ಕೊಳ್ಳೇಗಾಲ : ತಾಲ್ಲೂಕಿನ ಉತ್ತಂಬಳ್ಳಿ ಗ್ರಾಮದಲ್ಲಿ ಕೊಂಡೋತ್ಸವ ನಡೆದ ಬಳಿಕ ಗ್ರಾಮಕ್ಕೆ ಆಗಮಿಸಿದ್ದ ಶಾಸಕ ಎನ್.ಮಹೇಶ ಅವರಿಗೆ ವಕ್ತಿಯೋರ್ವ ಚಪ್ಪಲಿ ತೋರಿಸಿದನೆಂದು ಪೊಲೀಸರಿಂದ ಥಳಿತಕ್ಕೊಳಗಾಗಿ ಆಸ್ಪತ್ರೆಗೆ ದಾಖಲಾದ ಘಟನೆ ಶುಕ್ರವಾರ ನಡೆದಿದೆ.
ಗ್ರಾಮದ ಸಿದ್ದರಾಜು ಎಂಬಾತನೇ ಶಾಸಕರಿಗೆ ಚಪ್ಪಲಿ ತೋರಿಸಿದ ಪರಿಣಾಮ ಪೋಲೀಸರಿಂದ ಥಳಿತಕ್ಕೆ ಒಳಗಾಗಿ ಪಟ್ಟಣದ ಸರ್ಕಾರಿ ಆಸ್ಪತ್ರೆ ದಾಖಲಾಗಿದ್ದಾನೆ.
ಗಾಯಾಳು ವಿರುದ್ಧ ಅಗರ ಮಾಂಬಳ್ಳಿ ರಾಣಿ ಪಿ.ಎಸ್.ಐ ಮಾದೇಗೌಡ ಶಾಂತಿ ಭಂಗ ಪ್ರಕರಣ ದಾಖಲಿಸಿ ಠಾಣೆಯಲ್ಲಿ ಮನಬಂದಂತೆ ಥಳಿಸಿದ್ದಾರೆ ಈ ವೇಳೆ ಸಿದ್ದರಾಜು ಪ್ರಜ್ಞಾಹೀನನಾಗಿದ್ದಾನೆ ಕೂಡಲೇ ಆತನನ್ನು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಪ್ರಜ್ಞೆ ಬಂದ ಬಳಿಕ ಆತನನ್ನು ತಹಸಿಲ್ದಾರ್ ಮುಂದೆ ಹಾಜರು ಪಡಿಸಲು ಪೊಲೀಸರು ಮುಂದಾಗಿದ್ದಾರೆ.
ಇತ್ತ ಸಿದ್ದರಾಜು ಪೊಲೀಸರ ದೌರ್ಜನ್ಯದಿಂದ ಆಸ್ಪತ್ರೆಗೆ ದಾಖಲಾಗಿರುವ ವಿಚಾರ ತಿಳಿಯುತ್ತಿದ್ದಂತೆ ಗ್ರಾಮಸ್ಥರು ಡಿ.ವೈಎಸ್.ಪಿ. ಕಚೇರಿಯ ಮುಂದೆ ಪ್ರತಿಭಟನೆ ಕೈಗೊಂಡು ಕೂಡಲೇ ಪೊಲೀಸರ ಮೇಲೆ ಕಾನೂನು ಕ್ರಮ ಕೈಗೊಂಡು ಶಾಸಕರು ಕ್ಷಮೆ ಯಾಚನೆ ಮಾಡಬೇಕೆಂದು ಒತ್ತಾಯಿಸಿದ್ದಾರೆ.
ಶಾಸಕರು ತಮ್ಮ ಅಧಿಕಾರ ಬಳಸಿಕೊಂಡು ಗ್ರಾಮಸ್ಥರ ಮೇಲೆ ದೌರ್ಜನ್ಯ ಎಸಗಿರುವುದು ಖಂಡನೀಯ ಎಂದು ರಾಜ್ಯ ಬಿ.ಎಸ್ ಪಿ. ಕಾರ್ಯದರ್ಶಿ ನಾಗರಾಜು ಹೇಳಿದ್ದಾರೆ.
ಇದನ್ನೂ ಓದಿ : ಮಳೆ ಅವಾಂತರಕ್ಕೆ 10ಕ್ಕೂ ಮನೆಗಳಿಗೆ ಹಾನಿ, ಸಿಡಿಲಿಗೆ ತೆಂಗಿನ ಮರ ಭಸ್ಮ