Advertisement

ಅನುಮಾನಾಸ್ಪದ ರೀತಿಯಲ್ಲಿ ಶಿಕ್ಷಕಿ ಹಾಗೂ 14 ವರ್ಷದ ಮಗನ ಹತ್ಯೆ : ಪೊಲೀಸರಿಂದ ಶೋಧ ಕಾರ್ಯ

04:05 PM Sep 07, 2021 | Team Udayavani |

ಕೋಲ್ಕತ್ತಾ : ತನ್ನ ಮನೆಯಲ್ಲೇ ಶಾಲಾ ಶಿಕ್ಷಕಿ ಹಾಗೂ ಹದಿನಾಲ್ಕು ವರ್ಷದ ಮಗನ ಮೃತದೇಹ ಪತ್ತೆಯಾಗಿರುವ ಘಟನೆ ಕೋಲ್ಕತ್ತಾ ನಗರದ ವಸತಿ ಸಮುಚ್ಚಯದಲ್ಲಿ ಪತ್ತೆಯಾಗಿದೆ.

Advertisement

ಕೋಲ್ಕತ್ತಾದ ಬೆಹಲ ಪರ್ಣಶ್ರೀಯಲ್ಲಿರುವ ಬಹುಮಹಡಿ ಕಟ್ಟಡದಲ್ಲಿ ಈ ಘಟನೆ ನಡೆದಿದ್ದು, ಸಂಜೆ ಗಂಡ ಕೆಲಸ ಮುಗಿಸಿ ಮನೆಗೆ ಬಂದ ಸಂದರ್ಭ ಮನೆಯ ಬಾಗಿಲು ತೆರೆದಿರುವುದನ್ನು ಕಂಡು ಒಳ ಹೊಕ್ಕಾಗ ಶಾಲಾ ಸಮವಸ್ತ್ರದಲ್ಲಿ ಕುತ್ತಿಗೆ ಟೈ ಸುತ್ತಿದ ರೀತಿಯಲ್ಲಿ ಮಗನ ಮೃತದೇಹ ಪತ್ತೆಯಾಗಿದೆ, ಅಲ್ಲೇ ಪಕ್ಕದಲ್ಲಿ ಪತ್ನಿಯ ಶವವು ರಕ್ತದ ಮಡುವಿನಲ್ಲಿ ಬಿದ್ದಿದ್ದು ಯಾರೋ ಹಂತಕರು ಹೊಂಚು ಹಾಕಿ ಶಾಲೆ ಬಿಟ್ಟು ಮನೆಗೆ ಬಂದ ಸಂದರ್ಭ ಈ ಹತ್ಯೆ ನಡೆದಿದೆ ಎನ್ನಲಾಗಿದೆ.

ಘಟನೆ ಕುರಿತು ಪೊಲೀಸರು ಪತಿ ಹಾಗೂ ಮಗನನ್ನು ವಿಚಾರಣೆ ನಡೆಸಿದ್ದಾರೆ, ಅಲ್ಲದೆ ಪಕ್ಕದ ಮನೆಯವರಲ್ಲೂ ವಿಚಾರಿಸಿದ್ದಾರೆ.

ಮೇಲ್ನೋಟಕ್ಕೆ ಅಡುಗೆಕೋಣೆಯಲ್ಲಿರುವ ಹರಿತವಾದ ಆಯುಧದಿಂದ ಹತ್ಯೆ ನಡೆಸಿರುವ ಸಾಧ್ಯತೆ ಇದೆ ಎನ್ನಲಾಗಿದ್ದು ಮರಣೋತ್ತರ ವರದಿ ಬಂದ ಬಳಿಕ ಸತ್ಯಾ ಸತ್ಯತೆ ತಿಳಿದು ಬರಬೇಕಾಗಿದೆ.

ಇದನ್ನೂ ಓದಿ :ಕಲಬುರಗಿ ಪಾಲಿಕೆ: ದೋಸ್ತಿ ವಿಚಾರದಲ್ಲಿ ಸ್ಥಳೀಯರ ಮುಖಂಡರ ಮಾತಿಗೆ ಮನ್ನಣೆ ಎಂದ ಎಚ್ ಡಿಡಿ

Advertisement
Advertisement

Udayavani is now on Telegram. Click here to join our channel and stay updated with the latest news.

Next