Advertisement
ಇಲ್ಲಿನ ಅಸಮರ್ಪಕ ವ್ಯವಸ್ಥೆಯ ಬಗ್ಗೆ ಉದಯವಾಣಿ ಪತ್ರಿಕೆ ಈ ಹಿಂದೆ ವರದಿಯನ್ನೂ ಪ್ರಕಟಿಸಿತ್ತು. ಇದರಿಂದಾಗಿ ಎಚ್ಚೆತ್ತುಕೊಂಡಿರುವ ಗ್ರಾ.ಪಂ. ರುದ್ರಭೂಮಿಯನ್ನು ಉಪಯೋಗಪೂರ್ಣವಾಗಿಸುವಲ್ಲಿ ಹೆಜ್ಜೆ ಇಟ್ಟಿದೆ.ಹೊಸ ಮೇಲ್ಛಾವಣಿ ನಿರ್ಮಾಣ, ಸುತ್ತಲೂ ಕಾಂಪೌಂಡ್ ನಿರ್ಮಾಣ ಕಾರ್ಯಗಳು ನಡೆಯುತ್ತಿವೆ. ಈ ಕೆಲಸಗಳಿಗಾಗಿ ಈಗಾಗಲೇ ಕೋಣಿ ಪಂ. 2 ಲಕ್ಷ ರೂ.ಗಳನ್ನು ವ್ಯಯಿಸಿದೆ. ನೆಲಕ್ಕೆ ಇಂಟರ್ ಲಾಕ್ ಹಾಕಲಾಗಿದ್ದು, ಈ ಹಿಂದೆ ಶವ ಸಂಸ್ಕಾರಕ್ಕಾಗಿ ಕುಂದಾಪುರಕ್ಕೆ ಹೋಗುತ್ತಿದ್ದ ಜನರು ಕೋಣಿ ರುದ್ರಭೂಮಿಯಲ್ಲೆ ಮಾಡುತ್ತಿದ್ದಾರೆ.
ಕೋಣಿ ಗ್ರಾ.ಪಂ.ನ ರುದ್ರಭೂಮಿಗೆ ಈಗ ಬೇಕಾಗಿರುವುದು ಶವವನ್ನು ಇರಿಸಲು ಒಂದು ಸಿಲಿಕಾನ್ ಛೆಂಬರ್ ಮಾತ್ರ. ಇದನ್ನು ಖರೀದಿಸಲು ಉಡುಪಿ, ಮಂಗಳೂರಿನಲ್ಲಿ ವಿಚಾರಿಸಿದರೂ ಸಿಗುತ್ತಿಲ್ಲ. ಶಿವಮೊಗ್ಗದಲ್ಲಿ ಓರ್ವ ಇದನ್ನು ಮಾಡಿಕೊಡುತ್ತಿದ್ದು ಅವರೊಡನೆ ಮಾತನಾಡಲಾಗಿದೆ. ಶಾಸಕ, ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರ ನಿಧಿಯಿಂದ 2ಲಕ್ಷ ರೂ. ಮಂಜೂರಾಗಿದ್ದು ಆ ಹಣದಲ್ಲಿ ಮುಂದಿನ ಮೂರು ತಿಂಗಳಿನಲ್ಲಿ ಸಿಲಿಕಾನ್ ಛೇಂಬರ್ ಅನ್ನು ತರಲಾಗುವುದು ಮತ್ತು ಆವರಣಗೋಡೆಯನ್ನು ಪೂರ್ಣಗೊಳಿಸಲಾಗುವುದು.
-ಕೆ.ಸಂಜೀವ ಮೊಗವೀರ, ಅಧ್ಯಕ್ಷರು, ಗ್ರಾ.ಪಂ., ಕೋಣಿ