Advertisement

Kollegala ಮದ್ದುಗುಂಡು ಸಾಗಣೆ: ಆರೋಪಿ ಸೆರೆ

12:07 AM Aug 23, 2023 | Team Udayavani |

ಕೊಳ್ಳೇಗಾಲ: ಕಾಡು ಪ್ರಾಣಿಗಳನ್ನು ಬೇಟೆಯಾಡಲು ಅಕ್ರಮವಾಗಿ ಮದ್ದು ಗುಂಡುಗಳನ್ನು ಸಾಗಣೆ ಮಾಡುತ್ತಿದ್ದ ವ್ಯಕ್ತಿಯನ್ನು ನಗರದ ಅರಣ್ಯ ಸಂಚಾರ ದಳದ ಪೊಲೀಸರು, ಗ್ರಾಮಾಂತರ ಪೊಲೀಸರು ಜಂಟಿ ದಾಳಿ ನಡೆಸಿ ಆರೋಪಿಯನ್ನು ತಾಲೂಕಿನ ಕೊತ್ತನೂರು ಗ್ರಾಮದಲ್ಲಿ ಮಂಗಳವಾರ ಬಂಧಿಸಿದ್ದಾರೆ.

Advertisement

ತಾಲೂಕಿನ ಜಾಗೈರಿಯ ಸಿ.ಆರ್‌.ನಗರದ ನಿವಾಸಿ ಸಗಯ್‌ ರಾಜ್‌(47) ಬಂಧಿತ ಆರೋಪಿ. ಈತನಿಂದ 9 ಸಿಡಿಮದ್ದು ಗುಂಡು ವಶಕ್ಕೆ ಪಡೆದಿದ್ದಾರೆ. ಆರೋಪಿಯು ಕಾಡು ಪ್ರಾಣಿಗಳನ್ನು ಬೇಟೆಯಾಡುವ ಸಲುವಾಗಿ ತಾಲೂಕಿನ ಕೊತ್ತನೂರು ಕೆರೆ ಏರಿ ಮೇಲೆ ಸೈಕಲ್‌ನಲ್ಲಿ ಅಕ್ರಮವಾಗಿ ಸಿಡಿಮದ್ದು ಗುಂಡು ಇಟ್ಟುಕೊಂಡು ಸಾಗಣೆ ಮಾಡುತ್ತಿರುವಾಗ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ ಬಂಧಿಸಿ ಠಾಣೆಗೆ ಒಪ್ಪಿಸಿದ್ದಾರೆ.

ಈ ಸಂಬಂಧ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದ್ದು ಆರೋಪಿಯನ್ನು ನ್ಯಾಯಾಂಗ ಒಪ್ಪಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next