Advertisement
ಇನ್ನೇನು ನಮ್ಮ ದೇಸಿ ಆಟ ಕಬ್ಬಡಿಯ ರಂಗು ಎಲ್ಲೆಡೆ ಹಬ್ಬಲಿದೆ. ಬೆಂಗಳೂರು ಬುಲ್ಸ್ ನಾಯಕ ಪವನ್ ಕುಮಾರ್ ಸೆಹ್ರಾವತ್ ನಮ್ಮ ರಾಜ್ಯದ ತಂಡವನ್ನು ಪ್ರತಿನಿಧಿಸಿದರೂ ಅವರ ಮಾತೃಭಾಷೆ ಹಿಂದಿ. ಸಾಮಾಜಿಕ ಜಾಲತಾಣದಲ್ಲಿ ಅವರ ಮಾತು ಕನ್ನಡದಲ್ಲಿ ನೋಡಿ ಇಲ್ಲಿನ ಅವರ ಅಭಿಮಾನಿಗಳಿಗಂತೂ ಎಲ್ಲಿಲ್ಲದ ಸಂಭ್ರಮ. ಕನ್ನಡ ಅಷ್ಟೇ ಅಲ್ಲ ಅವರು ಒಂದೇ ಸಮಯದಲ್ಲಿ ಹಿಂದಿ, ಮರಾಠಿ, ಗುಜರಾತಿ, ತಮಿಳು, ತೆಲುಗು, ಬೆಂಗಾಲಿ, ಅಸ್ಸಾಮಿ, ಪಂಜಾಬಿ ಮತ್ತು ಇಂಗ್ಲೀಶ್ ನಲ್ಲಿ ಸಂವಹನ ನಡೆಸುತ್ತಿದ್ದಾರೆ.
Related Articles
Advertisement
ಇದಕ್ಕೆ ಪ್ರಮುಖ ಕಾರಣ ಎಂದರೆ ಅದು ಎಂಎಲ್ ಕೆ ಆಗಿದೆ. ನೀವು ತುಂಬ ಖುಷಿಯಲ್ಲಿ ಮಾತನಾಡುವ ಭಾಷೆಯಲ್ಲಿಯೇ ದೇಶದಾದ್ಯಂತ ಇರುವ ಜನರೊಂದಿಗೆ ಸಂವಹನ ನಡೆಸಬಹುದಾಗಿದೆ. ನೀವು ಪೋಸ್ಟ್ ಮಾಡಬೇಕೆನ್ನುವ ವಿಷಯವನ್ನು ಕೇವಲ ಒಂದು ಕ್ಲಿಕ್ ಮೂಲಕ ಕೂ ವೇದಿಕೆಯಲ್ಲಿನ ಒಟ್ಟು ಒಂಬತ್ತು ಭಾಷೆಗಳಿಗೆ ಅನುವಾದ ಮಾಡಬಹುದಾಗಿದೆ. ದೃಢವಾದ ಭಾಷಾ ತಂತ್ರಜ್ಞಾನಗಳಿಂದ ಬೆಂಬಲಿತವಾಗಿರುವುದರಿಂದ, ಅನುವಾದವು ಮೂಲ ವಿಷಯಕ್ಕೆ ಹೆಚ್ಚು ಹತ್ತಿರವಿರಲಿದೆ ಹಾಗು ಅದರ ಭಾವಾರ್ಥವನ್ನು ಉಳಿಸಿಕೊಂಡಿರಲಿದೆ.
ಇದನ್ನೂ ಓದಿ:ತಂದೆಯಿಂದಲೇ ಅತ್ಯಾಚಾರ: ಗಂಡು ಮಗುವಿಗೆ ಜನ್ಮ ನೀಡಿದ 8ನೇ ತರಗತಿ ವಿದ್ಯಾರ್ಥಿನಿ
ಬೆಂಗಾಲಿ ಮಾತನಾಡುವವರು ತಮಿಳು, ತೆಲುಗು ಮತ್ತು ಕನ್ನಡದವರೊಂದಿಗೆ ಸಂವಹನ ನಡೆಸಲು ಎಂಎಲ್ ಕೆ ಬಳಸಿಕೊಂಡು ತಮ್ಮ ವಿಷಯವನ್ನು ಅವರ ಭಾಷೆಗೆ ಭಾಷಾಂತರಿಸಬಹುದಾಗಿದೆ. ಇದರಂತೆ ಇತರೆ ಸ್ಥಳೀಯ ಭಾಷೆಯ ಜನರು ತಾವು ಇಚ್ಚಿಸಿದ ಇತರೆ ಭಾಷೆಗಳ ಜನರೊಂದಿಗೆ ಯಾವುದೇ ಅಡೆತಡೆಗಳಿಲ್ಲದೆ ಮಾತನಾಡಬಹುದು.
ಎಂಎಲ್ ಕೆ ಮೂಲಕ ಶೇ. 30 ರಷ್ಟು ಸಂಭಾಷಣೆಗಳು: ಕೂನಲ್ಲಿನ ಸುಮಾರು ಶೇ. 30 ರಷ್ಟು ಸಂಭಾಷಣೆಗಳು ಎಂಎಲ್ ಕೆ ಮೂಲಕ ನಡೆಯುತ್ತಿದೆ. ಹಲವಾರು ಗಣ್ಯ ವ್ಯಕ್ತಿಗಳು (ಸೆಹ್ರಾವತ್ ರಂತಹ) ತಮ್ಮ ಮಾತೃಭಾಷೆಯಲ್ಲಿ ಜನಸಾಮಾನ್ಯರೊಂದಿಗೆ ಸಂವಹನ ನಡೆಸಲು ಮತ್ತು ಅಭಿಮಾನಿಗಳೊಂದಿಗೆ ತೊಡಗಿಸಿಕೊಳ್ಳಲು ಈ ಫೀಚರ್ ಅನ್ನು ಬಳಸುತ್ತಿದ್ದಾರೆ. ಈ ಮೂಲಕ ಸೆಹ್ರಾವತ್ ಅವರು 109.2K ಫಾಲ್ಲೋರ್ಸ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಬಹುಭಾಷಾ ಜಗತ್ತಿಗೆ: ಭಾರತದಂತೆಯೇ, ಪ್ರಪಂಚದ ಶೇ. 80 ರಷ್ಟು ಮಂದಿ ಸ್ಥಳೀಯ ಭಾಷೆಯನ್ನೇ ಮಾತನಾಡುತ್ತಾರೆ. ಯುರೋಪಿಯನ್, ಆಫ್ರಿಕನ್ ಅಥವಾ ಪ್ಯಾನ್-ಏಷ್ಯನ್ ಭಾಷೆಗಳನ್ನು ಮಾತನಾಡುವವರ ನಡುವೆ ಯಾವುದೇ ಅಡಚಣೆ ಇಲ್ಲದೆ ಸಂವಹನ ಸಾಧಿಸಲು, ಬಹು ಭಾಷಾ ಜಗತ್ತಿನ ಡಿಜಿಟಲ್ ಒಳಗೊಳ್ಳುವಿಕೆಯನ್ನು ಸಾಧಿಸಲು ಈ ಫೀಚರ್ ನೆರವಾಗಲಿದೆ. ವೈವಿಧ್ಯಮಯ ಸಂಸ್ಕೃತಿ ಮತ್ತು ಭೌಗೋಳಿಕತೆಯ ಜನರು ಒಟ್ಟಿಗೆ ಸೇರುವ, ಅವರ ಮನದಾಳವನ್ನು ಹಂಚಿಕೊಳ್ಳುವ ಮತ್ತು ಅವರ ಪರಂಪರೆಯನ್ನು ಸಂಭ್ರಮಿಸುವ ಸಾಮಾಜಿಕ ಮಾಧ್ಯಮವನ್ನು ಒಂದು ವಾಹಕವನಾಗಿ ಈ ಫೀಚರ್ ಬದಲಿಸಬಹುದಾಗಿದೆ.