ಕೊಪ್ಪಳ ಜಿಲ್ಲೆಯ ಇಂದ್ರನಗರ ನಿವಾಸಿ ಮೊಹಮ್ಮದ್ ಹುಸೇನ್ (22) ಹಾಗೂ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಕೃತ್ಯಕ್ಕೆ ಬಳಸಿದ ಬೈಕನ್ನು ಪೊಲೀಸರು ವಶಪಡಿಸಿದ್ದಾರೆ.
Advertisement
ಘಟನೆ ಹಿನ್ನೆಲೆಅ. 16ರ ಮಧ್ಯರಾತ್ರಿ 2.45ರ ಸುಮಾರಿಗೆ ಕೋಣಿಯ ಬ್ಯಾಂಕಿನ ಎಟಿಎಂಗೆ ನುಗ್ಗಿ ಯಂತ್ರ ತೆರೆಯಲು ಯತ್ನಿಸುತ್ತಿರುವಾಗ ಹೈದರಾಬಾದ್‌ನ ಸೆಕ್ಯೂರಿಟಿ ಸಂಸ್ಥೆಯವರು ಎಚ್ಚರಿಸಿ, ಪೊಲೀಸರಿಗೆ ಮಾಹಿತಿ ನೀಡಿದ್ದು, ಅಷ್ಟರಲ್ಲಿ ಕಳ್ಳರು ಬರಿಗೈಯಲ್ಲಿ ವಾಪಾಸು ಹೋಗಿರುವುದಾಗಿದೆ. ಎಟಿಎಂ ನಿರ್ವಹಿಸುವ ಸಂಸ್ಥೆಯ ಭದ್ರತಾ ನಿಗಾ ವಹಿಸುವವರು ಹೈದರಾಬಾದಿನಲ್ಲಿ ಸಿಸಿ ಟಿವಿ ಮಾನಿಟರಿಂಗ್ ಮಾಡುತ್ತಿದ್ದು, ಅವರ ಗಮನಕ್ಕೆ ಬಂದ ತತ್‌ಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ವೇಳೆ ರಾತ್ರಿಯೇ ಎಸ್‌ಐ ಹಾಗೂ ಪೊಲೀಸ್ ತಂಡ ಸ್ಥಳಕ್ಕೆ ನೀಡಿದ್ದು, ಅಷ್ಟರಲ್ಲಿ ಕಳ್ಳರು ಪರಾರಿಯಾಗಿದ್ದಾರೆ.
ಈ ಆರೋಪಿತರು ಕುಂದಾಪುರ ಠಾಣೆ ಮಾತ್ರವಲ್ಲದೆ, ಇದಕ್ಕೂ ಹಿಂದೆ ಬೆಳ್ತಂಗಡಿ ಠಾಣೆ, ಪಡುಬಿದ್ರಿ ಠಾಣೆ, ಬಳ್ಳಾರಿ ಠಾಣೆಗಳ ವ್ಯಾಪ್ತಿಯಲ್ಲಿ ನಡೆದ ಬ್ಯಾಂಕ್ ಕಳ್ಳತನ, ಬೈಕ್ ಕಳ್ಳತನ, ಅಂಗಡಿ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿರುವುದು ವಿಚಾರಣೆ ವೇಳೆ ತಿಳಿದು ಬಂದಿದೆ.