ಈ ಅವಧಿಯಲ್ಲಿ ಒಟ್ಟು 2,898 ಕೋ.ರೂ. ವ್ಯವಹಾರ ನಡೆಸಿದೆ. 1,561 ಕೋ.ರೂ. ಯೋಜನಾ ವ್ಯವಹಾರ ಮತ್ತು 1,264 ಕೋ.ರೂ. ನಿರ್ವಹಣ ವ್ಯವಹಾರ ಮಾಡಲಾಗಿದೆ.
Advertisement
ಕಳೆದ ಐದು ವರ್ಷಗಳಲ್ಲಿ 85.35 ಕೋ.ರೂ. ಮೊತ್ತವನ್ನು ಪ್ರಯಾಣಿಕರ ಮೂಲ ಸೌಲಭ್ಯಕ್ಕಾಗಿ ವೆಚ್ಚ ಮಾಡಲಾಗಿದೆ. ಪ್ರವಾಸೋದ್ಯಮ ಅಭಿವೃದ್ಧಿ ಯೋಜನೆಯಡಿ ಮಡಗಾಂವ್, ಕರ್ಮಾಲಿ, ತಿವಿಮ್ ನಿಲ್ದಾಣಗಳನ್ನು 25 ಕೋ.ರೂ. ವೆಚ್ಚದಲ್ಲಿ ಮೇಲ್ದರ್ಜೆಗೇರಿಸಲಾಗುತ್ತಿದೆ. ಎಲ್ಲ ನಿಲ್ದಾಣಗಳಲ್ಲಿ ಉಚಿತ ವೈಫೈ ಸೇವೆ ಸಿಗುತ್ತಿದೆ. ರೋಹಾದಿಂದ ವೀರ್ ವರೆಗೆ 46 ಕಿ.ಮೀ. ದೂರವನ್ನು ದ್ವಿಪಥವನ್ನಾಗಿ ಮಾಡಲಾಗುತ್ತಿದ್ದು ಮುಂದಿನ ಮಾರ್ಚ್‌ಗೆ ಮುಕ್ತಾಯಗೊಳ್ಳಲಿದೆ. ಇನ್ನಂಜೆ ಸೇರಿದಂತೆ 10 ನಿಲ್ದಾಣಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. 1,100 ಕೋ.ರೂ. ವೆಚ್ಚದ ವಿದ್ಯುದೀಕರಣ ಕಾಮಗಾರಿ 2021ರ ಮಾರ್ಚ್‌ನಲ್ಲಿ ಮುಕ್ತಾಯಗೊಳ್ಳಲಿದೆ.