Advertisement

ಕೂಡ್ಲಿಗೆಪ್ಪ-ಬೀರಲಿಂಗೇಶ್ವರಜೋಡು ಪಲ್ಲಕ್ಕಿ ಉತ್ಸವ

04:43 PM Oct 21, 2017 | Team Udayavani |

ಹುಣಸಗಿ: ಸಮೀಪದ ವಜ್ಜಲ ಗ್ರಾಮದಲ್ಲಿ ಕೂಡ್ಲಿಗೆಪ್ಪ ದೇವರ ಮತ್ತು ಬೀರಲಿಂಗೇಶ್ವರ ಜಾತ್ರೆ ಶುಕ್ರವಾರ ವಿಜೃಂಭಣೆಯಿಂದ ನಡೆಯಿತು. ಎಲ್ಲರ ಮನೆಯ ಮುಂದೆ ಬಂದ ಪಲ್ಲಕ್ಕಿ ಉತ್ಸವಕ್ಕೆ ನೀರನ್ನು ಹಾಕಿ ಬರಮಾಡಿಕೊಳ್ಳಲಾಯಿತು. ಬೆಳಗ್ಗೆ ವಿಶೇಷ ನಂದಿ ಮತ್ತು ಕಂಟ್ಲಿ ಪೂಜೆ ಸಲ್ಲಿಸಿದ ನಂತರ ಜೋಡು ಪಲ್ಲಕ್ಕಿಯಲ್ಲಿ ಎರಡೂ ದೇವರ ಮೆರವಣಿಗೆ ನಡೆಯಿತು. ಮೆರವಣಿಗೆಯಲ್ಲಿ ವಿವಿಧ ಕಲಾ ತಂಡಗಳ ಡೊಳ್ಳು ಕುಣಿತ, ಆಕರ್ಷಕ ವೀರಗಾಸೆ ಕುಣಿತ ಗಮನ ಸೆಳೆಯಿತು. ಜಾತ್ರೆ ಅಂಗವಾಗಿ ಗುರುವಾರ ರಾತ್ರಿ ಡೊಳ್ಳಿನ ಪದ, ರಾತ್ರಿ ಭಜನೆ ನಡೆಯಿತು.

Advertisement

ವಜ್ಜಲ ಸೇರಿದಂತೆ ಸುತ್ತಮುತ್ತಲಿನ ಭಕ್ತರು ಪಾಲ್ಗೊಂಡಿದ್ದರು. ವಜ್ಜಲ ಬೀರಲಿಂಗೇಶ್ವರ ದೇವಸ್ಥಾನದಲ್ಲಿ ಎರಡೂ ಪಲ್ಲಕ್ಕಿಗಳಿಗೆ ಪೂಜೆ ಸಲ್ಲಿಸಿದ ನಂತರ ಜಾತ್ರೆ ಮುಕ್ತಾಯವಾಯಿತು. ಜಾತ್ರೆಗೆ ಆಗಮಿಸಿದ್ದ ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.  ಗ್ರಾಮದ ಮುಖಂಡರಾದ ನಿಂಗಪ್ಪ ಮೇಟಿ, ಶಿವಣ್ಣ ಕನ್ನೆಳ್ಳಿ, ಚಂದಪ್ಪ ಗಿಂಡಿ, ನಿಂಗಪ್ಪ ಬೋಯಿ, ಸಿದ್ದು ಅಬ್ಯಾಳಿ, ಕರೆಪ್ಪ ದೊಡ್ಡಮನಿ, ಸಿದ್ದಣ್ಣ ಮೇಟಿ, ಹಣಮಂತ್ರಾಯ ಕನ್ನೆಳ್ಳಿ, ಬಸಣ್ಣ ಕಲ್ಲತ್ತಿ, ಸಿದ್ದಣ್ಣ ಗುಲಗುಂಜಿ, ರೇವಣಸಿದ್ದಪ್ಪ ಹೊರಟ್ಟಿ, ರಾಯಪ್ಪ, ಬಸಪ್ಪ ಮೇಟಿ,
ಬೂಮಣ್ಣ ದೊಡಮನಿ, ಬೀರಪ್ಪ, ಸಾಬಣ್ಣ ಗಿಂಡಿ, ಶ್ರೀಶೈಲ ದೇವತ್ಕಲ್‌ ಸೇರಿದಂತೆ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next