ಮುಂಬಯಿ: ವಿಶ್ವ ಕೊಂಕಣಿ ಕೇಂದ್ರ ಮಂಗಳೂರು ಇದರ ಕೊಂಕಣಿ ಭಾಷೆ ಮತ್ತು ಸಾಂಸ್ಕೃತಿಕ ಫೌಂಡೇಶನ್ ಸಂಸ್ಥೆಯು ಕರ್ನಾಟಕ ಸರಕಾರದ ಕನ್ನಡ ಮತ್ತು ಸಾಂಸ್ಕೃತಿಕ ಇಲಾಖೆಯ ಸಹಯೋಗದಲ್ಲಿ ಮಹಾನಗರ ಮಾಹಿಮ್‌ನಲ್ಲಿ ದ್ವಿದಿನ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಆಯೋಜಿಸಲಾಗಿದ್ದ ವಿಶ್ವ ಕೊಂಕಣಿ ಲೋಕ ಕಲಾ ಶಿಗ್ಮೋತ್ಸವ ಮಾ. 19ರಂದು ಸಂಜೆ ಸಮಾರೋಪಗೊಂಡಿತು.
ಮೋಡೆಲ್ ಬ್ಯಾಂಕ್‌ನ ಕಾರ್ಯಾಧ್ಯಕ್ಷ ಆಲ್ಬರ್ಟ್ ಡಬ್ಲೂ.ಡಿ’ಸೋಜಾ ಅಧ್ಯಕ್ಷತೆ
ಯಲ್ಲಿ ಜರಗಿದ ಸಮಾರೋಪ ಸಮಾ ರಂಭದಲ್ಲಿ ಮುಖ್ಯ ಅತಿಥಿಯಾಗಿ ಉದ್ಯಮಿ ಗಳಾದ ಕಿಶೋರ್ ಜಿ. ಮಾಸೂರRರ್, ಕೆ. ಶ್ರೀನಿವಾಸ ಪ್ರಭು, ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠ ವಡಾಲ ಮುಂಬಯಿ ಇದರ ಉಪ ಕಾರ್ಯಾಧ್ಯಕ್ಷ ಹಾಗೂ ಜಿಎಸ್‌ಬಿ ಸೇವಾ ಸಾರ್ವಜನಿಕ ಗಣೋಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಎನ್. ಎನ್. ಪಾಲ್, ಜಿಎಸ್‌ಬಿ ಸಭಾ ಟ್ರಸ್ಟಿ ಸುಧಾ ಪೈ ಹಾಗೂ ವಿಶ್ವ ಕೊಂಕಣಿ ಕೇಂದ್ರದ ಸಂಸ್ಥಾಪಕ ಅಧ್ಯಕ್ಷ ಬಸ್ತಿ ವಾಮನ್ ಶೆಣೈ, ಉಪಾಧ್ಯಕ್ಷ ವೆಂಕಟೇಶ್ ಎನ್. ಬಾಳಿಗಾ, ಕಾರ್ಯದರ್ಶಿ ಪ್ರದೀಪ ಜಿ. ಪೈ, ಕಾರ್ಯದರ್ಶಿ ಬಿ. ಪ್ರಭಾಕರ್ ಪ್ರಭು ಮತ್ತು ಕಲಾಕೋಸ್ಟ್ ತಂಡದ ನಿರ್ದೇಶಕ ಸುಧೀರ್ ನಾಯಕ್ ವೇದಿಕೆಯಲ್ಲಿ ಉಪಸ್ಥಿತರಿದ್ದು ಮುಂಬಯಿ ನಾಟಕ ರಂಗಭೂಮಿಯಲ್ಲಿ ವಿಶೇಷ ಸಾಧನೆಗೈದ ಹಿರಿಯ ನಿರ್ದೇಶಕರಾದ ಎ. ಜಿ. ಕಾಮತ್ ಹಾಗೂ ಫ್ರಾನ್ಸಿಸ್ ಫೆರ್ನಾಂಡಿಸ್ ಕಾಸ್ಸಿಯಾ ಅವರನ್ನು ಸಮ್ಮಾನಿಸಿ ಅಭಿನಂದಿಸಿದರು.
ಪೂರ್ವಾಹ್ನ ಕೊಂಕಣಿ ಕವಿಗೋಷ್ಠಿ, ಸಿಗೊ¾à ನೃತ್ಯ, ಶ್ರೀಕೃಷ್ಣ ಜನ್ಮ ಕಥಾ ನ್ಯತ್ಯರೂಪಕ, ಸಿದ್ಧಿ ದಮಾಮ್ ನೃತ್ಯ, ಗುಮಾr ವಾದ್ಯ ಸಂಗೀತ, ವರ್ಸಾಕ್ ಏಕ್ ಪಾವಿrಂ ಕೊಂಕಣಿ ಕಿರು ನಾಟಕ, ದೀಪಮಾಲ ನೃತ್ಯ, ಗುಮಾr ನೃತ್ಯ ಇತ್ಯಾದಿಗಳು ಪ್ರದರ್ಶಿಸಲ್ಪಟ್ಟವು. ಕಾರ್ಯಕ್ರಮ ಸಂಘಟಕ ಡಾ| ಚಂದ್ರಶೇಖರ್ ಎನ್. ಶೆಣೈ ಸ್ವಾಗತಿಸಿದರು. ಶಕುಂತಳಾ ಕಿಣಿ ಮತ್ತು ರವಿ ನಾಯಕ್ ಕಾರ್ಯಕ್ರಮ ನಿರೂಪಿಸಿದರು. ಕಮಾಲಾಕ್ಷ ಜಿ. ಸರಾಫ್ ವಂದಿಸಿದರು.
ಚಿತ್ರ- ವರದಿ: ರೋನ್ಸ್ ಬಂಟ್ವಾಳ್