ವಿಸ್ತೀರ್ಣದಲ್ಲಿ ಕಟ್ಟಡ ನಿರ್ಮಾಣವಾಗಲಿದೆ. ನೂತನ ಮಿನಿ ವಿಧಾನಸೌಧದಲ್ಲಿ ಲಿಪ್ಟ್ ಗಳು , ಅಗ್ನಿಶಾಮಕ ವ್ಯವಸ್ಥೆ, ಲ್ಯಾನ್‌ ವ್ಯವಸ್ಥೆ, ಸಿ.ಸಿ.ಕ್ಯಾಮರಾ, ಸೌರ ವಿದ್ಯುತ್‌ ದೀಪಗಳು ಸೇರಿದಂತೆ ಹಲವು ಅತ್ಯಾಧುನಿಕ ಸೌಲಭ್ಯಗಳು ಇರಲಿವೆ ಎಂದರು.

ಬಿಜೆಪಿ ಮುಖಂಡರಾದ ಬಂಗಾರು ಹನುಮಂತು, ಜಿಲ್ಲಾ ಪಂಚಾಯ್ತಿ ಸದಸ್ಯರಾದ ಎಂ.ಎಂ.ಜೆ.ಹರ್ಷವರ್ದನ್‌, ಎಚ್.ರೇವಣ್ಣ, ಬಿಜೆಪಿ ತಾಲೂಕು ಅಧ್ಯಕ್ಷ ಕೆ.ಎಚ್.ವೀರನಗೌಡ, ಮುಖಂಡರಾದ ಟಿ.ಜಿ.ಮಲ್ಲಿಕಾರ್ಜುನಗೌಡ, ಎಸ್‌.ದುರುಗೇಶ್‌, ಅಶೋಕ್‌ ಬಾಬುರಾವ್‌, ಹುಲಿಕುಂಟೆಪ್ಪ, ತಹಶೀಲ್ದಾರ್‌ ಮಹಾಬಲೇಶ್ವರ, ತಾ.ಪಂ ಇಒ ಬಸಣ್ಣ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next