Advertisement
4 ವರ್ಷಗಳ ಹಿಂದೆ ಈ ಘಾಟಿಯಲ್ಲಿ 10 ಕೋ.ರೂ. ವೆಚ್ಚದಲ್ಲಿ ಸುಮಾರು 7 ಕಿ.ಮೀ. ರಸ್ತೆ ಕಾಂಕ್ರೀಟಿಕರಣಗೊಂಡಿತ್ತು. ಈ ಘಾಟಿ ಒಟ್ಟು 14 ಕಿ.ಮೀ. ಇದೆ. ಆದರೆ ಈಗ ಹಲವೆಡೆಗಳಲ್ಲಿ ಮಾರ್ಗ ಮಧ್ಯೆಯೇ ದೊಡ್ಡ ಹೊಂಡ, ಗುಂಡಿಗಳು ಕಾಣಿಸಿಕೊಂಡಿದೆ. ಮತ್ತೆ ಕೆಲವೆಡೆಗಳಲ್ಲಿ ತಡೆಗೋಡೆ ಗಳಿಗೆ ವಾಹನಗಳು ಢಿಕ್ಕಿಯಾಗಿ ಮುರಿದು ಬಿದ್ದಿದೆ.
ಆಗುಂಬೆ ಘಾಟಿ ದುರಸ್ತಿ ಕಾಮಗಾರಿ ನಡೆಯುತ್ತಿದೆ. ಇದರಿಂದ ಉಡುಪಿಯಿಂದ ಶಿವಮೊಗ್ಗ ಕಡೆಗೆ ತೆರಳುವ ಎಲ್ಲ ವಾಹನಗಳು ಹೊಸಂಗಡಿ ಮೂಲಕ ಬಾಳೇಬರೆ ಘಾಟಿ ಅಥವಾ ಕೊಲ್ಲೂರು ಮೂಲಕನಾಗೋಡಿ ಘಾಟಿಯಾಗಿ ಸಂಚರಿ ಸುತ್ತಿದ್ದು ವಾಹನ ದಟ್ಟನೆ ಹೆಚ್ಚಿದೆ. ಘಾಟಿಯ ತಿರುವುಗಳಲ್ಲಿ ಮರಗಳ ಕೊಂಬೆ ಗಳು ರಸ್ತೆಗೆ ತಾಗಿ ಕೊಂಡಂತಿದ್ದು, ಸವಾರರು ಎಚ್ಚರಿಕೆ ಯಿಂದ ವಾಹನ ಚಲಾಯಿಸುವಂತಾಗಿದೆ. ಅಲ್ಲಲ್ಲಿ ಪೊದೆಗಳು ಬೆಳೆದು ನಿಂತಿದ್ದು, ಇದು ರಾತ್ರಿ ವೇಳೆ ವಾಹನ ಸಂಚಾರಕ್ಕೆ ಅಪಾಯವನ್ನು ತರುವಂತಿದೆ.
Related Articles
ಕೊಲ್ಲೂರು ದೇವಸ್ಥಾನಕ್ಕೆ ತೆರಳಲು ಶಿವಮೊಗ್ಗಕ್ಕಿರುವ ಹತ್ತಿರದ ಮಾರ್ಗ ನಾಗೋಡಿ ಘಾಟಿ. ಹೊನ್ನಾಳಿ – ಬೈಂದೂರು ರಾಜ್ಯ ಹೆದ್ದಾರಿಯಲ್ಲಿರುವ ಬರುವ ಈ ಘಾಟಿ ಮೂಲಕವೇ ಕೊಲ್ಲೂರು ಮಾತ್ರವಲ್ಲದೆ, ಕೊಡಚಾದ್ರಿಗೂ ಸಂಪರ್ಕ ಸಾಧ್ಯ. ರಾ.ಹೆದ್ದಾರಿಯಾಗಿಯೂ ಮೇಲ್ದರ್ಜೆಗೇರಿದೆ.
Advertisement
ಕೊಲ್ಲೂರಿನಿಂದ ಸಿಗಂದೂರಿಗೂ ಇದೇ ಹತ್ತಿರದ ಮಾರ್ಗ. ಕೊಲ್ಲೂರಿನಿಂದ ಶಿವಮೊಗ್ಗ, ಬೆಂಗಳೂರಿಗೆ ಇದೇ ಘಾಟಿ ಮೂಲಕವಾಗಿ ನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ.
ಯೋಜನೆ ಸಿದ್ಧಪಡಿಸಲಾಗುವುದುಘಾಟಿಯ ಸೈಡ್‌ವಾಲ್‌ಗಳು ಕುಸಿದಿರುವ ಬಗ್ಗೆ, ರಸ್ತೆಯ ಮಧ್ಯೆ ಬಿದ್ದಿರುವ ಹೊಂಡ – ಗುಂಡಿಗಳ ಬಗ್ಗೆ ಪರಿಶೀಲಿಸಿ, ಅದರ ದುರಸ್ತಿ ಅಥವಾ ಈ ಬಾರಿಯ ಮಳೆಗಾಲಕ್ಕೂ ಮುನ್ನ ತೇಪೆ ಹಾಕುವ ಕಾಮಗಾರಿ ಕುರಿತಂತೆ ಯೋಜನೆ ರೂಪಿಸಲಾಗುವುದು.
-ರವಿ ಬಿ., ಎಇಇ, ರಾಷ್ಟಿÅàಯ ಹೆದ್ದಾರಿ ಶೃಂಗೇರಿ ಉಪ ವಿಭಾಗ