Advertisement

ಕೊಂತೆಮ್ಮ ರೊಟ್ಟಿ ಆಚರಣೆ

04:32 PM Nov 27, 2018 | |

ಸಿರುಗುಪ್ಪ: ಗೌರಿ ಹುಣ್ಣಿಮೆ ಅಂಗವಾಗಿ ಕೊಂತೆಮ್ಮರೊಟ್ಟಿ ಆಚರಣೆ ತಾಲೂಕಿನಾದ್ಯಂತ ಸಂಭ್ರಮದಿಂದ ಆಚರಿಸಲಾಯಿತು. ಕೊಂತೆಮ್ಮರೊಟ್ಟಿ ಆಚರಣೆ ಅಂಗವಾಗಿ 2 ಮಣ್ಣಿನ ಕೊಂತೆಮ್ಮಗಳನ್ನು ಸಂಜೆ ಮಾಳಿಗೆಯ ಮೇಲೆ ಸಗಣಿ ನೀರಿನಿಂದ ಸಾರಿಸಿ ರಂಗೋಲಿ ಹಾಕಿದ ಜಾಗದಲ್ಲಿಟ್ಟು ಕುಂಕುಮ, ಅರಿಶಿಣವಿಟ್ಟು ಅಮರೆ ಹೂವಿನಿಂದ ಅಲಂಕರಿಸಿ ಊದುಬತ್ತಿ ಹಚ್ಚಿ ಪೂಜೆ ನೆರವೇರಿಸಲಾಯಿತು. ಸಜ್ಜೆರೊಟ್ಟಿ, ಬೆಲ್ಲ, ತುಪ್ಪವನ್ನು ನೈವೇದ್ಯ ಮಾಡಿದ ನಂತರ ಕುಟುಂಬದ ಸದಸ್ಯರೆಲ್ಲರೂ ಸೇರಿ ಒಟ್ಟಾಗಿ ಭೋಜನ ಮಾಡುವುದು ಕೊಂತೆಮ್ಮರೊಟ್ಟಿ ಆಚರಣೆ ವಿಶೇಷ.

Advertisement

ಕೊಂತೆಮ್ಮರೊಟ್ಟಿ ಪೂಜೆಯ ಅಂಗವಾಗಿ ಸಜ್ಜೆ ರೊಟ್ಟಿ, ಜೊಳದ ರೊಟ್ಟಿ, ಚಪಾತಿ, ಎಣ್ಣೆ ಬದನೆಕಾಯಿ ಪಲ್ಯ, ಆಲೂಗಡ್ಡೆ ಪಲ್ಯ, ಹೆಸರು, ತೊಗರಿ, ಕಡ್ಲೆ, ಬಟಾಣಿ, ಅಲಸಂಕಾಳುಗಳ ಗುಗ್ಗರಿಗಳು, ಚಿತ್ರನ್ನಾ, ವೆಜೆಟೇಬಲ್‌ ಪಲಾವು, ಸಿಹಿಗಾರಿಗೆ ಮುಂತಾದ ವಿವಿಧ ಖಾದ್ಯಗಳನ್ನು ತಯಾರಿಸಿ ಕುಟುಂಬದ ಸದಸ್ಯರೆಲ್ಲರೂ ಸಾಮೂಹಿಕು ಭೋಜನ ಸವಿಯುತ್ತಾರೆ. ನಂತರ ಪಟಾಕಿಗಳನ್ನು ಸಿಡಿಸಿ ಸಂಭ್ರಮಿಸುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next