Advertisement

ಜಾತಿ ಸಮೀಕ್ಷೆ ವರದಿ ಬಿಡುಗಡೆಗೆ ಕೊಂಡಯ್ಯ ಆಗ್ರಹ

01:01 AM Jan 18, 2021 | Team Udayavani |

ಬೆಂಗಳೂರು: ಕಾಂಗ್ರೆಸ್‌ ಸರಕಾರದ ಅವಧಿಯಲ್ಲಿ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ನಡೆಸಿರುವ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ ವರದಿಯನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ವಿಧಾನ ಪರಿಷತ್‌ ಸದಸ್ಯ ಕೆ.ಸಿ.ಕೊಂಡಯ್ಯ ಸರಕಾರವನ್ನು ಆಗ್ರಹಿಸಿದ್ದಾರೆ. ರಾಜ್ಯ ನೇಕಾರ ಸಮುದಾಯಗಳ ಒಕ್ಕೂಟ  ರವಿವಾರ ನಗರದ ತೊಗಟವೀರ ಕ್ಷತ್ರಿಯ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ  ಸಮಾರಂಭದಲ್ಲಿ  ರಾಜ್ಯಸಭಾ ಸದಸ್ಯ ಡಾ| ಕೆ. ನಾರಾಯಣ ಅವರಿಗೆ ಅಭಿನಂದನೆ ಸಲ್ಲಿಸಿ ಮಾತನಾಡಿದ ಅವರು, ಸಿದ್ದರಾಮಯ್ಯ  ಮುಖ್ಯಮಂತ್ರಿಯಾಗಿದ್ದಾಗ 150 ಕೋ. ರೂ. ವ್ಯಯಿಸಿ  ಸಮೀಕ್ಷೆ ನಡೆಸಲಾಗಿದೆ. ಆಯೋಗವು ಸಮೀಕ್ಷೆಯನ್ನು ಪೂರ್ಣಗೊಳಿಸಿ ವರದಿ ಸಿದ್ಧಪಡಿಸಿದ್ದು,  ಸರಕಾರ ಅದನ್ನು ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.

Advertisement

ನೇಕಾರ ಅಭಿವೃದ್ಧಿ ನಿಗಮಕ್ಕೆ ನಿಯೋಗ  :

ಒಕ್ಕೂಟದ ಅಧ್ಯಕ್ಷ ಎಂ.ಡಿ.ಲಕ್ಷ್ಮೀನಾರಾಯಣ ಮಾತನಾಡಿ,   ನೇಕಾರ ಅಭಿವೃದ್ಧಿ ಪ್ರಾಧಿಕಾರಕ್ಕಾಗಿ ನಾವು ಸಲ್ಲಿಸಿರುವ ಬೇಡಿಕೆ ದೀರ್ಘ‌ ಕಾಲದಿಂದ ಈಡೇರಿಲ್ಲ.  ಮುಂದಿನ ವಾರ ಸಮುದಾಯದ ಸ್ವಾಮೀಜಿಗಳ ನಿಯೋಗವು ಮುಖ್ಯಮಂತ್ರಿಯನ್ನು ಭೇಟಿ ಮಾಡಿ, ಮತ್ತೂಮ್ಮೆ ಮನವಿ ಸಲ್ಲಿಸಲಿದೆ ಎಂದು ಹೇಳಿದರು.

ಗುಳೇದಗುಡ್ಡೆ ಗುರುಸಿದ್ದೇಶ್ವರ ಮಠದ ಬಸವರಾಜ ಪಟ್ಟದಾರ್ಯ ಸ್ವಾಮೀಜಿ, ದೊಡ್ಡಬಳ್ಳಾಪುರ ಪುಷ್ಟಾಂಡಜ ಮಹರ್ಷಿ ಆಶ್ರಮದ ದಿವ್ಯ ಜ್ಞಾನಾನಂದಗಿರಿ ಸ್ವಾಮೀಜಿ, ಹರಿಹರ ಸದ್ಗುರು ಸಿದ್ಧಾಶ್ರಮದ ಪ್ರಭುಲಿಂಗ ಸ್ವಾಮಿ, ಹಳೆ ಹುಬ್ಬಳ್ಳಿಯ ಜಗದ್ಗುರು ವೀರಬಿಕ್ಷಾವರ್ತಿ ಶಿವಶಂಕರ ಸ್ವಾಮೀಜಿ, ಬೆಟಗೇರಿಯ ಕುರುಹಿನಶೆಟ್ಟಿ ಸಮಾಜ ಮಠದ ನಾಲ್ವಡಿ ನೀಲಕಂಠ ಪಟ್ಟದಾರ್ಯ ಸ್ವಾಮಿ, ಬಾಗಲಕೋಟೆ ನೇರಳಕೆರೆ ಸಿದ್ಧರೂಢ ಮಠದ  ಘಣಲಿಂಗ ಸ್ವಾಮಿಜಿ ಮತ್ತಿತತರರು ಉಪಸ್ಥಿತರಿದ್ದರು.

ರಾಜ್ಯಸಭಾ ಸದಸ್ಯ ಡಾ| ಕೆ. ನಾರಾಯಣ ಮಾತ ನಾಡಿ, ನೇಕಾರರು ಒಗ್ಗಟ್ಟಿನಿಂದ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಸಾಧ್ಯವಿದೆ. ನೇಕಾರ ಒಳ ಸಮುದಾಯಗಳನ್ನು ಒಕ್ಕೂಟವು ಒಗ್ಗೂಡಿಸಿ ಕೊಂಡು, ರಾಜಕೀಯ ಪ್ರಾಬಲ್ಯಕ್ಕಾಗಿ ಶ್ರಮಿಸುತ್ತಿವೆ. ಸಮುದಾಯದ ಇನ್ನಷ್ಟು ಸೌಲಭ್ಯ ಪಡೆಯಲು ಶಿಕ್ಷಣ ಹಾಗೂ ಸಂಘಟನೆ ಅತಿ ಅಗತ್ಯ ಎಂದು ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next