Advertisement

ತ್ವರಿತಗತಿಯಲ್ಲಿ ಗ್ರಾಮಸ್ಥರಿಗೆ ನೀರು ಒದಗಿಸಲು ಸೂಚನೆ

09:14 PM Feb 29, 2020 | Team Udayavani |

ಕೊಲ್ಲೂರು: ಕೊಲ್ಲೂರಿನಲ್ಲಿ ಪೂರ್ಣಗೊಂಡಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಫೆ.28ರಂದು ವೀಕ್ಷಿಸಿದ ಉಡುಪಿ ಜಿಲ್ಲಾಧಿಕಾರಿ ಜಗದೀಶ್‌ ಎಂ. ಅವರು ಅಧಿ ಕಾರಿಗಳೊಡನೆ ನಡೆದ ಸಭೆಯಲ್ಲಿ ಚರ್ಚಿಸಿದರು.

Advertisement

ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಿ ದರ್ಶನ ಪಡೆದ ಬಳಿಕ ವಿವಿಧ ಇಲಾಖೆಯ ಅಧಿ ಕಾರಿಗ ಳೊಡನೆ ವೆಂಟೆಡ್‌ ಡ್ಯಾಮ್‌, ಶುದ್ದ ಕುಡಿಯುವ ನೀರಿನ ಘಟಕ , ಒಳ ಚರಂಡಿ ವ್ಯವಸ್ಥೆ ವೀಕ್ಷಿಸಿ ಗ್ರಾಮಸ್ಥರು, ದೇವಾಲಯಕ್ಕೆ ತುರ್ತು ಅಗತ್ಯವಿರುವ ಕುಡಿಯುವ ನೀರಿನ ವ್ಯವಸ್ಥೆ ಕೂಡಲೇ ಒದಗಿಸುವಂತೆ ಸೂಚಿಸಿದರು.

ಕೊಲ್ಲೂರು ಗ್ರಾ.ಪಂ.ಗೆ ಹೆಚ್ಚಿದ ಜವಾಬ್ದಾರಿ
ಇದೇ ಮಾರ್ಚ್‌-ಎಪ್ರಿಲ್‌ ತಿಂಗಳೊಳಗೆ ಕೊಲ್ಲೂರು ದೇಗುಲ ಸಹಿತ ಅಲ್ಲಿನ ನಿವಾಸಿಗಳ ಮನೆ ವಾಣಿಜ್ಯ ಸಂಕೀರ್ಣ ವಸತಿ ಗೃಹಗಳಿಗೆ ಕುಡಿಯುವ ನೀರು ಒದಗಿಸುವ ಸಲುವಾಗಿ ಜೋಡಿಸಲಾದ ಪೈಪ್‌ಲೈನ್‌ಗಳಿಗೆ ಮೀಟರ್‌ ಅಳವಡಿಸಿ ದರ ನಿಗದಿ ಪಡಿಸಿ ವ್ಯವಸ್ಥೆಗೊಳಿಸುವಲ್ಲಿ ಕೊಲ್ಲೂರು ಗ್ರಾ.ಪಂ. ಹಾಗೂ ಕರ್ನಾಟಕ ನಗರಾಭಿವೃದ್ಧಿ ನೀರು ಸರಬರಾಜು , ಒಳಚರಂಡಿ ಮಂಡಳಿ ಸೇರಿ ಒಡಂಬಡಿಕೆ ಮೂಲಕ ಕಾರ್ಯನಿರ್ವಹಿಸುವಂತೆ ಸೂಚಿಸಿದರು.

ಮಲ್ಟಿ ಲೆವೆಲ್‌
ಪಾರ್ಕಿಂಗ್‌ ವ್ಯವಸ್ಥೆ
ದಿನೇ ದಿನೇ ಹೆಚ್ಚುತ್ತಿರುವ ವಾಹನಗಳ ನಿಲುಗಡೆಗೆ ಎದುರಾಗಿರುವ ಜಾಗದ ಕೊರತೆ ನಿಭಾಯಿಸಲು ಈಗಿರುವ ವ್ಯವಸ್ಥೆ ಯಲ್ಲಿ ಮಲ್ಟಿ ಲೆವೆಲ್‌ ಪಾರ್ಕಿಂಗ್‌ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು ಎಂದರು. ಕೊಲ್ಲೂರಿನ ನಿವಾಸಿಗಳಿಗೆ ಸದಾ ಸಮಸ್ಯೆಯಾಗಿರುವ ವಿದ್ಯುತ್‌ ಕಣ್ಣು ಮುಚ್ಚಾಲೆ, ಲೋವೋಲ್ಟೆಜ್‌ ಸಮಸ್ಯೆ ಬಗೆಹರಿಸಲು ಹಾಲ್ಕಲ್‌ನಲ್ಲಿ ನಿರ್ಮಾಣ ಗೊಳ್ಳುತ್ತಿರುವ ಸಬ್‌ ಸ್ಟೇಶನ್‌ ಕಾಮಗಾರಿ ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಅಧಿ ಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ ದೇಗುಲದ ಕಾರ್ಯ ನಿರ್ವ ಹಣಾಧಿ ಕಾರಿ ಅರವಿಂದ ಎ. ಸುತಗುಂಡಿ, ಉಪಕಾರ್ಯನಿರ್ವಹಣಾ ಧಿಕಾರಿ ಕೃಷ್ಣ ಮೂರ್ತಿ, ದೇಗುಲದ ಸಮಿತಿ ಅಧ್ಯಕ್ಷ ಹರೀಶ್‌ ಕುಮಾರ್‌ ಶೆಟ್ಟಿ, ಸದಸ್ಯರಾದ ರಮೇಶ ಗಾಣಿಗ, ಸರಸಿಂಹ ಹಳಗೇರಿ, ಶ್ರೀಧರ ಅಡಿಗ, ಅಧಿಧೀಕ್ಷಕ ರಾಮಕೃಷ್ಣ ಅಡಿಗ, ಅರಣ್ಯ ಇಲಾಖೆಯ ಡಿ.ಎಫ್‌. ಒ. ಆಶೀಶ್‌ ರೆಡ್ಡಿ, ಮೆಸ್ಕಾಂ ಮುಖ್ಯ ಇಂಜಿನಿಯರ್‌ ರಾಕೇಶ್‌,ಕೊಲ್ಲೂರು ಗ್ರಾ.ಪಂ.ಪಿ.ಡಿ.ಒ.ರಾಜೇಶ್‌, ದೇಗುಲದ ಇಂಜಿನಿಯರ್‌ಗಳಾದ ಪ್ರದೀಪ್‌ ಹಾಗೂ ಮುರಳೀಧರ, ಬೈಂದೂರು ಹಾಗೂ ಕುಂದಾಪುರ ತಹಶೀಲ್ದಾರರು, ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ಕಮಿಷನರ್‌, ಕರ್ನಾಟಕ ನಗರಾಭಿವೃದ್ಧಿ ನೀರು ಸರಬರಾಜು ಇಲಾಖೆಯ ಇಂಜಿನಿಯರ್‌ಗಳು,ಪೊಲೀಸ್‌ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next