ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆದು ಸುಮಾರು ಎರಡು ವರ್ಷಬಳಿಕಅಧ್ಯಕ್ಷಹಾಗೂ ಉಪಾಧ್ಯಾಕ್ಷ ಸ್ಥಾನಕ್ಕೆ ಮೀಸಲಾತಿ ಪ್ರಕಟವಾಗಿದೆ. ಆಕಾಂಕ್ಷಿಗಳು ಗದ್ದುಗೆಹಿಡಿಯಲು ನಾಮುಂದು, ತಾಮುಂದು ಎಂಬಂತೆ ದುಂಬಾಲುಬಿದಿದ್ದಾರೆ. ಚಾಮರಾಜನಗರ ಜಿಲ್ಲೆಯಲ್ಲಿ ಕೊಳ್ಳೇಗಾಲನಗರಸಭೆಯಲ್ಲಿ ಕಾಂಗ್ರೆಸ್‌ಹಾಗೂಬಿಜೆಪಿ-ಬಿಎಸ್ಪಿ ಮೈತ್ರಿಯಾಗಿ ಅಧಿಕಾರ ಹಿಡಿಯಲು ಯತ್ನಿಸುತ್ತಿವೆ. ಯಳಂದೂರು ಪಟ್ಟಣ ಪಂಚಾಯ್ತಿಯಲ್ಲಿ ಕಾಂಗ್ರೆಸ್‌ಗೆಭರ್ಜರಿ ಬಹುಮತಇದೆ. ಗುಂಡ್ಲುಪೇಟೆ ಪುರಸಭೆಯಲ್ಲಿ ಬಿಜೆಪಿಗೆ ನಿಚ್ಚಳಬಹುಮತವಿದ್ದು, ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸದಸ್ಯರು ಕಾರ್ಯತಂತ್ರ ರೂಪಿಸುತ್ತಿದ್ದಾರೆ. ಇನ್ನು ಹನೂರು ಪಟ್ಟಣ ಪಂಚಾಯ್ತಿಯಲ್ಲಿ ಅತಂತ್ರ ಫಲಿತಾಂಶ ಬಂದಿದ್ದು,ಬದ್ಧ ವೈರಿಗಳಾದ ಬಿಜೆಪಿ-ಕಾಂಗ್ರೆಸ್ ಮೈತ್ರಿಯಾಗಿ ಅಧಿಕಾರದ ಚುಕ್ಕಾಣಿ ಹಿಡಿಯುವ ಸಾಧ್ಯತೆ ಇದೆ.
ಕೊಳ್ಳೇಗಾಲ: ಕೊಳ್ಳೇಗಾಲ ನಗರಸಭೆ ಅಧ್ಯಕ್ಷ ಸ್ಥಾನವು ಸಾಮಾನ್ಯ ಮಹಿಳೆ, ಉಪಾಧ್ಯಕ್ಷಸ್ಥಾನವು ಪರಿಶಿಷ್ಟ ಪಂಗಡ(ಎಸ್‌ಟಿ) ಮಹಿಳೆಗೆ ಮೀಸಲಾಗಿದೆ. 31 ಸದಸ್ಯ ಬಲದ ನಗರಸಭೆಗೆ 2018ರಲ್ಲಿ ಚುನಾವಣೆ ನಡೆದಾಗ, ಕಾಂಗ್ರೆಸ್ 11ಸ್ಥಾನ, ಬಿಜೆಪಿ 7 ಸ್ಥಾನ, ಬಿಎಸ್ಪಿ9 ಸ್ಥಾನ, ನಾಲ್ವರು ಪಕ್ಷೇತರರು ಆಯ್ಕೆಯಾಗಿದ್ದಾರೆ. ನಗರಸಭೆಯ 31 ಸದಸ್ಯರ ಪೈಕಿ 15 ಮಹಿಳೆಯರು, 16 ಪುರುಷ ಸದಸ್ಯರಿದ್ದಾರೆ. ಸರಳ ಬಹುಮತಕ್ಕೆ17 ಸ್ಥಾನಬೇಕಿದ್ದು, ಯಾವಪಕ್ಷಕ್ಕೂಬಹುಮತ ಇಲ್ಲ.
ನಗರಸಭೆಯಲ್ಲಿ ಅತಂತ್ರ ಫಲಿತಾಂಶ ಬಂದಿರುವುದರಿಂದ ದೊಡ್ಡ ಪಕ್ಷವಾಗಿರುವ ಕಾಂಗ್ರೆಸ್ ಪಕ್ಷವು ಪಕ್ಷೇತರರು, ಹಾಗೂ ಬಿಎಸ್ಪಿ ಭಿನ್ನಮತೀಯ ಸದಸ್ಯರ ಬೆಂಬಲ ಪಡೆದು ಅಧಿಕಾರ ಹಿಡಿಯಲು ಕಸರತ್ತು ನಡೆಸುತ್ತಿದೆ. ಇನ್ನು ಬಿಜೆಪಿ ಹಾಗೂ ಬಿಎಸ್ಪಿ ಮೈತ್ರಿಯಾಗಿ ಅಧಿಕಾರ ಗದ್ದುಗೆ ಏರಲು ಕಸರತ್ತು ನಡೆಸುತ್ತಿವೆ.
ಕಾಂಗ್ರೆಸ್ ಅಕಾಂಕ್ಷಿಗಳು ನಗರಸಭೆ ಅಧಿಕಾರ ಕಾಂಗ್ರೆಸ್‌ಗೆ ಒಲಿದರೆ ಅಧ್ಯಕ್ಷ ಸ್ಥಾನವು ಸಾಮಾನ್ಯ ಮಹಿಳೆಗೆ ಮೀಸಲಾಗಿ ರುವುದರಿಂದ ಕಾಂಗ್ರೆಸ್‌ನಿಂದ 1ನೇ ವಾರ್ಡ್‌ನ ಕವಿತಾ ಹಾಗೂ 19ನೇ ವಾರ್ಡ್‌ನ ಸುಮಾ ನಡುವೆ ಪೈಪೋಟಿ ನಡೆ ಯುತ್ತಿದೆ. ಉಪಾಧ್ಯಕ್ಷ ಸ್ಥಾನವು ಎಸ್‌ಟಿ ಮಹಿಳೆಗೆ ಮೀಸಲಾಗಿದ್ದು, 28ನೇ ವಾರ್ಡ್‌ನ ಚಿಕ್ಕತಾಯಮ್ಮ, 31ನೇ ವಾರ್ಡ್‌ನ ಸುಶೀಲಾ ಮಧ್ಯೆ ಪೈಪೋಟಿ ಇದೆ.
ಬಿಜೆಪಿ,ಬಿಎಸ್ಪಿ ಅಕಾಂಕ್ಷಿಗಳು: ಬಿಜೆಪಿ ಮತ್ತು ಬಿಎಸ್ಪಿ ಮೈತ್ರಿಯಾಗಿ ನಗರಸಭೆ ಅಧಿಕಾರ ಹಿಡಿದರೆ ಅಧ್ಯಕ್ಷೆ ಸ್ಥಾನಕ್ಕೆ ಬಿಜೆಪಿ 16ನೇ ವಾರ್ಡ್‌ನ ಸೀರಸಾ ಸತೀಶ್,26ನೇ ವಾರ್ಡ್‌ನ ನಾಗಸುಂದ್ರಮ್ಮ, ಉಪಾಧ್ಯಕ್ಷ ಸ್ಥಾನಕ್ಕೆ8ನೇ ವಾರ್ಡ್‌ನಕವಿತಾ ಹಾಗೂ 29ನೇ ವಾರ್ಡ್‌ನ ರಮ್ಯಾ ನಡುವೆ ಪೈಪೋಟಿ ಎದುರಾಗಲಿದೆ.
ಕಾಂಗ್ರೆಸ್‌ಗೆ ಅಧಿಕಾರ ಸಾಧ್ಯತೆ : 11 ಸ್ಥಾನ ಪಡೆದಿರುವ ಕಾಂಗ್ರೆಸ್ ಪರ ನಾಲ್ವರು ಪಕ್ಷೇತರು ಗುರುತಿಸಿಕೊಂಡಿದ್ದಾರೆ. ಬಿಎಸ್ಪಿಯಲ್ಲಿ ಗೆದ್ದಿರುವ9ಸದಸ್ಯರ ಪೈಕಿ ಇಬ್ಬರು ಸದಸ್ಯರಾದ ಜಯಮೇರಿ, ಜಯರಾಜ್ ಕೂಡ ಕಾಂಗ್ರೆಸ್‌ಗೆ ಬೆಂಬಲಿಸಲಿದ್ದಾರೆ ಎನ್ನಲಾಗಿದೆ. ಹೀಗಾಗಿ ಕಾಂಗ್ರೆಸ್ 17 ಸ್ಥಾನದೊಂದಿಗೆ ಬಹುಮತ ಪಡೆದು ಅಧಿಕಾರ ಹಿಡಿಯಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಬಿಜೆಪಿ, ಬಿಎಸ್ಪಿಮೈತ್ರಿಗೆ ಅಧಿಕಾರ ಸಾಧ್ಯತೆ : ಬಿಜೆಪಿಯಲ್ಲಿ7 ಸದಸ್ಯರಿದ್ದು, ಬಿಎಸ್ಪಿಯ7 ಸದಸ್ಯರು ಸೇರಿದರೆ 14 ಸ್ಥಾನ ಆಗಲಿದೆ. ಶಾಸಕರು ಹಾಗೂ ಸಂಸದರ ತಲಾ ಒಂದು ಮತ ಪಡೆದರೆ 16 ಸಂಖ್ಯೆಯಾಗುತ್ತದೆ. ಒಬ್ಬರು ಪಕ್ಷೇತರರನ್ನು ಸೆಳೆದುಕೊಂಡರೆ17 ಸ್ಥಾನಗಳೊಂದಿಗೆ ಬಿಜೆಪಿ ಹಾಗೂ ಬಿಎಸ್ಪಿ ಮೈತ್ರಿಯಾಗಿ ಅಧಿಕಾರ ಹಿಡಿಯುವ ಸಾಧ್ಯತೆ ಇದೆ ಎನ್ನಲಾಗಿದೆ.
–ಡಿ.ನಟರಾಜು