ಕೊಳ್ಳೇಗಾಲ: ತಾಲೂಕಿನಲ್ಲಿ ಬೇಸಿಗೆ ರಣ ಬಿಸಿಲು ತಾರಕಕ್ಕೇರಿದ್ದು,ಕಪಿಲೆ ಹಾಗೂ ಕಾವೇರಿ ನದಿ ನೀರು ಹರಿಯುವುದರಿಂದತಾಲೂಕಿನಲ್ಲಿ ಅಂತರ್ಜಲ ಸಮೃದ್ಧವಾಗಿದೆ. ಹೀಗಾಗಿ ತಾಲೂಕಿನಲ್ಲಿ ನೀರಿನ ಸಮಸ್ಯೆ ಅಷ್ಟಾಗಿ ತಲೆದೋರಿಲ್ಲ. ವಿವಿಧೆಡೆ ಮಾತ್ರ ಜನಜಾನುವಾರುಗಳಿಗೆ ನೀರು ಹಾಗೂ ಮೇವಿನ ಸಮಸ್ಯೆಯಿದ್ದು, ಬೇಸಿಗೆ ಎದುರಿಸಲು ತಾಲೂಕು ಆಡಳಿತ ಸನ್ನದ್ಧವಾಗಿದೆ.
ಮೈಸೂರು ಜಿಲ್ಲೆ ತಿ.ನರಸೀಪುರದಲ್ಲಿ ಕಾವೇರಿ ಮತ್ತು ಕಪಿಲಾ ಸಂಗಮದಿಂದ ಕಾವೇರಿ ನದಿ ಹರಿದು ಬಂದು ನಂತರ ತಮಿಳುನಾಡಿಗೆ ಸೇರುವ ನದಿಯಿಂದ ಅಂತರ್ಜಲದಲ್ಲಿ ನೀರು ಶೇಖರಣೆಯಾಗಿರುವುದರಿಂದ ತಾಲೂಕಿನಲ್ಲಿ ನೀರಿನ ಸಮಸ್ಯೆ ಇಲ್ಲ.ಅಂತರ್ಜಲ ಸಮೃದ್ಧಿಯಾಗಿರುವುದರಿಂದ ಕೊಳವೆಬಾವಿಗಳಲ್ಲಿಸುಲಭವಾಗಿ ನೀರು ಸಿಗುತ್ತದೆ. ಆದರೆ, ಕೆಲ ಗ್ರಾಮಗಳಲ್ಲಿವಿದ್ಯುತ್, ಮೋಟರ್ ಮತ್ತಿತರ ಸಮಸ್ಯೆಗಳಿಂದ ನೀರಿನ ಸಮಸ್ಯೆ ತಲೆದೋರಿದೆ.
ಜಿಲ್ಲಾಡಳಿತ ಸೂಚನೆ: ಬೇಸಿಗೆ ಹಿನ್ನೆಲೆಯಲ್ಲಿ ಎಲ್ಲ ಇಲಾಖೆಗಳ ಅಧಿಕಾರಿಗಳ ಸಭೆಯನ್ನು ಕರೆದು ಕುಡಿಯುವ ನೀರಿಗಾಗಿಯಾವುದೇ ಅಭಾವ ಉಂಟಾಗದಂತೆ ಎಚ್ಚರಿಕೆ ವಹಿಸಬೇಕೆಂದು ಜಿಲ್ಲಾಡಳಿತ ಸೂಚನೆ ನೀಡಿದೆ.
ಪ್ರತಿಭಟನೆ: ಬೇಸಿಗೆಯಲ್ಲಿ ಕುಡಿಯುವ ನೀರಿನ ಕೂರತೆಅಲ್ಲೊಂದು ಇಲ್ಲೊಂದು ಗ್ರಾಮಗಳಲ್ಲಿ ತಲೆದೂರಿದ ಕಾರಣ ಗ್ರಾಮಸ್ಥರು ಖಾಲಿ ಬಿಂದಿಗೆ ಹಿಡಿದು ಪ್ರತಿಭಟನೆ ನಡೆಸಿದ ಘಟನಗಳು ಜರುಗಿವೆ. ಕೂಡಲೇ ತಾಲೂಕು ಆಡಳಿತ ಕಾರ್ಯಪ್ರವೃತ್ತವಾಗಿ ನೀರಿನ ಸಮಸ್ಯೆ ನೀಗಿಸಲು ಕ್ರಮ ಕೈಗೊಂಡಿದೆ.ಮೇವು: ಕಳೆದ ಜನವರಿ ಮತ್ತು ಫೆಬ್ರವರಿಯಲ್ಲಿ ರೈತರು ತಮ್ಮ ಜಮೀನುಗಳಿಗೆ ಬಿತ್ತಿದ್ದ ಭತ್ತ, ರಾಗಿ, ಜೋಳ ಹಾಗೂ ವಿವಿಧ ಬೆಳಗಳನ್ನು ಕಟಾವು ಮಾಡಿ, ರೈತರು ತಮ್ಮ ಜಮೀನುಗಳಲ್ಲಿ ಮತ್ತು ಖಾಲಿ ನಿವೇಶನಗಳಲ್ಲಿ ಶೇಖರಿಸಿದ್ದಾರೆ. ಮತ್ತೆ ಕೆಲವರು ಜಾನುವಾರುಗಳ ಮೇವಿಗಾಗಿ ಬೇರೆ ಜಿಲ್ಲೆಗಳಿಂದ ವಾಹನಗಳಲ್ಲಿ ತುಂಬಿಕೊಂಡು ಬರುತ್ತಿದ್ದಾರೆ.
ಸರ್ಕಾರ ಆದೇಶ ಬಂದಿಲ್ಲ : ಬೇಸಿಗೆ ಕಾಲ ಎದುರಾಗಿದ್ದು, ರೈತರ ಜಮೀನು ಮತ್ತು ಕಾಡುಗಳು ಬಿಸಿಲಿನ ತಾಪಕ್ಕೆ ಅಲ್ಲಿ ಬೆಳೆದಿದ್ದ ಹುಲ್ಲುಗಳು ಒಣಗಿ ಬರಡು ಭೂಮಿಯಂತೆ ಆಗಿರುವ ಸ್ಥಳಗಳಲ್ಲಿ ಜಾನುವಾರುಗಳಿಗೆ ಹುಲ್ಲು ಪೂರೈಸುವಂತೆ ಸರ್ಕಾರದಿಂದ ಯಾವುದೇ ಆದೇಶ ಬಂದಿಲ್ಲ ಎಂದು ಪಶು ಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ಡಾ. ವೆಂಕಟರಾಮು ತಿಳಿಸಿದ್ದಾರೆ.
ಬೇಸಿಗೆ ಬಿಸಿಲಿಗೆ ಅಂತರ್ಜಲ ಕುಸಿದಿರುವುದರಿಂದ ಗ್ರಾಮದನೀರಿನ ಸಮಸ್ಯೆ ಎದುರಾಗದಂತೆ ತಡೆಯಲು ಕೊಳವೆ ಬಾವಿ, ಕೈಪಂಪ್ ನಿರ್ಮಿಸಲಾಗಿದೆ. ನೀರಿನ ಅಭಾವ ಎದುರಾಗದಂತೆ ಕ್ರಮ ವಹಿಸಲಾಗಿದೆ ಎಂದು ತಾಲ್ಲೂಕಿನ ದೊಡ್ಡಿಂದುವಾಡಿ ಗ್ರಾಪಂಸದಸ್ಯ ಜಿ.ಶಿವಮಲ್ಲಪ್ಪ ತಿಳಿಸಿದ್ದಾರೆ.
–ಡಿ.ನಟರಾಜು