Advertisement
ಸಂಸದ ಬಿ.ವೈ. ರಾಘವೇಂದ್ರ ಅವರ ಶಿಫಾರಸಿನ ಮೇರೆಗೆ ಈ ಮೊಬೈಲ್ ಟವರ್ ನಿರ್ಮಾಣವಾಗಿದೆ. ಅದು ನಿರ್ಮಾಣವಾದ ಕೂಡಲೇ ತಮ್ಮ ನೆಟ್ವರ್ಕ್ ಸಮಸ್ಯೆಗಳೆಲ್ಲ ಬಗೆಹರಿಯುತ್ತವೆ ಎಂಬ ನಿರೀಕ್ಷೆ ಜನರಲ್ಲಿ ಚಿಗುರೊಡೆದಿತ್ತು. ಆದರೆ ಇದುವರೆಗೆ ಟವರ್ ಬಳಕೆಗೆ ಬಾರದಿರುವುದು ಗ್ರಾಮಸ್ಥರ ಪಾಲಿಗೆ ಊಟಕ್ಕಿಲ್ಲದ ಉಪ್ಪಿನಕಾಯಿಯಂತಾಗಿದೆ. ಜತೆಗೆ ಟವರ್ ನಿಷ್ಪ್ರಯೋಜಕವಾಯಿತೇ ಎಂಬ ಪ್ರಶ್ನೆಯೂ ಗ್ರಾಮಸ್ಥರಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಬಸ್ರಿಬೇರಿನಲ್ಲಿ ಬಹುತೇಕ ಪರಿಶಿಷ್ಟ ಪಂಗಡದವರು ವಾಸವಾಗಿದ್ದಾರೆ. 100ರಷ್ಟು ಮನೆಗಳಲ್ಲಿ 500ಕ್ಕೂ ಹೆಚ್ಚು ಮಂದಿ ವಾಸವಾಗಿದ್ದಾರೆ. ಸರಕಾರಿ ಶಾಲೆಯಿದೆ. ದೇವಾಲಯವಿದೆ. ಆದರೆ, ಮೊಬೈಲ್ ಬಳಕೆಗೆ ಟವರ್ ಇದ್ದರೂ ಸಂಪರ್ಕಕ್ಕೆ ಸಿಗದಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ. ಕೆಲವರು ಮುದೂರು ಮೈದಾನಕ್ಕೆ
ಬಸ್ರಿಬೇರು ಪರಿಸರದ ನಿವಾಸಿಗಳು ತುರ್ತು ಅಗತ್ಯತೆ, ವ್ಯಾಪಾರ, ವ್ಯವಹಾರ, ದೂರದಲ್ಲಿರುವ ಮನೆಯವರ ಸಂಪರ್ಕಕ್ಕೆ ಅಲ್ಲಿಂದ 5 ಕಿ.ಮೀ. ದೂರದಲ್ಲಿರುವ ಮುದೂರು ಮೈದಾನಕ್ಕೆ ಬಂದು ಮೊಬೈಲ್ ಬಳಸಿ ಮಾತನಾಡಬೇಕಾದ ಪರಿಸ್ಥಿತಿ ಎದುರಾಗಿದೆ. ಪ್ರತಿದಿನ ಎದುರಾಗುತ್ತಿರುವ ಈ ಗೋಳಿಗೆ ಜನಪ್ರತಿನಿಧಿಗಳು ಸ್ಪಂದಿಸದಿರುವುದು ನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿಯಾಗಿದೆ.
Related Articles
ಗೋಳಿಗುಡ್ಡೆ, ಹೆಮ್ಮಕ್ಕಿ, ನೇತ್ರಾಡಿ, ಕಾನ್ಯಿ , ತಲಕಾಣ ಮುಂತಾದ ಪ್ರದೇಶದ ನಿವಾಸಿಗಳಿಗೆ ಮೊಬೈಲ್ ಸಂಪರ್ಕ ವ್ಯವಸ್ಥೆಗೆ ಎದುರಾಗಿರುವ ಟವರ್ ಕೊರತೆ ಅವರನ್ನು ದೂರದ ಜಡ್ಕಲ್ ಪೇಟೆಗೆ ಪ್ರಯಾಣ ಬೆಳೆಸಬೇಕಾದ ಪರಿಸ್ಥಿತಿ ಇದೆ. ಗ್ರಾಮೀಣ ಪ್ರದೇಶಗಳಲ್ಲಿ ಮೊಬೈಲ್ ಬಳಕೆ ಹಾಗೂ ಟವರ್ ಸಂಪರ್ಕಗಳಲ್ಲಿನ ಅಡಚಣೆ ಇನ್ನೂ ಬಗೆಹರಿಯದ ಸಮಸ್ಯೆಯಾಗಿಯೇ ಉಳಿದಿರುವುದು ಆ ಭಾಗದ ಜನರ ಪಾಲಿಗೆ ಈ ಪ್ರಕ್ರಿಯೆ ಗಗನ ಕುಸುಮವಾದಿತೇ ಎಂಬಷ್ಟರ ಮಟ್ಟಿಗೆ ಅವರಲ್ಲಿ ನಿರಾಸೆ ಉಂಟುಮಾಡಿದೆ. ಮರಾಠಿ ಸಮುದಾಯದವರು ಹೆಚ್ಚಾಗಿ ಇಲ್ಲಿ ವಾಸ್ತವ್ಯವಿದ್ದು ಅವರಲ್ಲಿ ಬಹುತೇಕ ಮಂದಿ ಕೆಲಸಕಾರ್ಯ ನಿಮಿತ್ತ ದೇಶವಿದೇಶಗಳಲ್ಲಿ ನೆಲೆಸಿದ್ದಾರೆ. ಮನೆಯವರೊಡನೆ ಸಂಪರ್ಕ ಬೆಳೆಸಲು ನೆಟ್ವರ್ಕ್ ಸಮಸ್ಯೆ ಎದುರಾಗುತ್ತಿದೆ. ಎದುರಾಗುತ್ತಿರುವ ಮೊಬೆ„ಲ್ ಟವರ್ ಬಳಕೆಗೆ ನಿಷ್ಪ್ರಯೋಜಕವಾಗುತ್ತಿರುವುದು ನಾನಾ ರೀತಿಯ ಊಹಾಪೋಹಗಳಿಗೆ ಕಾರಣವಾಗುತ್ತಿದೆ.
– ಗಣೇಶ ಶೆಟ್ಟಿ, ಅತ್ತಿಕೇರಿ, ಗ್ರಾಮಸ್ಥರು
Advertisement
ಟವರ್ ಕನೆಕ್ಟ್ ಮಾಡಿಆಧುನಿಕ ಯುಗದಲ್ಲಿ ಟೆಲಿಫೋನ್ ಬದಲು ಮೊಬೈಲ್ ಫೋನ್ ಬಳಕೆಗೆ ಬಂದಿರುವುದರಿಂದ ಅದನ್ನೇ ಅವಲಂಬಿಸಬೇಕಾಗಿದೆ. ಆದರೆ ಟವರ್ ನಿರ್ಮಾಣವಾಗಿದ್ದರೂ ಉಪಯೋಗಕ್ಕೆ ಬಾರದಿರುವುದು ಇಲಾಖೆಯ ಬೇಜಾವಾಬ್ದಾರಿಯಾಗಿದೆ.
– ಚಂದ್ರ ಪೂಜಾರಿ, ಸಳ್ಕೋಡು -ಡಾ| ಸುಧಾಕರ ನಂಬಿಯಾರ್