Advertisement

ಕೊಲ್ಲೂರು ದೇವಸ್ಥಾನದಲ್ಲಿ ಸೆ. 29ರಿಂದ ಅ. 8ರ ತನಕ ನವರಾತ್ರಿ ಉತ್ಸವ

08:33 PM Sep 28, 2019 | Sriram |

ಕೊಲ್ಲೂರು: ಕೊಲ್ಲೂರು ಶ್ರೀ ಮೂಕಾಂಬಿಕಾ ದೇಗುಲದಲ್ಲಿ ಸೆ. 29ರಿಂದ ಅ. 8ರ ತನಕ ನವರಾತ್ರಿ ಉತ್ಸವ ನಡೆಯಲಿದೆ. ಆ. 8ರಂದು ಬೆಳಗ್ಗಿನ ಜಾವದಿಂದ ಸರಸ್ವತಿ ಮಂಟಪದಲ್ಲಿ ಆರಂಭಗೊಳ್ಳುವ ವಿದ್ಯಾರಂಭಕ್ಕೆ ದೇಶ ವಿದೇಶಗಳಿಂದ ಸಾವಿರಾರು ಭಕ್ತರು ಆಗಮಿಸುವ ನಿರೀಕ್ಷೆಯಿದೆ. ಭಕ್ತರಿಗೆ ಸೌಕರ್ಯ ಒದಗಿಸುವ ಸಲುವಾಗಿ ಸಕಲ ಸಿದ್ಧತೆಗಳು ನಡೆದಿವೆ.

Advertisement

ಮಕ್ಕಳ ನಾಲಗೆಯ ಮೇಲೆ ಚಿನ್ನದುಂಗುರದಿಂದ ಓಂಕಾರ ಬರೆಸುವುದಲ್ಲದೇ ಅಕ್ಕಿಯಲ್ಲಿ ಅಕ್ಷರಾಭ್ಯಾಸ ನಡೆಸುವ ಪದ್ಧತಿ ಹಲವಾರು ವರ್ಷಗಳಿಂದ ನಡೆಯುತ್ತಾ ಬಂದಿದೆ. ಕೊಲ್ಲೂರಿನಲ್ಲಿ ವಿದ್ಯಾರಂಭ ಮಾಡಿದ ಮಕ್ಕಳು ಮೇಧಾವಿಗಳಾಗುವರು ಎಂಬುದು ನಂಬಿಕೆ. ಪ್ರತಿ ವರ್ಷ ಭಕ್ತರ ಸಂಖ್ಯೆ ಹೆಚ್ಚುತ್ತಿರುವುದು ಇದಕ್ಕೆ ಸಾಕ್ಷಿ. ಆ ದಿನ ಮಕ್ಕಳಿಗೆ ನವಾನ್ನ ಪ್ರಾಶನ ಕೂಡ ಮಾಡಲಾಗುತ್ತದೆ.

ಅ. 7ರ ಮಹಾನವಮಿಯಂದು ಬೆಳಗ್ಗೆ 11.30ಕ್ಕೆ ಚಂಡಿಕಾ ಯಾಗ ಹಾಗೂ ಮಧ್ಯಾಹ್ನ ರಥೋತ್ಸವದಲ್ಲಿ ಎಸೆಯುವ ನಾಣ್ಯಗಳನ್ನು ಸಂಗ್ರಹಿಸಲ ಸಾವಿರಾರು ಭಕ್ತರು ಮುಗಿ ಬೀಳುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next