Advertisement

ಶಿಕ್ಷಣದಿಂದಷ್ಟೇ ಉತ್ತಮ ಸಾಧನೆ

01:09 PM Mar 08, 2020 | Naveen |

ಕೊಂಡ್ಲಹಳ್ಳಿ: ಮಕ್ಕಳನ್ನು ಸಾಧಕರನ್ನಾಗಿಸಲು ಪೋಷಕರು ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡಬೇಕು ಎಂದು ಜಿಪಂ ಅಧ್ಯಕ್ಷೆ ವಿಶಾಲಾಕ್ಷಿ ನಟರಾಜ್‌ ಕರೆ ನೀಡಿದರು. ಸರ್ಕಾರಿ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಸಮಾರಂಭವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು. ಬರದ ನಾಡು ಮೊಳಕಾಲ್ಮೂರು ತಾಲೂಕಿನ ಸರ್ಕಾರಿ ಶಾಲೆಗಳಲ್ಲಿ ಜಿಲ್ಲೆಯಲ್ಲಿಯೇ ಹೆಚ್ಚು ಮಕ್ಕಳು ದಾಖಲಾಗಿರುವುದು ಸಂತಸದ ಸಂಗತಿ. ಜಿಲ್ಲೆಯಲ್ಲಿ ಈ ಬಾರಿ ಎಸ್‌ಎಸ್‌ಎಲ್‌ ಸಿ ಫಲಿತಾಂಶದಲ್ಲಿ 1ರಿಂದ 5ನೇ ಸ್ಥಾನ ಪಡೆಯುವ ಪ್ರಯತ್ನಗಳು ನಡೆಯುತ್ತಿರುವುದು ಉತ್ತಮ ಬೆಳವಣಿಗೆ ಎಂದರು.

Advertisement

ಜಿಪಂ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಡಾ| ಕೆ. ಅನಂತ್‌ ಮಾತನಾಡಿ, ಪೋಷಕರು ಮಕ್ಕಳ ಪ್ರತಿಭೆಗೆ ಆಸರೆಯಾಗಬೇಕು. ಇಂಗ್ಲಿಷ್‌ ವ್ಯಾಮೋಹದಿಂದ ಪೋಷಕರು ಕಾನ್ವೆಂಟ್‌ ಶಿಕ್ಷಣದತ್ತ ಆಕರ್ಷಿತರಾಗುತ್ತಿದ್ದಾರೆ. ಆದರೆ ಸರ್ಕಾರಿ ಶಾಲಾ ವಿದ್ಯಾರ್ಥಿಗಳೇ ಎಲ್ಲಾ ಕ್ಷೇತ್ರಗಳಲೂ ಉತ್ತಮ ಸಾಧನೆ ಮಾಡಿರುವುದು ಹಾಗೂ ಮಾಡುತ್ತಿರುವುದು ಕಂಡು ಬರುತ್ತಿರುವುದು ಪ್ರಶಂಸನೀಯ ಎಂದು ಶ್ಲಾಘಿಸಿದರು.

ಡಿಡಿಪಿಐ ರವಿಶಂಕರ್‌ ರೆಡ್ಡಿ ಮಾತನಾಡಿ, ಮಾನವೀಯ ಮೌಲ್ಯಗಳು ಮಾಯವಾಗುತ್ತಿರುವ ಇಂದಿನ ದಿನಮಾನದಲ್ಲಿ ಮಕ್ಕಳಿಗೆ ಸಂಸ್ಕಾರಯುತ ಹಾಗೂ ಬದುಕಿನ ಕೌಶಲ್ಯ ನೀಡುವ ಶಿಕ್ಷಣದ ಅವಶ್ಯಕತೆ ಇದೆ ಎಂದು ಪ್ರತಿಪಾದಿಸಿದರು. ತಾಪಂ ಸದಸ್ಯ ಟಿ. ರೇವಣ್ಣ ಅಧ್ಯಕ್ಷತೆ ವಹಿಸಿದ್ದರು. ಸಮಾರಂಭದಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ಎಸ್‌. ಆರ್‌. ನಾಗರಾಜ್‌, ವನಮಿತ್ರ ಪ್ರಶಸ್ತಿ ಪುರಸ್ಕೃತ ಕಾ.ತಿ. ಮಾಸ್ತರ್‌, ಬಿಜೆಪಿ ಪ್ರಧಾನ ಕಾರ್ಯದರ್ಶಿ ಜಯಪಾಲಯ್ಯ, ತಾಪಂ ಸದಸ್ಯರಾದ ಈ. ರಾಮರೆಡ್ಡಿ, ರೇಷ್ಮೆ ವೀರೇಶ್‌, ಗ್ರಾಪಂ ಅಧ್ಯಕ್ಷೆ ಈರಕ್ಕ, ಡಯಟ್‌ ಪ್ರಾಚಾರ್ಯ ಪ್ರಕಾಶ್‌, ರಾಜ್ಯ ಪಟ್ಟಸಾಲೆ ಸಮಾಜದ ಗೌರವಾಧ್ಯಕ್ಷ ಡಿ. ಷಡಕ್ಷರಪ್ಪ, ಜಿಂಕಾ ಶ್ರೀನಿವಾಸ್‌, ಪ್ರದೇಶ ಕುರುಬರ ಸಂಘದ ನಿರ್ದೇಶಕ ಎಸ್‌.ಕೆ. ಗುರುಲಿಂಗಪ್ಪ, ನಿವೃತ್ತ ಶಿಕ್ಷಕರಾದ ಬಾಲಚಂದ್ರಪ್ಪ, ಪಿ. ಬಸವರಾಜಪ್ಪ, ಎಸ್‌. ರಾಮಣ್ಣ, ಎಸ್‌.ಟಿ. ಬ್ರಹ್ಮಾನಂದಪ್ಪ, ಪಿಡಿಒ ಪ್ರಹ್ಲಾದ್‌, ವಿಷಯ ಪರಿವೀಕ್ಷಕ ಎಚ್‌.ಟಿ. ಚಂದ್ರಣ್ಣ, ಕೆ.ಎಂ. ಲಕ್ಷ್ಮಣ್‌, ಮುಖ್ಯ ಶಿಕ್ಷಕ ಹುಲಿಕುಂಟೆಪ್ಪ ಮೊದಲಾದವರು ಪಾಲ್ಗೊಂಡಿದ್ದರು.

ಇದೇ ಸಂದರ್ಭದಲ್ಲಿ ನಿವೃತ್ತ ಶಿಕ್ಷಕರನ್ನು ಸನ್ಮಾನಿಸಲಾಯಿತು. ಕ್ಷೇತ್ರ ಶಿಕ್ಷಣಾಧಿಕಾರಿ ಎನ್‌. ಸೋಮಶೇಖರ್‌ ಪ್ರಾಸ್ತಾವಿಕವಾಗಿ ಮಾತನಾಡಿದರು. ಇಸಿಒ ಎಚ್‌.ಜೆ. ಓಂಕಾರಪ್ಪ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next