Advertisement
ಬಿಎಸ್‌ಎನ್‌ಎಲ್‌ನ ಇಂಟರ್‌ನೆಟ್ ಕೇಬಲ್ ಗುತ್ತಿಗಾರು ಬಳಿ ಕಡಿತ ಗೊಂಡಿದ್ದು, ಪರಿಣಾಮ ಸುಳ್ಯ ತಾಲೂಕಿನ ಕೊನೆ ಗ್ರಾ.ಪಂ. ಕೊಲ್ಲಮೊಗ್ರುಗೆ ಒಂದು ತಿಂಗಳಿನಿಂದ ಅಂತರ್ಜಾಲ ಸೇವೆ ಇಲ್ಲದೆ, ಕೆಲಸ ಕಾರ್ಯಗಳು ಬಹುತೇಕ ಅರ್ಧದಲ್ಲೇ ನಿಂತಿವೆ. ದಿನನಿತ್ಯದ ಕೆಲಸ ಕಾರ್ಯಗಳ ವರದಿ ಸಲ್ಲಿಸಲೂ ಇಲ್ಲಿನ ಅಧಿಕಾರಿಗಳು, ಸಿಬಂದಿ ಪರದಾಡುವ ಪರಿಸ್ಥಿತಿ ನಿರ್ಮಾಣಗೊಂಡಿದೆ.
Related Articles
Advertisement
ಗ್ರಾಮಸ್ಥರಿಗೆ ಇಲಾಖೆ, ಅಧಿ ಕಾರಿಗಳ ಆದೇಶ, ಸುತ್ತೋಲೆ, ವರದಿ ಗಳಿಗೆ ಪ್ರತಿಕ್ರಿಯಿಸಲು ಸದ್ಯ ಇಲ್ಲಿ ಸಾಧ್ಯವಾಗುತ್ತಿಲ್ಲ. ಇಂಟರ್‌ನೆಟ್ ಇಲ್ಲದೆ ಸಿಬಂದಿ ಕೆಲಸ ಕಾರ್ಯಗಳಿಗೆ ಪರಾದಾಡುತ್ತಿದ್ದಾರೆ. ಸುಬ್ರಹ್ಮಣ್ಯ ಹಾಗೂ ಹರಿಹರ ಪಲ್ಲತ್ತಡ್ಕ ಗ್ರಾ.ಪಂ.ಗಳಲ್ಲಿ ಸಮಸ್ಯೆಗೆ ಬದಲಿ ವ್ಯವಸ್ಥೆ ಕಲ್ಪಿಸಿದ್ದಾರೆ ಎಂದು ತಿಳಿದುಬಂದಿದೆ. ಆದರೆ ಕೊಲ್ಲಮೊಗ್ರುವಿಗೆ ಯಾವುದೇ ಇತರ ಸಮರ್ಪಕ ವ್ಯವಸ್ಥೆ ಇಲ್ಲದೇ ಸಮಸ್ಯೆ ಜೀವಂತವಾಗಿ ಉಳಿದಿದೆ.
ಗ್ರಾಮಸ್ಥರ ಆಕ್ರೋಶ:
ಸರಕಾರಿ ಕೆಲಸ ಕಾರ್ಯನಡೆಸುವ ಸರಕಾರಿ ಕಚೇರಿಗೆ ಉಂಟಾಗಿರುವ ಸಮಸ್ಯೆಗೆ ಸ್ಪಂದಿಸದೆ ಇರುವ ಸಂಬಂಧಿಸಿದವರ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗ್ರಾಮದ ಅಭಿವೃದ್ಧಿಯ ಬಗ್ಗೆ ಕೆಲಸ ನಿರ್ವಹಿಸುವ ಕೇಂದ್ರದ ಸಮಸ್ಯೆಗೆ ಸ್ಪಂದಿಸದೇ ಇರುವುದು ದುರಂತ ಎಂದು ಅಸಮಾಧಾನ ಹೊರ ಹಾಕಿದ್ದಾರೆ.
ಕೊಲ್ಲಮೊಗ್ರುವಿನ ಸಮಸ್ಯೆ ಬಗ್ಗೆ ನನ್ನ ಗಮನಕ್ಕೆ ಬಂದಿಲ್ಲ. ಈ ಬಗ್ಗೆ ಸಂಬಂಧಿಸಿದವರಲ್ಲಿ ಮಾಹಿತಿ ಪಡೆಯುತ್ತೇನೆ. –ಡಾ| ಕುಮಾರ್,ಸಿಇಒ ಜಿ.ಪಂ.