Advertisement

ಕೊಂಕಣಿ ಸಾಂಪ್ರದಾಯಿಕ ಹಾಡುಗಳ ಕಾರ್ಯಾಗಾರ

04:51 PM Jul 24, 2019 | Team Udayavani |

ಹೊನ್ನಾವರ: ನ್ಯೂ ಇಂಗ್ಲಿಷ ಶಾಲೆ ಸಭಾಂಗಣದಲ್ಲಿ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಆಶ್ರಯದಲ್ಲಿ ಕೊಂಕಣಿ ಸಾಂಪ್ರದಾಯಿಕ ಹಾಡುಗಳ ಕಾರ್ಯಗಾರ ನಡೆಯಿತು.

Advertisement

ಮುಕ್ತಾಯ ಸಮಾರಂಭದಲ್ಲಿ ತರಬೇತಿ ನಿರ್ದೇಶಕ ಮಂಗಳೂರಿನ ಮಾಂಡ ಸೊಬಾಣಿನ ಎರಿಕ್‌ ಒಜಾರಿಯೋ ಮಾತನಾಡಿ, ಸಾಂಪ್ರದಾಯಿಕ ಕೊಂಕಣಿ ಹಾಡುಗಳನ್ನು ಕಲಿತ ನೀವು ಅದನ್ನು ಅಭ್ಯಸಿಸಿ, ಅನುಭವಿಸಿ, ಉಳಿಸಿಕೊಂಡು ಮುಂದಿನ ಪಿಳಿಗೆಗೆ ದಾಟಿಸಿದಾಗಲೇ ಮಾತ್ರ ಈ ಸರ್ಟಿಫಿಕೇಟ್ ಕೊರ್ಸಿನ ಉದ್ದೇಶ ಫಲಿಸುವುದೆಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಅಕಾಡೆಮಿ ಸದಸ್ಯ ಸಂಚಾಲಕ ಮುನ್ವೇಲ ಸ್ಟಿಫನ್‌ ರೊಡ್ರಿಗಿಸ್‌ ಮಾತನಾಡಿ, ಕೊಂಕಣೆ ಅಕಾಡೆಮಿ ಕಳೆದ 25 ವರ್ಷದಿಂದ ಹಲವಾರು ಕಾರ್ಯಕ್ರಮಗಳನ್ನು ಕೊಂಕಣಿ ಭಾಷಿಕರಿಗೆ ಹಾಗೂ ಪ್ರೇಮಿಗಳಿಗೆ ನೀಡುತ್ತಾ ಬಂದ್ದಿದೆ. ಕೊಂಕಣಿ ಸಂಸ್ಕೃತಿ ಬೆಳೆಯಲು ಇಂಥ ಕಾರ್ಯಗಾರ ಅವಶ್ಯ ಎಂದರು.

ಸಂಪನ್ಮೂಲ ವ್ಯಕ್ತಿಗಳಾದ ಜೋಯ್ಸ ಒಜಾರಿಯೊ, ಕಿಂಗಸ್ಲಿ ನಜರೇತ, ಮನೋಜ ಲೋಪಿಸ್‌, ಪ್ಲ್ಲಾವಿಯಾ ರೊಡ್ರಿಗಿಸ್‌ಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು. ಜೇಮ್ಸ್‌ ಲೊಪಿಸ್‌ ಸ್ವಾಗತಿಸಿದರು. ಶಿಬಿರಾರ್ಥಿಗಳಾದ ಆಲೇಕ್ಸ್‌ ಫರ್ನಾಂಡಿಸ್‌ ಅನುಭವ ಹಂಚಿಕೊಂಡರು. ಎಪಿಪನ ಫರ್ನಾಂಡಿಸ್‌ ವಂದಿಸಿದರು. ಜೇಕಬ್‌ ಫರ್ನಾಂಡಿಸ್‌ ನಿರ್ವಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next