Advertisement
ಮೋದಿ ಅವರು ಗುಜರಾತ್ ಮುಖ್ಯಮಂತ್ರಿ ಯಾಗಿದ್ದಾಗ ರಾಷ್ಟ್ರೀಯ ರಕ್ಷಾ ಯುನಿವರ್ಸಿಟಿ (ಆರ್‌ಆರ್‌ಯು) ಆರಂಭಿಸಿದ್ದರು. ಭದ್ರತ ಸಿಬಂದಿಗೆ ವಿಶೇಷ ತರಬೇತಿ ನೀಡುವುದು ಇದರ ಉದ್ದೇಶ. ಅವರು ಪ್ರಧಾನಿಯಾದ ಬಳಿಕ ಆರ್‌ಆರ್‌ಯು ಮಸೂದೆ ಜಾರಿಗೊಳಿಸಿ ವಿ.ವಿ.ಯನ್ನು ಕೇಂದ್ರ ಸರಕಾರದಡಿ ತಂದರು. ಈ ವಿ.ವಿ.ಯ ಅಂಗಸಂಸ್ಥೆಯಾಗಿ “ಶಸ್ತ್ರ’ ಸ್ಥಾಪಿಸಲಾಗಿದೆ.
Related Articles
Advertisement
ಭದ್ರತ ಪಡೆಗಳ ಅಗತ್ಯಗಳನ್ನು ಅರಿತುಕೊಂಡು “ನ್ಯಾಶನಲ್ ಇನೋವೇಶನ್ ಚಾಲೆಂಜ್’ ಆರಂಭಿಸಲಾಗುತ್ತದೆ. ಆತ್ಮನಿರ್ಭರ ಭಾರತದಡಿ ಭಾರತೀಯ ಕಂಪೆನಿ, ಸ್ಟಾರ್ಟ್ ಅಪ್‌ಗ್ಳು ಸಿದ್ಧಪಡಿಸುವ ಸುಧಾರಿತ ತಂತ್ರಜ್ಞಾನ ಗಳನ್ನು ಭದ್ರತ ಪಡೆ ಮತ್ತು “ಶಸ್ತ್ರ’ ತಂಡ ಪರಿಶೀಲಿಸುತ್ತದೆ. ಒಪ್ಪಿಗೆಯಾದರೆ ಉತ್ಪಾದನೆಗೆ ಆರ್ಥಿಕ ಬೆಂಬಲವನ್ನು “ಶಸ್ತ್ರ’ ನೀಡುತ್ತದೆ.
ಕೊನಾರ್ಕ್ ರೈ :
ಕೊನಾರ್ಕ್ ರೈ ಅವರು ಬೆಂಗಳೂರು ಮತ್ತು ಅಳಿಕೆಯಲ್ಲಿ ಶಿಕ್ಷಣ ಪಡೆದು ಗುಜರಾತ್‌ನ ನ್ಯಾಶನಲ್ ಲಾ ಸ್ಕೂಲ್‌ನಲ್ಲಿ ಉನ್ನತ ವ್ಯಾಸಂಗ ಮಾಡಿದ್ದರು. ಜಿನೇವಾದಲ್ಲಿ ದೇಶ-ವಿದೇಶಗಳ ಸಂಬಂಧ ಸುಧಾರಣೆ ನೆಲೆಯಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಬಳಿಕ ಗುಜರಾತ್‌ಗೆ ಮರಳಿ ರಾಷ್ಟ್ರೀಯ ರಕ್ಷಾ ವಿ.ವಿ.ಯ ಎಕ್ಸಿಕ್ಯೂಟಿವ್ ಡೈರೆಕ್ಟರ್ ಆಗಿದ್ದರು. ಕಳೆದ ಸೆಪ್ಟಂಬರ್‌ನಿಂದ “ಶಸ್ತ್ರ’ದ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ.
ಭದ್ರತ ಪಡೆಗಳಿಗೆ ಅಗತ್ಯವಿರುವ ಹೊಸ ತಾಂತ್ರಿಕ ಸಾಧನಗಳನ್ನು “ಶಸ್ತ್ರ’ದ ಸಹಕಾರದೊಂದಿಗೆ ಸಿದ್ಧಪಡಿಸ ಲಾಗುತ್ತದೆ. ಯೋಧರು ಕರ್ತವ್ಯ ನಿರ್ವಹಿಸುತ್ತಿರುವ ಸ್ಥಳಗಳಿಗೆ ಖುದ್ದಾಗಿ ತೆರಳಿ, ಅಧ್ಯಯನ ಮಾಡಿ ಹೊಸ ಅನ್ವೇಷಕರಿಗೆ ಅವಕಾಶ ನೀಡಲಾಗುತ್ತದೆ. ಸದ್ಯ ಆ್ಯಂಟಿ ಡ್ರೋನ್ ಟೆಕ್ನಾಲಜಿ ಯನ್ನು ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ.– ಕೊನಾರ್ಕ್ ರೈ, ಎಂ.ಡಿ., “ಶಸ್ತ್ರ’
– ದಿನೇಶ್ ಇರಾ