Advertisement

Kollegala: ಒಣಗಾಂಜಾ ಮಾರಾಟ; ಆರೋಪಿ ಬಂಧನ

12:39 PM Sep 17, 2024 | Team Udayavani |

ಕೊಳ್ಳೇಗಾಲ: ಅಕ್ರಮವಾಗಿ ಒಣಗಾಂಜಾ ಮಾರಾಟ ಮಾಡುತ್ತಿದ್ದ ಯುವಕನೊಬ್ಬನನ್ನು ನಗರ ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Advertisement

ನಗರದ ನೂರ್ ಮೊಹಲ್ಲಾ ನಿವಾಸಿ ಖಾದರ್ ಫೀರ್ ಎನ್ನುವವರ ಮಗನಾದ ನಯಾಜ್ (25) ಎಂಬಾತ ಬಂಧಿತ ಆರೋಪಿ.  ಆತನಿಂದ 870 ಗ್ರಾಂ ಒಣಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ.

ಈ ಸಂಬಂಧ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಬಂಧಿತ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಕಾರ್ಯಾಚರಣೆಯಲ್ಲಿ ನಗರ ಠಾಣೆಯ ಪಿಎಸ್ಐ ವರ್ಷಾ,  ಹೆಡ್‌ ಕಾನ್‌ಸ್ಟೇಬಲ್ ಲಿಂಗರಾಜು, ಪೇದೆಗಳಾದ ಶಿವಮಂಜು, ರಾಜು, ದ್ವಾರಕೀಶ್, ಆನಂದ್, ಸಚಿನ್ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next