Advertisement

‘ಕೂ’ಗೆ ನಾಸ್ಕಾಮ್‌ ನ ಲೀಗ್ ಆಫ್ 10 ಎಮರ್ಜ್ 50 ಪ್ಲಾಟ್‌ ಫಾರ್ಮ್ ಪ್ರಶಸ್ತಿ

02:35 PM Feb 04, 2022 | Team Udayavani |

ಹೊಸದಿಲ್ಲಿ: ಭಾರತದ ಬಹುಭಾಷಾ ಮೈಕ್ರೊ ಬ್ಲಾಗಿಂಗ್ ವೇದಿಕೆ Koo (ಕೂ) NASSCOM ನ ಪ್ರತಿಷ್ಠಿತ 2021ನೇ ಸಾಲಿನ ‘ಲೀಗ್ ಆಫ್ 10 ನ ಭರವಸೆಯ 50 ಪ್ಲಾಟ್‌ಫಾರ್ಮ್ ಪ್ರಶಸ್ತಿಗೆ ಭಾಜನವಾಗಿದೆ. NASSCOM ನ ಎಮರ್ಜ್ 50 ಪಟ್ಟಿಯು ಭಾರತದಲ್ಲಿನ ವೇಗವಾಗಿ ಬೆಳೆಯುತ್ತಿರುವ ಭರವಸೆಯ 50 ಕಂಪನಿಗಳನ್ನು ಗುರುತಿಸಿದೆ. ಸೂಪರ್ ಎಲೈಟ್ ‘ಲೀಗ್ ಆಫ್ 10’ ಡಿಜಿಟಲ್ ಜಗತ್ತಿಗೆ ಹೊಸ ವ್ಯಾಖ್ಯಾನ ನೀಡುತ್ತಿರುವ ಹೊಸ ಯೋಚನೆಗಳ ಮೂಲಕ ಜಾಗತಿಕವಾಗಿ ಗುರುತಿಸಲ್ಪಡುವ ಬ್ರಾಂಡ್‌ಗಳನ್ನು ಪ್ರೋತ್ಸಾಹಿಸುತ್ತದೆ.

Advertisement

ಬಹುಭಾಷಾ ಮೈಕ್ರೋ ಬ್ಲಾಗಿಂಗ್ ವೇದಿಕೆಯಾಗಿರುವ ಕೂ, ಡಿಜಿಟಲ್ ಜಗತ್ತಿನಲ್ಲಿ ಭಾರತದ 10 ಭಾಷೆಗಳಲ್ಲಿ ಅಭಿವ್ಯಕ್ತಿ ವ್ಯಕ್ತಪಡಿಸಲು ಅವಕಾಶ ಒದಗಿಸುತ್ತದೆ. ಕೂ ಒದಗಿಸಿರುವ ಅನುವಾದ ಫೀಚರ್ ಬಳಸಿ ಬಳಕೆದಾರರು ತಮ್ಮ ಮೂಲ ವಿಷಯಕ್ಕೆ ಧಕ್ಕೆ ಬರದಂತೆ ತಕ್ಷಣಕ್ಕೆ ಹಲವು ಭಾಷೆಗಳಲ್ಲಿ ಅಭಿಪ್ರಾಯ ಹಂಚಿಕೊಳ್ಳಬಹುದು. ಜೊತೆಗೆ ಈ ಫೀಚರ್‌ನಿಂದ ಕೂ ಬಳಕೆದಾರರು ಹೆಚ್ಚು ಜನರನ್ನು ತಲುಪಬಹುದು.

ಈ ಸಾಧನೆಯ ಕುರಿತು ಪ್ರತಿಕ್ರಿಯಿಸಿದ ಕೂ ಸಿಇಒ ಮತ್ತು ಸಹ ಸಂಸ್ಥಾಪಕ ಅಪ್ರಮೇಯ ರಾಧಾಕೃಷ್ಣ, ನವೋದ್ಯಮಗಳನ್ನು ಗುರುತಿಸುವ “ನಾಸ್ಕಾಮ್‌ನ ಲೀಗ್ ಆಫ್ 10 – ಎಮರ್ಜ್ 50” ಪ್ರತಿಷ್ಠಿತ ಪ್ರಶಸ್ತಿಗೆ ಭಾಜನರಾಗಿದ್ದು ನಮಗೆ ಸಂತಸ ತಂದಿದೆ. ಲಿಗ್ ಆಫ್ 10ರ ಪ್ರತಿಷ್ಠಿತ ಗುಂಪಿಗೆ ಸೇರುವುದು ನಮ್ಮ ಪಾಲಿಗೆ ಗಮನಾರ್ಹ ಸಾಧನೆಯಾಗಿದೆ. ಈ ಗೆಲುವು ಭಾರತೀಯರು ಡಿಜಿಟಲ್ ವೇದಿಕೆಯಲ್ಲಿ ತಮ್ಮ ಆಯ್ಕೆಯ ಭಾಷೆಯಲ್ಲಿ ಭಾವನೆಗಳನ್ನು ಅಭಿವ್ಯಕ್ತಪಡಿಸುವ ನಮ್ಮ ಉದ್ದೇಶಕ್ಕೆ ನೀಡಿದ ಗೌರವವಾಗಿದೆ. ಡಿಜಿಟಲ್ ವೇದಿಕೆಯಲ್ಲಿನ ಭಾಷಾ ತಾರತಮ್ಯವನ್ನು ಇಲ್ಲವಾಗಿಸಿ ಜನರನ್ನು ಒಗ್ಗೂಡಿಸಲು ನಾವು ಇನ್ನಷ್ಟು ಶ್ರಮ ವಹಿಸುತ್ತೇವೆ. ಜಗತ್ತೇ ತಿರುಗಿ ನೋಡುವಂತಹ ಜಾಗತಿಕ ಮಟ್ಟದ ಟೆಕ್ ಉತ್ಪನ್ನವನ್ನು ಭಾರತಕ್ಕಾಗಿ ಮತ್ತು ಜಗತ್ತಿಗಾಗಿ ನೀಡುತ್ತೇವೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಈ ಕುರಿತು ಪ್ರತಿಕ್ರಿಯಿಸಿದ NASSCOM ಪ್ರೊಡಕ್ಟ್ ಕೌನ್ಸಿಲ್‌ ಅಧ್ಯಕ್ಷ ರಾಮ್‌ಕುಮಾರ್ ನಾರಾಯಣನ್, ‘ಭಾರತದ ಟೆಕ್ ಉದ್ಯಮ ಜಾಗತಿಕ ಮಟ್ಟದಲ್ಲಿ ಹೊಸ ಹೆಜ್ಜೆಗುರುತುಗಳನ್ನು ಮೂಡಿಸುತ್ತಿದೆ. ಜಾಗತಿಕ ಶ್ರೇಣಿಯ ತಂತ್ರಜ್ಞಾನದ ಅನುಭವವನ್ನು ಭಾರತದ ನವೋದ್ಯಮಗಳು ತಮ್ಮ ಗ್ರಾಹಕರಿಗೆ ಒದಗಿಸುತ್ತಿವೆ. ಎಮರ್ಜ್ 50, ಕಳೆದ 12 ವರ್ಷಗಳಲ್ಲಿ, ಭವಿಷ್ಯದ ಅತ್ಯಂತ ಭರವಸೆಯ ಕಂಪನಿಗಳನ್ನು ಯಶಸ್ವಿಯಾಗಿ ಗುರುತಿಸಿದೆ. 2021 ರ ಟಾಪ್ 50 ಉದಯೋನ್ಮುಖ ಸ್ಟಾರ್ಟ್‌ಅಪ್‌ಗಳಲ್ಲಿ ಕೂ ಅಪ್ಲಿಕೇಶನ್ ಸೇರಿರುವುದು ನಮಗೆ ಸಂತಸದ ಸಂಗತಿಯಾಗಿದೆ ಎಂದರು.

2009 ರಿಂದ ಎಮರ್ಜ್ 50 ಪ್ರಶಸ್ತಿಯನ್ನು NASSCOM ಘೋಷಿಸುತ್ತಿದ್ದು, ಈವರೆಗೆ ಫಿನ್‌ಟೆಕ್, ಆರೋಗ್ಯ ತಂತ್ರಜ್ಞಾನ, SaaS, IoT ಮುಂತಾದ ಕ್ಷೇತ್ರಗಳ 4225 ಕಂಪನಿಗಳು ಸ್ಪರ್ಧಿಸಿದ್ದವು. ಅವುಗಳಲ್ಲಿ 575 ಕಂಪನಿಗಳು ಈವರೆಗೆ ಗುರುತಿಸಲ್ಪಟ್ಟಿದ್ದು, ಬೃಹತ್ ಮೊತ್ತದ ಹೂಡಿಕೆಯನ್ನು ಪಡೆದುಕೊಂಡಿವೆ. ಅಲ್ಲದೇ ಲೀಗ್ ಆಫ್ 10 ಗೌರವಕ್ಕೆ ಪಾತ್ರವಾದ ಕಂಪನಿಗಳು ಯುನಿಕಾರ್ನ್ ಕಂಪನಿಗಳಾಗಿಯೂ ಹೊರಹೊಮ್ಮಿವೆ ಎಂಬುದು ಉಲ್ಲೇಖನೀಯ.

Advertisement
Advertisement

Udayavani is now on Telegram. Click here to join our channel and stay updated with the latest news.

Next