Advertisement

ಕೂಡಲಸಂಗಮ ಸಂಗಮನಾಥನ ಮಹಾರಥೋತ್ಸವ

11:47 AM Apr 25, 2019 | pallavi |

ಕೂಡಲಸಂಗಮ: ಕೂಡಲಸಂಗಮದ ಸಂಗಮನಾಥನ ಜಾತ್ರಾ ಮಹೋತ್ಸವ ನಿಮಿತ್ತ ಸಂಗಮೇಶ್ವರ ರಥೋತ್ಸವ ಸಂಭ್ರಮದಿಂದ ನೆರವೇರಿತು. ರಥೋತ್ಸವದಲ್ಲಿ ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ, ಸಾರಂಗಮಠದ ಅಭಿನವಜಾತವೇದ ಶಿವಾಚಾರ್ಯ ಸ್ವಾಮೀಜಿ ರಥೋತ್ಸವಕ್ಕೆ ಚಾಲನೆ ನೀಡಿದರು. ಇದಕ್ಕೂ ಮುನ್ನ ಕ್ಷೇತ್ರಾಧಿಪತಿ ಸಂಗಮನಾಥನ ಜಾತ್ರಾ ಮಹೋತ್ಸವಕ್ಕೆ ಮಹಾರಾಷ್ಟ್ರ, ತಮಿಳುನಾಡು, ಕೇರಳ, ಗೋವಾ ರಾಜ್ಯಗಳಿಂದ ಆಗಮಿಸಿದ ಭಕ್ತರು ಬಂಗಾರದ ಕಳಸದ ದರ್ಶನ ಪಡೆದು ಪುನೀತರಾದರು.

Advertisement

ಮಂಗಳವಾರ ಸಂಜೆ ಬಾಗಲಕೋಟೆಯಿಂದ ಮೆರವಣಿಗೆಯ ಮೂಲಕ ಹೊರಟ ಬಂಗಾರದ ಕಳಸವನ್ನು ಭಕ್ತರು ಕಾಲು ನಡುಗೆಯಲ್ಲಿ ಮಲ್ಲಾಪುರ, ಭಗವತಿ, ಬೇವೂರ, ಕಿರಸೂರ, ಹಳ್ಳೂರ ಮಾರ್ಗದ ಮೂಲಕ 40 ಕಿಮೀ ದೂರವನ್ನು ಕಾಲ್ನಡಿಗೆಯಲ್ಲಿ ಹೊತ್ತು ಕೂಡಲಸಂಗಮಕ್ಕೆ ತಂದರು. ಬೆಳಗ್ಗೆ 9 ಗಂಟೆಗೆ ಕಳಸ ಆಗಮಿಸುತ್ತಿದ್ದಂತೆ ವಿವಿಧ ಗ್ರಾಮದ ಕಲಾತಂಡಗಳು ವಿವಿಧ ನೃತ್ಯ ಪ್ರದರ್ಶನ ಮಾಡಿದರು. ನಂತರ ಸಂಗಮೇಶ್ವರ ದೇವಾಲಯಕ್ಕೆ ಆಗಮಿಸಿದ ಕಳಸವನ್ನು ಪೂಜೆ ಮಾಡಿ ತಂದರು.

Advertisement

Udayavani is now on Telegram. Click here to join our channel and stay updated with the latest news.

Next