Advertisement
ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ವತಿಯಿಂದ ಮಲ್ಲೇಶ್ವರದ ಕಾಶಿ ಮಠದಲ್ಲಿ ರವಿವಾರ ಹಮ್ಮಿಕೊಳ್ಳಲಾಗಿದ್ದ “ಗೌರವ ಪ್ರಶಸ್ತಿ-2022′ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ಸಂಸ್ಕೃತಿ, ಭಾಷೆ, ಆಚಾರ-ವಿಚಾರಗಳನ್ನು ಉಳಿಸಿಕೊಳ್ಳುವುದು ದೊಡ್ಡ ಸವಾಲಾಗಿದೆ. ಜಾಗತೀಕರಣದ ಬಳಿಕ ಇಂಗ್ಲಿಷ್ ಭಾಷೆ ನಮ್ಮೆಲ್ಲರನ್ನೂ ಆಕ್ರಮಿಸಿಕೊಂಡಿದೆ ಎಂದು ಹೇಳಿದರು.
ಸಂಸದ ಡಿ.ವಿ. ಸದಾನಂದ ಗೌಡ ಮಾತನಾಡಿ, ಸಂಸ್ಕೃತಿ, ಸಂಪ್ರದಾಯ, ಸಂಸ್ಕಾರ, ಜೀವನ ಪದ್ಧತಿ ಸಮಾಜದ ಆಧಾರ ಸ್ಥಂಭಗಳು. ಈ ಪೈಕಿ ಒಂದರಲ್ಲಿ ಕೊರತೆಯಾದರೂ ಸಮಾಜದ ಅಧಃಪತನ ಆಗುತ್ತದೆ. ನಮ್ಮ ದೇಶದಲ್ಲಿದ್ದ 2,800 ಭಾಷೆಗಳ ಪೈಕಿ ಒಂದೂವರೆ ಸಾವಿರ ಭಾಷೆಗಳು ಕಣ್ಮರೆಯಾಗಿವೆ ಎಂದು ಹೇಳಿದರು.
Related Articles
ಸಾಧಕರಾದ ಎಚ್.ಎಂ. ಪೆರ್ನಾಲ್, ರಮೇಶ್ ಕಾಮತ್, ಕುಮುದಾ ಗಡಕರ್ ಅವರಿಗೆ “ಗೌರವ ಪ್ರಶಸ್ತಿ-2022′ ಪ್ರದಾನಿಸಲಾಯಿತು.
Advertisement
1ರಿಂದ 4ನೇ ತರಗತಿ ವರೆಗೆ ಕೊಂಕಣಿ ಭಾಷೆಯಲ್ಲೂ ಪಾಠ ಮಾಡಲು ಅವಕಾಶ ಕಲ್ಪಿಸಬೇಕೆಂದು ಈ ಹಿಂದೆ ಪ್ರಯತ್ನಿಸಿದರೂ ಪ್ರಯೋಜನವಾಗಲಿಲ್ಲ. ಕೊಂಕಣಿಗರ ಕೆಲವು ಸಮಸ್ಯೆಗಳನ್ನು ಪರಿಹರಿಸಲು ಸರಕಾರ ಮುತುವರ್ಜಿ ವಹಿಸಬೇಕು.-ಡಾ| ಕೆ. ಜಗದೀಶ್ ಪೈ, ಅಧ್ಯಕ್ಷ, ಕೊಂಕಣಿ ಸಾಹಿತ್ಯ ಅಕಾಡೆಮಿ