Advertisement
ಅವರು ತಾಲೂಕಿನ ಬಣವಿಕಲ್ಲು ಗ್ರಾಮದ ಪಂಚಮಸಾಲಿ ಗ್ರಾಮಘಟಕದಿಂದ ಆಯೋಜಿಸಿದ್ದ ಪಂಚಮಸಾಲಿ ಸಮಾಜದ 25ನೇ ವರ್ಷಾಚರಣೆಯ ಬೆಳ್ಳಿ ಬೆಡಗು ಕಾರ್ಯಕ್ರಮ ಹಾಗೂ ದೇಶದ ಮೊದಲ ಮಹಿಳಾ ಸ್ವಾತಂತ್ರ್ಯ ಹೋರಾಟಗಾರ್ತಿ ಕಿತ್ತೂರು ರಾಣಿ ಚನ್ನಮ್ಮನ 196ನೇ ಜಯಂತ್ಯುತ್ಸವ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಮಾತನಾಡಿದರು.
Related Articles
Advertisement
ಹೂವಿನಹಡಗಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ| ಕೆ. ಸತೀಶ್ ಉಪನ್ಯಾಸ ನೀಡಿ, ವಿಶ್ವದ ಯಾವ ದೇಶಕ್ಕೂ ಇಲ್ಲದ ಇತಿಹಾಸ ನಮ್ಮ ದೇಶಕ್ಕಿದ್ದು 3ಸಾವಿರ ವರ್ಷಗಳ ಇತಿಹಾಸ ಭಾರತಕ್ಕಿದೆ ಕಿತ್ತೂರು ಚನ್ನಮ್ಮ ತನ್ನ ಸಂಸ್ಥಾನ ಉಳಿಸಿಕೊಳ್ಳುವುದರ ಜೊತೆಗೆ ಭಾರತ ದೇಶದ ಸ್ವಾತಂತ್ರ್ಯಕ್ಕೆ ಕಾರಣವಾಗಿದ್ದು ಇವಳ ಸಮಾಜಸೇವೆ, ಶೌರ್ಯ,ದೇಶಪ್ರೇಮ ಇಂದಿನ ಮಹಿಳೆಯರಿಗೆ ಆದರ್ಶವಾಗಿದೆ ಎಂದರು.
ರಾಜ್ಯ ಪಂಚಮಸಾಲಿ ಸಮಾಜದ ಅಧ್ಯಕ್ಷ ಬಿ. ನಾಗನಗೌಡ ಕಾರ್ಯಕ್ರಮ ಉದ್ಘಾಟಿಸಿದರು. ಕೂಡ್ಲಿಗಿಯ ತಾಲೂಕು ಪಂಚಮಸಾಲಿ ಸಮಾಜದ ನಿಕಟಪೂರ್ವ ಅಧ್ಯಕ್ಷ ಎಚ್. ಚಿದಾನಂದಪ್ಪ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಪಂಚಮಸಾಲಿ ಸಮಾಜದ ಅಧ್ಯಕ್ಷ ಬಿ.ಕುಮಾರಸ್ವಾಮಿ, ರಾಜ್ಯ ಪಂಚಮಸಾಲಿ ಸಮಾಜದ ಕಾರ್ಯದರ್ಶಿ ಹನಸಿ ಸಿದ್ದೇಶ, ಕೂಡ್ಲಿಗಿ ತಾಲೂಕು ಪಂಚಮಸಾಲಿ ಸಮಾಜದ ಅಧ್ಯಕ್ಷ ಟಿ.ಜಿ. ಮಲ್ಲಿಕಾರ್ಜುನಗೌಡ, ಜಿ.ಪಂ. ಸದಸ್ಯರಾದ ಎಚ್.ರೇವಣ್ಣ, ಆಶಾ ತಿಪ್ಪೇಸ್ವಾಮಿ, ತಾಪಂ ಸದಸ್ಯರಾದ ಜಿ.ಸಿದ್ದಮ್ಮ ಅಜ್ಜನಗೌಡ, ರತ್ನಮ್ಮ ಲಿಂಗನಗೌಡ, ಕೆ.ಜಿ.ಗುರುಸಿದ್ದನಗೌಡ, ಎಚ್.ಬಿ. ಶರಣನಗೌಡ ಸೇರಿದಂತೆ ಪಂಚಮಸಾಲಿ ಸಮಾಜದ ಬಣವಿಕಲ್ಲು ಗ್ರಾಮ ಘಟಕದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಲಾಯಿತು. ಕಾರ್ಯಕ್ರಮಕ್ಕೂ ಮುಂಚೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಕಿತ್ತೂರು ರಾಣಿ ಚನ್ನಮ್ಮನ ಭಾವಚಿತ್ರದ ಮೆರವಣಿಗೆ ಹಾಗೂ ಬೈಕ್ ರ್ಯಾಲಿ ನಡೆಯಿತು. ಪ್ರಶಾಂತಗೌಡ ಸ್ವಾಗತಿಸಿದರು. ಸಿದ್ದಾರಾಧ್ಯ ನಿರೂಪಿಸಿದರು. ಬಣವಿಕಲ್ಲು ಯರ್ರಿಸ್ವಾಮಿ ವಂದಿಸಿದರು.