Advertisement

ಕ್ಯಾಶ್‌ಲೆಸ್‌ ವ್ಯವಹಾರದತ್ತ ಕೊಂಕಣ ರೈಲ್ವೇ : ಎಸ್ ಬಿಐನೊಂದಿಗೆ ಕೊಂಕಣ ರೈಲ್ವೇ ಒಪ್ಪಂದ

06:16 PM Oct 20, 2021 | Team Udayavani |

ಉಡುಪಿ : ಕೊಂಕಣ ರೈಲ್ವೆಯನ್ನು ಡಿಜಿಟಲಿ ಸಮರ್ಥವಾಗಿ ಮತ್ತು ನಗದುರಹಿತ ಸಂಸ್ಥೆಯಾಗಿ ರೂಪಿಸುವ ಪ್ರಯತ್ನ ನಡೆಯುತ್ತಿದೆ. ರೈಲು ಟಿಕೆಟ್‌ ಪರೀಕ್ಷಕರು (ಟಿಟಿಇ) ರೈಲು ಪ್ರಯಾಣಿಕರಿಂದ ಸಂಗ್ರಹಿಸುವ ನಗದನ್ನು ನಗದುರಹಿತವಾಗಿ ಮಾರ್ಪಡಿಸಲು ಭಾರತೀಯ ಸ್ಟೇಟ್‌ ಬ್ಯಾಂಕ್‌ನೊಂದಿಗೆ ಕೊಂಕಣ ರೈಲ್ವೇ ಒಪ್ಪಂದ ಮಾಡಿಕೊಂಡಿದೆ.

Advertisement

ರತ್ನಾಗಿರಿ ನಿಲ್ದಾಣದಲ್ಲಿ ಕೊಂಕಣ ರೈಲ್ವೇ ಅಧಿಕಾರಿಗಳು ಆ್ಯಪ್‌ನ್ನು ಅ. 20ರಂದು ನೆರವೇರಿಸಿದರು. ಕೊಂಕಣ ರೈಲ್ವೇಯ ನಿರ್ದೇಶಕ (ಹಣಕಾಸು) ರಾಜೇಶ್‌ ಭಾದಂಗ್‌, ಮುಖ್ಯ ವಾಣಿಜ್ಯ ಪ್ರಬಂಧಕ ಎಲ್‌.ಕೆ.ವರ್ಮ, ಸಿಎಒ ಮ್ಯಾಥ್ಯೂ ಫಿಲಿಪ್‌, ರತ್ನಾಗಿರಿಯ ಪ್ರಾದೇಶಿಕ ವ್ಯವಸ್ಥಾಪಕ ಉಪೇಂದ್ರ , ಎಸ್‌ಬಿಐ ಅಧಿಕಾರಿಗಳಾದ ಮುಖ್ಯ ನಿರ್ವಹಣ ಅಧಿಕಾರಿ ಸ್ವಪನ್‌ ಘೋಷ್‌, ಉಪಾಧ್ಯಕ್ಷ ಅಮಿತ್‌ರಾಜ್‌, ಎಜಿಎಂ ಸತೀಶ್‌ ನಾಯ್ಕ ಉಪಸ್ಥಿತರಿದ್ದರು.

ಒಪ್ಪಂದದ ಪ್ರಕಾರ ಎಸ್‌ಬಿಐ ಯೋನೋ ಮರ್ಚಂಟ್‌ ಆ್ಯಪ್‌ನ್ನು ಟಿಟಿಇ ಅಳವಡಿಸಿಕೊಂಡಿರುತ್ತಾರೆ. ಇದು ಆ್ಯಂಡ್ರಾಯ್ಡ ಆ್ಯಪ್‌ ಆಗಿದೆ. ಕ್ಯೂ ಆರ್‌ ಕೋಡ್‌ ಮೂಲಕ ಟಿಕೆಟ್‌ಗಿಂತ ಹೆಚ್ಚುವರಿ ಹಣವನ್ನು ಪ್ರಯಾಣಿಕರಿಂದ ಪಡೆಯುವಾಗ ಭಿಮ್‌, ಪೇಟೆಮ್‌, ಗೂಗಲ್‌ಪೇ, ಫೋನ್‌ಪೇ ಇತ್ಯಾದಿ ಡಿಜಿಟಲ್‌ ಮೂಲಕ ಪಡೆಯುತ್ತಾರೆ. ಇದರ ಟಿಕೆಟ್‌ನ್ನು ಪ್ರಯಾಣಿಕರಿಗೆ ಕೊಡುತ್ತಾರೆ. ಇದರಿಂದಾಗಿ ಟಿಟಿಇ ನಗದು ವ್ಯವಹಾರ ಕಡಿಮೆಯಾಗುತ್ತದೆ.

ಇದನ್ನೂ ಓದಿ :ಭೂ ಅಕ್ರಮ ಸ್ವಾಧೀನ ವಿರುದ್ಧ ಉಪವಾಸ ಸತ್ಯಾಗ್ರಹ: ಶಿವಾನಂದ

Advertisement

Udayavani is now on Telegram. Click here to join our channel and stay updated with the latest news.

Next