Advertisement

ಕೊಲ್ಲೂರು ದೇಗುಲದ ಗರ್ಭಗುಡಿ ಒಳಪ್ರವೇಶ ವಿವಾದ

07:58 AM Oct 18, 2018 | |

ಕೊಲ್ಲೂರು: ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಿ ಕ್ಷೇತ್ರದಲ್ಲಿ ದೇಗುಲದ ಮಾಜಿ ಕಾರ್ಯ ನಿರ್ವಹಣಾಧಿಕಾರಿ ಟಿ.ಆರ್‌.ಉಮಾ ಅವರು ಅನುಮತಿ ಇಲ್ಲದೆ ಗರ್ಭಗುಡಿಯ ಲಕ್ಷ್ಮೀಮಂಟಪದವರೆಗೆ ಪ್ರವೇಶಿಸಿದ್ದು, ಇದು ವಿವಾದ ಹುಟ್ಟು ಹಾಕಿದೆ. ಉಮಾ ಅವರು ಅ.16ರಂದು ಹಾಲಿ ಕಾರ್ಯ ನಿರ್ವಹಣಾಧಿಕಾರಿ ಹಾಲಪ್ಪನವರ ಅನುಮತಿ ಇಲ್ಲದೆ ಗರ್ಭಗುಡಿಯೊಳಕ್ಕೆ ಪ್ರವೇಶಿಸಿದ್ದಾರೆ. ಇದು ಶಿಷ್ಟಾಚಾರಕ್ಕೆ ವಿರುದಟಛಿವಾಗಿದ್ದು, ಭಕ್ತರ ಭಾವನೆಯೊಂದಿಗೆ ಅವರು ಆಟವಾಡಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ. ಉಮಾ ಅವರ ನಡೆಗೆ ದೇಗುಲದ ಅರ್ಚಕ ಡಾ| ಕೆ.ಎನ್‌.ನರಸಿಂಹ ಅಡಿಗ ವಿರೋಧ ವ್ಯಕ್ತಪಡಿಸಿದ್ದಾರೆ. 

Advertisement

ಸಂಪ್ರದಾಯವನ್ನು ಗಾಳಿಗೆ ತೂರಿರುವುದು ದುರದೃಷ್ಟಕರ. ಇದು ಧಾರ್ಮಿಕ ಶ್ರದ್ದಾ ಭಕ್ತಿಯ ಮೇಲೆ ಪರಿಣಾಮ ಬೀರಲಿದ್ದು, ಈ ಬಗ್ಗೆ ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಉಮಾ ವಿರುದ್ಧ ಬಂದ ದೂರಿನನ್ವಯ ಸಂಪೂರ್ಣ ಮಾಹಿತಿ ಪಡೆಯುವಂತೆ ಉಪವಿಭಾಗಾಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್‌ ಹೇಳಿದ್ದಾರೆ. 

ವಿಶೇಷ ಪೂಜೆ
ನವರಾತ್ರಿ ಉತ್ಸವದ ಸಂದರ್ಭ 9 ದಿನಗಳಲ್ಲಿ ಪ್ರಥಮ ದಿನ ಒಬ್ಬರು, ದ್ವಿತೀಯ ದಿನ ಇಬ್ಬರು ಹಾಗೆಯೇ 9ನೇ ದಿನ 9 ಮಂದಿ ಸುಹಾಸಿನಿಯರು ವಿಶೇಷ ಪೂಜೆಯ ಸಂದರ್ಭ ಒಳಪ್ರವೇಶಕ್ಕೆ ಅವಕಾಶವಿದೆ. ಈ ಸಂದರ್ಭ ಬಾಗಿಲಿಗೆ ತೆರೆ ಎಳೆಯಲಾಗುತ್ತದೆ. ದೇವಿಗೆ ಬಲಿಪೂಜೆ ನಡೆಸಲು ಅರ್ಚಕರು ಸಹಿತ ಉಪಾದಿವಂತರು ಉಪಸ್ಥಿತರಿರುತ್ತಾರೆ.

ಉಮಾ ಅವರು ಲಕ್ಷ್ಮೀಮಂಟಪ ತನಕ ತೆರಳಲು ಅನುಮತಿ ಪಡೆದಿಲ್ಲ. ಸಂಪ್ರದಾಯದಂತೆ ಅರ್ಚಕರಲ್ಲದೆ ಯಾರೊಬ್ಬರಿಗೂ ಒಳಪ್ರವೇಶಕ್ಕೆ ಅವಕಾಶವಿಲ್ಲ. ಇಲ್ಲಿ ಶಿಷ್ಟಾಚಾರದ ಉಲ್ಲಂಘನೆಯಾಗಿದೆ. ಒಳ ತೆರಳಲು ಅವಕಾಶ ಮಾಡಿಕೊಟ್ಟಿರುವ ಸಿಬ್ಬಂದಿ, ಉಮಾ ಹಾಗೂ ಮಾಧ್ಯಮಗಳಿಗೆ ಮಾಹಿತಿ ನೀಡಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಜಿಲ್ಲಾಧಿಕಾರಿಗೆ ಈ ಬಗ್ಗೆ ಮಾಹಿತಿ ಒದಗಿಸಲಾಗುವುದು. 
● ಹಾಲಪ್ಪ, ದೇಗುಲದ ಕಾರ್ಯ ನಿರ್ವಹಣಾಧಿಕಾರಿ.

ಉಮಾ ಅವರ ಒಳಪ್ರವೇಶವು ಕಟ್ಟುಪಾಡುಗಳಿಗೆ ವಿರುದ್ಧವಾಗಿದೆ. ನವರಾತ್ರಿ ವೇಳೆ ಸುಹಾಸಿನಿ ಪೂಜೆಯಲ್ಲಿ ಸುಹಾಸಿನಿಯರು ಧಾರ್ಮಿಕ ಕಾರ್ಯದಲ್ಲಿ  ಲ್ಗೊಂಡಿರುವಾಗ ಉಮಾ ಅವರು ಒಳಪ್ರವೇಶಿರುವುದು ಸಂಪ್ರದಾಯಕ್ಕೆ ವಿರುದ್ಧವಾಗಿದೆ. ಈ ಬಗ್ಗೆ ಕಾರ್ಯನಿರ್ವಹಣಾಧಿಕಾರಿ ಹಾಗೂ ಆಡಳಿತ ಮಂಡಳಿಯ ಅಭಿಪ್ರಾಯದಂತೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು. 
● ಹರೀಶ್‌ ಕುಮಾರ್‌ ಶೆಟ್ಟಿ, ದೇಗುಲದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ.

Advertisement
Advertisement

Udayavani is now on Telegram. Click here to join our channel and stay updated with the latest news.

Next