Advertisement

ಕೆಸರು ಗದ್ದೆಯಂತಾದ ಕೊಮೆ ಕೊರವಡಿ ಕರಾವಳಿ ಸಂಪರ್ಕ ರಸ್ತೆ

02:06 AM Jun 25, 2019 | sudhir |

ತೆಕ್ಕಟ್ಟೆ: ಕುಂಭಾಸಿ ಗ್ರಾ. ಪಂ. ವ್ಯಾಪ್ತಿಯ ಕೊಮೆ ಕೊರವಡಿ ಮೀನುಗಾರಿಕಾ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಮಳೆ ಹಾಗೂ ಅಸಮರ್ಪಕ ಒಳಚರಂಡಿಯ ಪರಿಣಾಮ ರಸ್ತೆ ಸಂಪೂರ್ಣ ಕೆಸರು ಗದ್ದೆಯಂತಾಗಿದೆ. ಇದರಿಂದ ಸಾರ್ವಜನಿಕ ಸಂಚಾರವೇ ದುಸ್ತರವಾಗಿ ಪರಿಣಮಿಸಿದೆ.

Advertisement

ಸಾರ್ವಜನಿಕರಿಗೆ ತೊಂದರೆ

ಕಳೆದ ಹಲವು ವರ್ಷಗಳಿಂದಲೂ ಇಲ್ಲಿಗೆ ಸಮೀಪದ ಕೊಮೆ ಕೊರವಡಿ ವಿ. ಸಹಕಾರಿ ಸಂಘದ ಪ್ರಧಾನ ಕಚೇರಿಯ ಸಮೀಪದಲ್ಲಿಯೇ ರಸ್ತೆ ಕೆರೆಯಂತಾಗಿದೆ.

ನಿತ್ಯ ಪ್ರಮುಖ ಮಾರ್ಗದಲ್ಲಿ ಸಂಚರಿಸುವ ಸ್ಥಳೀಯ ಶಾಲಾ ಕಾಲೇಜಿನ ವಿದ್ಯಾರ್ಥಿಗಳು, ಪಾದಚಾರಿಗಳು ಹಾಗೂ ವಾಹನ ಸವಾರರು ಕೆಸರು ರಸ್ತೆಯಿಂದ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.

ಈ ಹಿಂದೆ ಮಳೆ ನೀರು ರಸ್ತೆ ಸಮೀಪದ ತೋಡಿನಿಂದಾಗಿ ನೇರವಾಗಿ ಕಡಲ ತೀರದೆಡೆಗೆ ಹರಿದು ಹೋಗುತ್ತಿತ್ತು ಆದರೆ ಬದಲಾದ ಕಾಲದಲ್ಲಿ ತೋಡು ರಸ್ತೆಯಾಗಿ ಪರಿವರ್ತನೆಗೊಂಡ ಪರಿಣಾಮ ಮಳೆ ನೀರಿನ ಹರಿವಿಕೆಗೆ ತಡೆ ಹೇರಿದಂತಾಗಿದೆ.

Advertisement

ಸಂಭವನೀಯ ಅವಘಡಗಳು ಸಂಭವಿಸುವ ಸಾಧ್ಯತೆ ಹೆಚ್ಚಾಗಿದ್ದು, ಯಾರೋ ಒಬ್ಬರು ಮಾಡಿದ ತಪ್ಪಿಗೆ ಇಡೀ ಸಾರ್ವಜನಿಕ ವಲಯ ಪ್ರತಿನಿತ್ಯ ತೊಂದರೆ ಅನುಭವಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.

ಈ ಬಗ್ಗೆ ಸಂಬಂಧಪಟ್ಟ ಜನಪ್ರತಿನಿಧಿಗಳು ತುರ್ತು ಸಭೆ ಕರೆದು ಶಾಶ್ವತ ಪರಿಹಾರ ಕಲ್ಪಿಸಬೇಕು ಎನ್ನುವುದು ಸ್ಥಳೀಯರ ಒಕ್ಕೊರಲ ಅಭಿಪ್ರಾಯವಾಗಿದೆ.

ತುರ್ತು ಪರಿಹಾರ ಕ್ರಮಕ್ಕಾಗಿ ಸ್ಥಳೀಯರ ಆಗ್ರಹ

ಇಲ್ಲಿ ಈಗಾಗಲೇ ದ್ವಿಚಕ್ರ ವಾಹನ ಚಾಲಕರು ಹಾಗೂ ಸಾರ್ವಜನಿಕರು ಅಯತಪ್ಪಿ ಕೆಸರು ನೀರಿಗೆ ಬಿದ್ದಿದ್ದಾರೆ. ಘನವಾಹನಗಳು ಸಂಚರಿಸುವ ಸಂದರ್ಭದಲ್ಲಿ ಪಾದಚಾರಿಗಳು ರಸ್ತೆ ಸಮೀಪದಲ್ಲಿರುವ ಮನೆಯ ಧರೆ ಏರಿ ಸರ್ಕಸ್‌ ಮಾಡಿಕೊಂಡು ನಡೆದಾಡಿಕೊಂಡು ಹೋಗಬೇಕಾದ ಪರಿಸ್ಥಿತಿ ಇದೆ.

– ಲೋಕೇಶ್‌ ಆಚಾರ್ಯ ತೆಕ್ಕಟ್ಟೆ

Advertisement

Udayavani is now on Telegram. Click here to join our channel and stay updated with the latest news.

Next